ಪ್ರಜಾಪ್ರಭುತ್ವದ ಮೇಲೆ ಬೆಳಕು ಚೆಲ್ಲುವ ಪ್ರಭುತ್ವ ****
‘ಪ್ರಭುತ್ವ’ ಚಿತ್ರದಲ್ಲಿ ಮತದಾನ ಎನ್ನುವುದು ಪವಿತ್ರವಾದುದು. ರಾಜಕಾರಣಿಗಳು ನೀಡುವ ಹಣ, ಒಡೆವೆಯ ಅಮಿಷಗಳಿಗೆ ಬಲಿಯಾಗಿ ಅದನ್ನು ಯಾವುದೇ ಕಾರಣಕ್ಕೂ ಮಾರಿಕೊಳ್ಳಬೇಡಿ ಎನ್ನುವ ಸಂದೇಶ ಇರಲಿದೆ. ಪ್ರಭುತ್ವ ಈಗ ಸತ್ತು ಹೋಗಿದೆ. ಪ್ರಜೆಗಳೇ ನಿಮ್ಮ ಮತಗಳನ್ನು ಉತ್ತಮ ಅಭ್ಯರ್ಥಿಗೆ ನೀಡಿ ಎಂದು ತೋರಿಸಲಾಗಿದೆ. ಭ್ರಷ್ಟಚಾರ, ಅಧಿಕಾರ ದುರುಪಯೋಗ, ಅನ್ಯಾಯ, ಅತ್ಯಾಚಾರ ಹೀಗೆ ನಾನಾ ಬಗೆಯ ದಬ್ಬಾಳಿಕೆಗಳ ನಡುವೆ ಸಾಮಾನ್ಯ ಪ್ರಜೆಗಿರುವ ದಾರಿಯೇನು? ಸಮಾಜದ ವ್ಯವಸ್ಥೆಯಿಂದ ಬೇಸತ್ತು ನಿಯತ್ತಿಗೆ ಬೆಲೆ ಇಲ್ಲವೆಂದು ತಿಳಿದ ಬಿಸಿರಕ್ತದ ಹುಡುಗನೊಬ್ಬ ಕ್ರಾಂತಿಯ ಹಾದಿಯನ್ನು ಹಿಡಿದಾಗ ಆಗುವ ಸಮಸ್ಯೆಗಳು, ಪರಿಣಾಮಗಳು ಏನು? ಪ್ರೀತಿ, ರಾಜಕೀಯ, ಬಡವರ ಹಾಗೂ ರೈತರ ಸಮಸ್ಯೆಗಳು ಬಗ್ಗೆ ವಿವರವಾಗಿ ಹೇಳಲಾಗಿದೆ.
ನಿರ್ದೇಶಕ ಮೇಘದಹಳ್ಳಿ.ಎಂ ಪ್ರಸಕ್ತ ನಡೆಯುವ ಒಂದಷ್ಟು ಘಟನೆಗಳನ್ನು ಹೆಕ್ಕಿಕೊಂಡು ಅದನ್ನು ಚಿತ್ರರೂಪದಲ್ಲಿ ಚೆನ್ನಾಗಿ ನಿರೂಪಿಸಿದ್ದಾರೆ. ಚೇತನ್‌ಚಂದ್ರ ನಾಯಕನಾಗಿ ಗಮನ ಸೆಳೆಯುತ್ತಾರೆ. ಪರಿಸರ ಪ್ರೇಮಿ, ಡಿಗ್ಲಾಮ್ ಪಾತ್ರದಲ್ಲಿ ಪಾವನಗೌಡ ನಾಯಕಿ. ಉಳಿದಂತೆ ಶರತ್‌ಲೋಹಿತಾಶ್ವ, ವಿಜಯ್‌ಚೆಂಡೂರು, ಡ್ಯಾನಿ, ಅನಿತಾಭಟ್, ಅರವಿಂದರಾವ್, ಆದಿಲೋಕೇಶ್ ಮುಂತಾದವರು ನಟಿಸಿದ್ದಾರೆ.
ಡಾ.ವಿ.ನಾಗೇಂದ್ರಪ್ರಸಾದ್-ಕವಿರಾಜ್-ಚೇತನ್‌ಕುಮಾರ್-ಹರಿಸಂತೋಷ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಎಮಿಲ್ ಸಂಗೀತ ಪರವಾಗಿಲ್ಲ. ಛಾಯಾಗ್ರಹಣ ಕೆ.ಎಸ್.ಚಂದ್ರಶೇಖರ್, ಸಂಭಾಷಣೆ ವಿನಯಮೂರ್ತಿ, ಸಂಕಲನ ಕೆ.ಎಂ.ಪ್ರಕಾಶ್, ಸಾಹಸ ಮಾಸ್‌ಮಾದ-ಥ್ರಿಲ್ಲರ್‌ಮಂಜು-ವಿನೋದ್-ವಿಕ್ರಂ, ನೃತ್ಯ ಮೋಹನ್-ಮುರಳಿ-ಧನುಕುಮಾರ್-ಕಂಬಿರಾಜು ಅವರದಾಗಿದೆ. ರವಿರಾಜ್.ಎಸ್.ಕುಮಾರ್ ಮತ್ತು ಮೇಘಡಹಳ್ಳಿ ಡಾ.ಶಿವಕುಮಾರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
****