ದೆವ್ವದ ಸೇಡಿನ ಕಥನ****
‘ನಾ ನಿನ್ನ ಬಿಡಲಾರೆ’ ಚಿತ್ರದ ಹೆಸರೇ ಹೇಳುವಂತೆ ಸೇಡಿನ ಕಥೆಯಾಗಿದೆ. ದೇವರು, ದೆವ್ವ ಮತ್ತು ಮನುಷ್ಯನ ಮಧ್ಯೆ ಇರುವ ಸತ್ಯಾಸತ್ಯತೆಗಳನ್ನು ಹೇಳಲಿದೆ. ಇವೆಲ್ಲಾವನ್ನು ಮೀರಿ ವಿನೂತನದ ವಿಷಯಗಳು ಇದೆ. ವಿರಾಮದ ತನಕ ರೋಚಕ ಸನ್ನಿವೇಶಗಳು ಇರಲಿದ್ದು, ನಂತರ ನೋಡುಗರಿಗೆ ಕುತೂಹಲ ಮೂಡಿಸುತ್ತದೆ. ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವು ಯಾವ ರೀತಿ ಮೂಡಿ ಬಂದಿದೆ ಎಂಬುದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ನಿರ್ದೇಶಕ ನವೀನ್.ಜಿ.ಎಸ್ ಹೂ ಪೋಣಿಸಿದಂತೆ ಸೀನ್‌ಗಳನ್ನು ಸೃಷ್ಟಿಸಿದ್ದಾರೆ. ಪ್ರಾರಂಭದಿಂದ ಕೊನೆವರೆಗೂ ಬೋರ್ ಅನಿಸದಂತೆ ಮಾಡಿರುವುದಕ್ಕೆ ಅವರ ಶ್ರಮ ಪರದೆ ಮೇಲೆ ಕಾಣಿಸುತ್ತದೆ.
ನಾಯಕಿ ಅಂಬಾಲಿಭಾರತಿ ಹೊಸ ಪ್ರಯತ್ನವಾದರೂ ಚೆನ್ನಾಗಿ ನಟಿಸಿದ್ದಾರೆ. ಇವರೊಂದಿಗೆ ಪಂಚಿ, ಸೀರುಂಡೆರಘು, ಕೆ.ಎಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸಪ್ರಭು, ಹರಣಿ, ಲಕ್ಷೀಸಿದ್ದಯ್ಯ, ಮಂಜುಳಾರೆಡ್ಡಿ ಮುಂತಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಎಂ.ಎಸ್.ತ್ಯಾಗರಾಜು ಸಂಗೀತ, ವೀರೇಶ್.ಎಸ್. ಛಾಯಾಗ್ರಹಣ, ದೀಪಕ್.ಜಿ.ಎಸ್, ಸಾಹಸ ಡಿಫರೆಂಟ್ ಡ್ಯಾನಿ ಇವೆಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ. ಕಮಲ ಉಮಾಭಾರತಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅಂಬಾಲಿಭಾರತಿ ನಿರ್ಮಾಣ ಮಾಡಿದ್ದಾರೆ.
****