ಗಣ ಎಂಬ ಟೈಮ್ ಟ್ರಾವೆಲಿಂಗ್ ಸ್ಟೋರಿ
ಚಿತ್ರ : ಗಣ
ನಿರ್ಮಾಣ: ಪಾರ್ಥು
ನಿರ್ದೇಶನ: ಹರಿಪ್ರಸಾದ್ ಜಕ್ಕ
ತಾರಾಗಣ: ಪ್ರಜ್ವಲ್ ದೇವರಾಜ್, ಯಶ ಶಿವಕುಮಾರ, ವೇದಿಕಾ, ರವಿಕಾಳೆ, ರಮೇಶ್ ಭಟ್ ಇತರರು.
ಈ ಸಿನಿಮಾ ಆರಂಭದಲ್ಲಿ ಎತ್ತ ಸಾಗುತ್ತೆ, ಏನು ನಡೆಯುತ್ತೆ ಅನ್ನುವುದಕ್ಕೆ ಸ್ವಲ್ಪ ತಾಳ್ಮೆ ಬೇಕು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಕಥೆ ಇದೆ. ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಮಾತ್ರ ಈ ಸಿನಿಮಾದ ಗುಣವಿಶೇಷತೆಗಳು ಅರ್ಥ ಆಗುತ್ತವೆ.
ಈ ಚಿತ್ರ ನೋಡುಗರಿಗೆ ರಿಸ್ಕೀ ಟಾಸ್ಕ್ ಇದ್ದಂತೆ. ಸೂಕ್ಷ್ಮವಾಗಿ ಗಮನಿಸಿದವರಿಗೆ ಮಾತ್ರ ಗಣ ಅರ್ಥವಾಗುತ್ತಾನೆ.
ಇದೊಂದು ಟೈಮ್ ಟ್ರಾವೆಲಿಂಗ್ ಕಥೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ್ದು ನಿರ್ದೇಶಕರ ಕೆಲಸ. ಕನ್ನಡದಲ್ಲಿ ಹೊಸ ಬಗೆಯ ಪ್ರಯತ್ನ ಎನ್ನಬಹುದು.
ಇಲ್ಲಿ ಎರಡು ಕಾಲಘಟ್ಟದ ಕಥೆಯ ಜಾಡು ಹಿಡಿದರೆ ಸುಲಭವಾಗು ಅರ್ಥವಾಗುತ್ತೆ. ತಲೆಗೆ ಒಂದಷ್ಟು ಕೆಲಸ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.
ಕ್ಲ್ಯೆಮ್ಯಾಕ್ಸ್ ನಲ್ಲಿ ಎಲ್ಲದ್ದಕ್ಕೂ ಕ್ಲಾರಿಟಿ ಸಿಗುತ್ತೆ. ಆರಂಭದಿಂದಲೂ ನೋಡಿಸಿಕೊಂಡು ಹೋಗುತ್ತೆ. ಕೆಲವು ಕಡೆ ಸ್ಲೋ ಆದರೂ, ಹಾಡು ಫೈಟು ಅದನ್ನು ಸರಿದೂಗಿಸುತ್ತವೆ.
ಒಂದು ಕಾಲದಿಂದ ಇನ್ನೊಂದು ಕಾಲದ ಪಯಣದ ಕಥೆ ಇದು. 1993ರಲ್ಲಿ ನಡೆದ ಘಟನೆ 2022 ರಲ್ಲೂ ಕನೆಕ್ಟ್ ಆಗುತ್ತಾ ಹೋಗುತ್ತೆ. ಒಂದು ಫೋನ್ ಕಾಲ್ ನಲ್ಲಿ ವಿಚಿತ್ರ ಸನ್ನಿವೇಶಗಳು ನಡೆಯುತ್ತಾ ಹೋಗುತ್ತವೆ. ಅದನ್ನು ಅರ್ಥ ಮಾಡಿಕೊಳ್ಳೋದೇ ದೊಡ್ಡ ಟಾಸ್ಕ್. ಆ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.
ಕಥೆಯಲ್ಲಿ ಕೊಂಚಗೊಂದಲ ಎನಿಸುತ್ತೆ.. ಆದರೆ, ಚಿತ್ರಕಥೆಯಲ್ಲಿನ ಹಿಡಿತ ಇಷ್ಟವಾಗುತ್ತೆ..
ಸಿನಿಮಾದ ಶುರುವಲ್ಲಿ ಎರಡು ಮರ್ಡರ್ ನಡೆದುಹೋಗುತ್ತೆ.. ಅದು 1993ರಲ್ಲಿ ಆಗುವ ಕೊಲೆ. 2022ರಲ್ಲಿ ಎರಡು ಅಸ್ತಿಪಂಜರ ಸಿಕ್ಕು ದೊಡ್ಡ ನ್ಯೂಸ್ ಆಗುತ್ತೆ. ಗಣ ಇಲ್ಲಿ ಟಿವಿಯೊಂದರ ಜರ್ನಲಿಸ್ಟ್. ಬ್ರೇಕಿಂಗ್ ನ್ಯೂಸ್ ಕೊಡುವ ಗಣ ಆ ಕೊಲೆ ರಹಸ್ಯವನ್ನು ಹೇಗೆ ಬಯಲು ಮಾಡ್ತಾನೆ ಅನ್ನೋದೇ ಕಥೆ.
ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಯಶ ಅವರು ಚೆನ್ನಾಗಿ ನಟಿಸಿದ್ದಾರೆ. ವೇದಿಕಾ ಸಿನಿಮಾದ ಆಕರ್ಷಣೆ. ರವಿಕಾಳೆ ನೆಗೆಟುವ್ ಶೇಡ್ ನಲ್ಲಿ ವಿಜೃಂಭಿಸಿದ್ದಾರೆ. ರಮೇಶ್ ಭಟ್ , ಸಂಪತ್ ಶಿವು ಇಷ್ಟ ಆಗುತ್ತಾರೆ.
ಜೈ ಆನಂದ್ ಕ್ಯಾಮೆರಾ ಕೆಲಸ ಚೆನ್ನಾಗುದೆ. ಗಣ ಅಂದವಾಗಿದ್ದಾನೆ. ಅನೂಪ್ ಸೀಳಿನ್ ಸಂಗೀತಕ್ಕಿನ್ನೂ ಧಮ್ ಬೇಕಿತ್ತು.