Beguru Colony.Reviews

Friday, January 31, 2025

20

ಆಟದ ಮೈದಾನ ಉಳಿಸಿಕೊಳ್ಳಲು ಹೋರಾಡುವ ಕಥನ****

       ‘ಬೇಗೂರು ಕಾಲೋನಿ’ ಚಿತ್ರದ ಕಥೆಯು ಮಕ್ಕಳ ಆಟದ ಮೈದಾನ ಉಳಿಸಿಕೊಳ್ಳಲು ಯುವಕರಿಬ್ಬರು ಹೋರಾಡುವ ಅಂಶಗಳನ್ನು ಒಳಗೊಂಡಿದೆ. ಅಲ್ಲದೆ ನಾಡಿನ ಸಮಸ್ತ ಮಕ್ಕಳ ಒಳಿತಿಗಾಗಿ, ಅವರ ಅರೋಗ್ಯಕರ ಜೀವನಶೈಲಿಗಾಗಿ ನಡೆಸುವ ಯುದ್ದ ಎನ್ನಬಹುದು. ಶ್ರೀಮಂತರ ಮಕ್ಕಳಿಗೆ ಜಾಗ ಸಿಗುತ್ತದೆ. ಅದೇ ಬಡವರ ಮಕ್ಕಳು ಎಲ್ಲಿಗೆ ಹೋಗಬೇಕು. ಅವರಿಗೆ ಆಯಾ ಪ್ರದೇಶದಲ್ಲಿ ಮೀಸಲಿಟ್ಟ ಮೈದಾನಗಳು ಇದ್ದರೂ, ಪಟ್ಟ ಭದ್ರಾ ಹಿತಾಶಕ್ತಿಗಳಿಂದ ಪ್ರಭಾವಿಶಾಲಿಗಳ ಕೈವಶವಾಗುತ್ತಿದೆ. ಅದೇ ಜಾಗದಲ್ಲಿ ಮಾಲ್, ಅಪಾರ್ಟ್‌ಮೆಂಟ್ ತಲೆ ಎತ್ತುತ್ತಿದೆ. ಹೀಗೆ ಕಣ್ಮರೆಯಾಗುತ್ತಿರುವ ಸ್ಥಳವನ್ನು ಇಬ್ಬರು ಯುವಕರು ಯಾವ ರೀತಿ ಹೋರಾಟ ಮಾಡುತ್ತಾರೆ. ಅದನ್ನು ಉಳಿಸಿಕೊಳ್ಳಲು ಮಾಡುವ ಪ್ರಯತ್ನಗಳ ಸಪಲವಾಗುತ್ತದೆಯೇ ಎಂಬುದನ್ನು ತಿಳಿಯಲು ಸಿನಿಮಾ ನೋಬೇಕು.

      ನಿರ್ದೇಶಕ ಫ್ಲೈಯಿಂಗ್ ಕಿಂಗ್ ಮಂಜು ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ಸತ್ಯ ಘಟನೆಗಳನ್ನು ಚಿತ್ರರೂಪಕ್ಕೆ ಅಳವಡಿಸಿಕೊಂಡಿದ್ದಾರೆ. ನಿರೂಪಣಾ ಶೈಲಿಯನ್ನು ಕಮರ್ಷಿಯಲ್ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿರುವುದು ಸ್ವಾಗತಾರ್ಹ. ಜತೆಗೆ ಶಿವನ ಪಾತ್ರವನ್ನು ನಿಭಯಿಸಿದ್ದಾರೆ. ರಾಜೀವ್ ಹನು ರಾಘವನಾಗಿ ಜೀವ ತುಂಬಿದ್ದಾರೆ. ನಾಯಕಿ ಪಲ್ಲವಿ ಪರ್ವ, ಕೀರ್ತಿಭಂಡಾರಿ, ಸುನಿತಾ ತಮಗೆ ನೀಡಿದ ಕೆಲಸಕ್ಕೆ  ನ್ಯಾಯ ಒದಗಿಸಿದ್ದಾರೆ. ತೆಲುಗಿನ ಪೊಸಾನಿ ಕೃಷ್ಣ ಮುರಳಿ, ಬಲರಾಜವಾಡಿ ಗಮನ ಸೆಳೆಯುತ್ತಾರೆ. ಎಂ.ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,