Kaadumale.Reviews

Friday, January 31, 2025

29

ಭ್ರಮೆ ಮತ್ತು ವಾಸ್ತವ ಸಾರುವ ಕಾಡುಮಳೆ****

      ವಿಶ್ವದಲ್ಲಿ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಅವೆಲ್ಲವು ಬಗೆಹರಿಯದೇ ಹಾಗೆಯೇ ಉಳಿದಿರುತ್ತದೆ. ಅಂತಹ ರಹಸ್ಯದ ಪ್ರಶ್ನೆಗಳಿಗೆ ಉತ್ತರ ಕೊಡುವ ಪ್ರಯತ್ನವನ್ನು ‘ಕಾಡು ಮಳೆ’ ಚಿತ್ರದಲ್ಲಿ ಹೇಳಿದ್ದಾರೆ. ಲವ್ ಕೈಕೊಟ್ಟ ಎಂಬ ಕಾರಣಕ್ಕೆ ಅವಳು ಆತ್ನಹತ್ಯೆ ಮಾಡಿಕೊಳ್ಳಲು ಕಾಡಿಗೆ ಬರುತ್ತಾಳೆ. ಸೇತುವೆಯಿಂದ ಹಾರಿದರೂ ಬದುಕುಳಿಯುತ್ತಾಳೆ.  ಮುಂದೆ ತನ್ನ ತರಹವೇ ಇರುವ ಮತ್ತೋಬ್ಬಳು ಎದುರಾಗುತ್ತಾಳೆ. ದಾರಿ ಕಾಣದೆ ಒದ್ದಾಡುತ್ತಿರುವ ಅವಳಿಗೆ ರಿಚರ್ಡ್ ಥಾಮ್ಯನ್ ಎಂಬ ನಿಗೂಡ ಮನುಷ್ಯ ಸಿಗುತ್ತಾನೆ. ಅವನು ಇಬ್ಬರಂತೆ ಅರಣ್ಯದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ನಂತರ ಏನಾಗುತ್ತದೆ. ಅಲ್ಲಿಂದ ಹೇಗೆ ಬರುತ್ತಾರೆ ಎನ್ನುವುದನ್ನು ಕುತೂಹಲದ ಸನ್ನಿವೇಶಗಳಿಗೆ ತೋರಿಸಲಾಗಿದೆ. ಯಾವುದು ಭ್ರಮೆ, ವಾಸ್ತವ ಎಂಬುದನ್ನು ಹೇಳಲಾಗಿದೆ.

      ನಾಯಕ ಅರ್ಥ ಅಭಿನಯ ಪರವಾಗಿಲ್ಲ. ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸಮರ್ಥ ಶ್ರಮ ತೆರೆ ಮೇಲೆ ಕಾಣಿಸುತ್ತದೆ. ರಾಜಾರಾಮ್ ಸಂಗೀತ, ಮಹಾರಾಜ ಹಿನ್ನಲೆ ಶಬ್ದ, ದೀಪೇಶ್ ಆಚಾರ್ಯ ಸಂಕಲನ, ಛಾಯಾಗ್ರಹಣ ರಾಜು, ಎಲ್ಲವು ಇದಕ್ಕೆ ಪೂರಕವಾಗಿದದೆ. ಕಾಡು ಪ್ರದೇಶಗಳನ್ನು ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಪೈಸಾ ವಸೂಲ್ ಸಿನಿಮಾ ಎನ್ನಬಹುದು. ಮಂಜುನಾಥ್.ಟಿ.ಎಸ್. ನಿರ್ಮಾಣ ಮಾಡಿದ್ದಾರೆ.

****

 

 

Copyright@2018 Chitralahari | All Rights Reserved. Photo Journalist K.S. Mokshendra,