ಪ್ರೀತಿ ಮತ್ತು ನೇಕಾರರ ಬದುಕು, ಬವಣೆ
ನಿರ್ದೇಶಕ ನಾಗಶೇಖರ್ ‘ಸಂಜು ವೆಡ್ಸ್ ಗೀತಾ-೨’ ಚಿತ್ರದಲ್ಲಿ ಪ್ರೀತಿಯ ಜತೆಗೆ ಹೊಸ ವಿಷಯ ನೇಕಾರರ ಬದುಕಿನ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ. ರಮ್ಯಾ ಜಾಗಕ್ಕೆ ರಚಿತಾರಾಮ್ ಬಂದಿದ್ದಾರೆ. ಪಾತ್ರಗಳು ಹೊಸದು ಆಗಿದ್ದರೂ ಎಂದಿನಂತೆ ಪ್ರೀತಿಯ ನೋವು, ಪ್ರೀತಿಸುವವರ ಕಷ್ಟಗಳು ನೋಡುಗನ ಮನಸ್ಸನ್ನು ನಾಟುತ್ತದೆ. ಅಗರ್ಭ ಶ್ರೀಮಂತನ ಮಗಳಿಗೆ ಶಿಡ್ಲಘಟ್ಟದ ರೇಷ್ಮೆ ಸೀರೆ ನೇಕಾರ ಮಾಡುವವನ ಮೇಲೆ ಬೀಳುತ್ತದೆ. ಅಪ್ಪನ ವಿರೋಧದ ನಡೆವೆಯೂ ಎಲ್ಲವನ್ನು ಧಿಕ್ಕರಿಸಿದಾಗ ಇಬ್ಬರಿಗೂ ಅವಮಾನಿಸಿ ಮನೆಯಿಂದ ಹೊರಹಾಕುತ್ತಾನೆ.
ಇದನ್ನೆ ಛಾಲೆಂಜ್ ಆಗಿ ತೆಗೆದುಕೊಂಡ ಸಂಜು ಮತ್ತು ಗೀತಾ ರೇಷ್ಮೆ ಉದ್ಯಮದಲ್ಲಿ ಯಶಸ್ಸು ಸಾಧಿಸುತ್ತಾರೆ. ಮುಂದೆ ಬ್ಯುಸಿನೆಸ್ ಮೇಲೆ ಹಚ್ಚು ಗಮನಹರಿಸಿದ ಕಾರಣ, ಪ್ರೀತಿಸಲೂ ಆಗದ, ಶ್ರೀಮಂತಿಕೆ ಬಂದರೂ ಅನುಭವಿಸದೆ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದರ ಮಧ್ಯೆ ಊಹಿಸಲಾಗದ ಘಟನೆ ನಡೆದು ಹೋಗುತ್ತದೆ. ಇದರಿಂದ ಇಬ್ಬರ ಜೀವನ ಏನಾಯಿತು? ಮತ್ತೆ ದೂರಾಗುತ್ತಾರಾ? ಅಥವಾ ಮತ್ತಷ್ಟು ಹತ್ತಿರವಾಗುತ್ತಾರಾ ಎಂಬುದನ್ನು ನವಿರಾದ ಸನ್ನಿವೇಶಗಳ ಮೂಲಕ ನೂಡುವಂತೆ ಮಾಡುತ್ತದೆ.
ಶ್ರೀನಗರಕಿಟ್ಟಿ ಮತ್ತೋಮ್ಮೆ ಸಂಜು ಆಗಿ ಗೆಲ್ಲುತ್ತಾರೆ. ರಚಿತಾರಾಮ್ ಮುಗ್ದತೆ ಅಭಿನಯ ಚೆನ್ನಾಗಿದೆ. ರಂಗಾಯಣರಘು, ಸಂಪತ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಾಧುಕೋಕಿಲ ನಗಿಸಲು ಒದ್ದಾಡಿದ್ದಾರೆ. ತಬಲಾನಾಣಿ ತೆಲುಗು ಮಿಶ್ರಿತ ಕನ್ನಡ ಮಾತಾಡುವ ಕುಡುಕನಾಗಿ ಮನರಂಜನೆ ಕೊಡುತ್ತಾರೆ. ಒಂದು ಹಾಡಿನಲ್ಲಿ ರಾಗಿಣಿ ಹೆಜ್ಜೆ ಹಾಕಿದ್ದಾರೆ. ಶ್ರೀಧರ್ ಸಂಭ್ರಮ್ ಹಾಡುಗಳು ಮೆಲುಕು ಹಾಕಿಸುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನ ಸುಂದರ ತಾಣಗಳನ್ನು ಸತ್ಯಹೆಗಡೆ ಅದ್ಬುತವಾಗಿ ಸೆರೆಹಿಡಿದಿದ್ದಾರೆ. ಛಲವಾದಿ ಕುಮಾರ್ ಬಂಡವಾಳ ಹೂಡಿದ್ದಾರೆ.
****