ಕಾಡಿನಲ್ಲಿ ಚೆಲ್ಲಾಟ, ಹುಡುಕಾಟ, ಪರದಾಟ****
‘ಫಾರೆಸ್ಟ್’ ಚಿತ್ರದ ಹೆಸರೇ ಹೇಳುವಂತೆ ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದೆ. ಅಲ್ಲೋಂದು ನಿಧಿ ಅಂತ ತಿಳಿದ ಮೂರು ಹುಡುಗರು ಮತ್ತು ಒಬ್ಬ ಹುಡುಗಿ ಸೇರಿದಂತೆ ನಾಲ್ವರ ತಂಡವೊಂದು ಅದನ್ನು ಶೋಧಿಸುವ ಕಾರ್ಯಕ್ಕೆ ಮುಂದಾದಾಗ ನಡೆಯುವ ಆನಂತರ ಅವಾಂತರಗಳೇ ಹೈಲೈಟ್ ಆಗಿದೆ. ನೋಡುಗರಿಗೆ ಪ್ರತಿಯೊಂದು ಸನ್ನಿವೇಶಗಳು, ದೃಶ್ಯಗಳು ಕಾತುರತೆ ತರಿಸುತ್ತವೆ. ಒಬ್ಬನು ಮೂಗ. ಹಾಗಾಗಿ ಅವನಿಗೆ ಯಾವ ಕೆಲಸಕ್ಕೆ ಹೋಗುತ್ತಿದ್ದೇವೆಂದು ತಿಳಿಯದ ಮೂಡ. ಈತನ ಮಾತುಗಳು ನಗುವನ್ನು ತರಿಸುತ್ತಾ ಹೋಗುತ್ತದೆ. ಅರಣ್ಯದಲ್ಲಿ ಯಾವುದೇ ಪ್ರಾಣಿಗಳಿಂದ ತೊಂದರೆ ಆಗದಿದ್ದರೂ ಇವರುಗಳ ಕಪಿಚೇಷ್ಠೆಗಳೇ ಗೊಂದಲಕ್ಕೆ ಸಿಲುಕುವಂತೆ ಮಾಡುತ್ತದೆ. ಮೊದಲರ್ಧದಲ್ಲಿ ಗುರಿ ಸಾಧಿಸುತ್ತಾರೆ. ವಿರಾಮದ ತರುವಾಯ ಅಸಲಿ ಕಥೆ ಬಿಚ್ಚಿಕೊಳ್ಳುತ್ತದೆ. ಇದೆಲ್ಲಾವನ್ನು ತಿಳಿಯಲು ನೀವುಗಳು ಆರಾಮವಾಗಿ ಸಿನಿಮಾ ನೋಡಬಹುದು.
ಗುರುನಂದನ್, ಅನೀಶ್‌ತೇಜಶ್ವರ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಂಗಾಯಣರಘು ಮತ್ತು ಚಿಕ್ಕಣ್ಣ ನಗಿಸುತ್ತಾ ಸಿನಿಮಾ ಪೂರ್ತಿ ಆವರಿಸಿಕೊಂಡಿದ್ದಾರೆ. ಅರ್ಚನಾಕೊಟ್ಟಿಗೆ, ವಿಶೇಷವಾಗಿ ಕಾಣಿಸಿಕೊಂಡಿರುವ ಶರಣ್ಯಶೆಟ್ಟಿಗೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ‘ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ’ ಎಂಬ ನಾಣ್ಣುಡಿಯೇ ಕಥೆಯನ್ನು ಹೇಳುತ್ತದೆ. ಎರಡು ಸಿನಿಮಾಗಳಲ್ಲಿ ಡಬ್ಬಲ್ ಮೀನಿಂಗ್ ತುಂಬಿದ್ದ ನಿರ್ದೇಶಕ ಚಂದ್ರಮೋಹನ್ ಈ ಬಾರಿ ಅದೆಲ್ಲಾವನ್ನು ಬದಿಗಿಟ್ಟು ಥ್ರಿಲ್ ಜತೆಗೆ ಕಾಮಿಡಿಯನ್ನು ಹೇರಳವಾಗಿ ತುಂಬಿದ್ದಾರೆ. ಧರ್ಮವಿಶ್ ಹಿನ್ನಲೆ ಸಂಗೀತ ಗಮನ ಸೆಳೆಯುತ್ತದೆ. ಎನ್.ಎಂ.ಕಾಂತರಾಜ್ ನಿರ್ಮಾಣ ಮಾಡಿದ್ದಾರೆ.
****