ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶನ: ಅಭಿಜಿತ್ ತೀರ್ಥಹಳ್ಳಿ
ನಿರ್ಮಾಣ: ಮಂಜುನಾಥ್.ವಿ.ಜಿ ಮತ್ತು ಪೂರ್ಣಿಮಾ ಗೌಡ
ತಾರಾಗಣ: ವಿಕಾಶ್ ಉತ್ತಯ್ಯ, ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ, ಅಶ್ವಿನಿಹಾಸನ್, ಮಿಮಿಕ್ರಿಕುಮಾರ್, ರಾಧಾಭಗವತಿ ಮುಂತಾದವರು
ಸಂಗೀತ ಮತ್ತು ಛಾಯಾಗ್ರಹಣ: ಸುನಾದ್‌ಗೌತಮ್
ಮೂವರು ಹುಡುಗರ ನಕರಾತ್ಮಕ ಗುಣಗಳು
‘ಅಪಾಯವಿದೆ ಎಚ್ಚರಿಕೆ’ ಚಿತ್ರವು ಮೂವರು ಬೇಜವಬ್ದಾರಿ ಹುಡುಗರ ಸುತ್ತ ಸಾಗುತ್ತದೆ. ಹಣದ ಆಸೆಗೆ ಬಿದ್ದು ಜೀವನದಲ್ಲಿ ಅಡ್ಡದಾರಿಗೆ ಹೋದಾಗ ಏನೇನೆಲ್ಲಾ ಆಗುತ್ತದೆ. ಹಣ ಸಿಗುತ್ತದೆ ಎಂದರೆ ಯಾವುದೇ ರಿಸ್ಕ್‌ಗೆ ಹೆದರದೆ ಮುಂದುವರೆಯುವಂತವರು. ಡೀಲ್‌ಗಳನ್ನು ಕುದುರಿಸುವಲ್ಲಿ ವಿಪಲತೆ ಕಂಡುಬಂದಾಗ ಬೇರೆ ದಾರಿ ಕಾಣದೆ ಕೆಟ್ಟ ಹಾದಿಗೆ ಹೋಗಲು ಹೊಂಚು ಹಾಕುತ್ತಾರೆ. ಇದರ ಆಲೋಚನೆಯಿಂದಲೇ ಕಾಡು ಒಳಗೆ ಪ್ರವೇಶ ಮಾಡಿದಾಗ ಭಯಾನಕವಾದ ರಹಸ್ಯ ಜಗತ್ತನ್ನು ನೋಡುತ್ತಾರೆ.
. ಅಲ್ಲಿ ಪ್ರತ್ಯಕ್ಷವಾಗುವ ಮುಖವಾಡಗಳು ಭಯ ಹುಟ್ಟಿಸುತ್ತದೆ. ಮೂವರಲ್ಲಿ ಒಬ್ಬ ಪುಕ್ಕಲ. ಅಲ್ಲಿಗೆ ಹೋಗಿ ಕಾಡನ್ನು ದೋಚಲು ಪಿತೂರಿ ನಡೆಸುತ್ತಾರೆ. ಆ ನಂತರ ಕುತೂಹಲದ ಕಥೆಗಳು ತೆರೆದುಕೊಳ್ಳುತ್ತದೆ. ಹಾಗಯೇ ಪಂಚಭೂತಗಳನ್ನು ಒಂದೊಂದು ಪಾತ್ರವಾಗಿ ತೋರಿಸಲಾಗಿದೆ. ಎಲ್ಲವನ್ನು ತಿಳಿಯುವ ಮನಸ್ಸು ಇದ್ದಲ್ಲಿ ತಾವು ಥಿಯೇಟರ್‌ಗೆ ಬಂದರೆ ನಮ್ಮದು ಅಭ್ಯಂತರವೇನು ಇಲ್ಲ.
ನಿದೇರ್ಶನ ಜತೆಗೆ ನಟನೆ ಮಾಡಿರುವ ಅಭಿಜಿತ್ ತೀರ್ಥಹಳ್ಳಿ ಎರಡು ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿಕಾಶ್ ಉತ್ತಯ್ಯ ಮಿಥುನ್ ತೀರ್ಥಹಳ್ಳಿ, ರಾಘವ್ ಕೊಡಚಾದ್ರಿ ಗಮನ ಸೆಳೆಯುತ್ತಾರೆ. ಖಳನಾಗಿ ಅಶ್ವಿನ್‌ಹಾಸನ್, ಅಜ್ಜನಾಗಿ ಮಿಮಿಕ್ರಿಕುಮಾರ್ ಮುಂತಾದವರು ಪಾತ್ರಕ್ಕೆ ನ್ಯಯ ಒದಗಿಸಿದ್ದಾರೆ.
****