ಚಿತ್ರ: ೧೯೯೦
ನಿರ್ಮಾಣ: ಮನಸ್ಸು ಮಲ್ಲಿಗೆ ಕಂಬೈನ್ಸ್
ನಿರ್ದೇಶನ: ಸಿ.ಎಂ.ನಂದಕುಮಾರ್
ತಾರಾಗಣ: ಅರುಣ್‌ಕುಮಾರ್, ರಾಣಿವರದ್
ಸಂಗೀತ: ಮಹಾರಾಜ
೯೦ರ ದಶಕದ ಕಥನ
‘೧೯೯೦’ ಚಿತ್ರದ ಶೀರ್ಷಿಕೆ ಹೇಳುವಂತೆ ಆಗಿನ ಕಾಲಘಟ್ಟದಲ್ಲಿ ನಡೆಯುವ ಪ್ರೇಮ ಕಥೆ ಇರಲಿದೆ. ಯಾವ ಕಾಲದಲ್ಲಿ ಇದ್ದರೂ ಪ್ರೇಮಿಗಳನ್ನು ಬಾಳಸಂಗಾತಿಯನ್ನಾಗಿ ಮಾಡುತ್ತದೆ. ಹಾಗೆಯೇ ಸಿನಿಮಾದಲ್ಲಿ ಕೂಡ ಅದೇ ರೀತಿಯ ಲವ್‌ಸ್ಟೋರಿ ಇದೆ. ಸಂಪ್ರದಾಯಸ್ಥ ಕುಟುಂಬದ ಹುಡುಗಿ. ಬಾಲ್ಯದಿಂದಲೇ ರಗಡ್ ಆಗಿ ಬೆಳೆಯುತ್ತಾ ಪರೋಡಿಯಾದ ಹುಡುಗ. ಇಂಥ ಯುವಕನಿಗೆ ಹುಡುಗಿಯೊಬ್ಬಳು ಎದುರು ಬರುತ್ತಿದ್ದಂತೆ ಎದೆಯಲ್ಲಿ ಒಂಥರ ಉಲ್ಲಾಸ. ಕೊನೆಗೆ ಅವಳನ್ನು ಪ್ರೀತಿಸಲೇಬೇಕು ಎಂಬ ನಿರ್ಧಾರಕ್ಕೆ ಬರುತ್ತಾನೆ. ಇದರ ನಡುವೆಯೇ ಇಬ್ಬರ ಚಿಕ್ಕ ವಯಸ್ಸಿನ ಫ್ಲ್ಯಾಶ್‌ಬ್ಯಾಕ್ ತೆರೆದುಕೊಳ್ಳುತ್ತದೆ. ಇದು ಮುಗಿಯುವದರೊಳಗೆ ದೊಡ್ಡದೊಂದು ತಿರುವು ಪಡೆದುಕೊಳ್ಳುತ್ತದೆ. ಇಂತಹುದೆ ಅನೇಕ ಕುತೂಹಲದ ಸನ್ನಿವೇಶಗಳು ನೋಡುಗರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಅದು ಏನು ಅಂತ ಗೊತ್ತಾಗಬೇಕಾದರೆ ಟಾಕೀಸ್‌ಗೆ ಬರಬೇಕು.
ನಿರ್ದೇಶಕ ನಂದಕುಮಾರ್ ಅಂದಿನ ಕಾಲಕ್ಕೆ ತಕ್ಕಂತೆ ದೃಶ್ಯಗಳನ್ನು ಸೃಷ್ಟಿಸಿರುವುದು ಪರದೆ ಮೇಲೆ ಕಾಣಿಸುತ್ತದೆ. ನಾಯಕ ಅರುಣ್‌ಕುಮಾರ್ ಮತ್ತು ನಾಯಕಿ ರಾಣಿವರದ್ ಪಾತ್ರಕ್ಕೆ ಹೊಂದಿಕೊಂಡಂತೆ ನಟಿಸಿದ್ದಾರೆ. ಮಿಕ್ಕಂತೆ ಕಲಾವಿದರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಮಹಾರಾಜ ಸಂಗೀತದಲ್ಲಿ ಹಾಡುಗಳು ಕೇಳಬಲ್.
****