Shanubhogara Magalu.Reviews

Friday, February 21, 2025

49

ಚಿತ್ರ: ಶಾನುಭೋಗರ ಮಗಳು

ನಿರ್ದೇಶನ: ಕೂಡ್ಲುರಾಮಕೃಷ್ಣ

ನಿರ್ಮಾಣ: ಸಿ.ಎಂ.ನಾರಾಯಣ್

ತಾರಾಗಣ: ರಾಗಿಣಿಪ್ರಜ್ವಲ್, ನಿರಂಜನ್ಶೆಟ್ಟಿ, ಕಿಶೋರ್, ರಮೇಶ್ಭಟ್, ಸುಧಾಬೆಳವಾಡಿ, ವಾಣಿಶ್ರೀ, ಪದ್ಮವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜನ್ ಕಾರ್ತಿಕ್

ಸ್ವಾತಂತ್ರಪೂರ್ವದ ಕಥನ****

       ಲೇಖಕಿ ಭಾಗ್ಯ ಕೃಷ್ಣಮೂರ್ತಿ ಕಾದಂಬರಿ ಆಧಾರಿತ ಕಥೆ ಹೊಂದಿರುವ ‘ಶಾನುಭೋಗರ ಮಗಳು’ ಚಿತ್ರವು ಟಿಪ್ಪು ಸುಲ್ತಾನ ಕಾಲ ಹಾಗೂ ಬ್ರಿಟಿಷ್ ಆಳ್ವಿಕೆಯಲ್ಲಿ, ಮೈಸೂರು ಪ್ರ್ಯಾಂತ್ಯದಲ್ಲಿ ಹೆಣೆದ ಕಾಲ್ಪನಿಕ ಕಥೆಯನ್ನು ಒಳಗೊಂಡಿದೆ. ಭಾರತೀಯರ ಮೇಲೆ ಬ್ರಿಟಿಷರು ನಡೆಸಿದ ದೌರ್ಜನ್ಯ, ಧರ್ಮದ ಬಗ್ಗೆ ತೋರಿಸಿದ್ದ ತಾತ್ಸಾರ, ಮೆರೆದ ಕ್ರೌರ್ಯ, ಅದರಲ್ಲೂ ಮುಗ್ದ ಹೆಣ್ಣು ಮಕ್ಕಳನ್ನು ಸೆರೆಹಿಡಿದು ನಡೆಸಿದ ಅತ್ಯಾಚಾರದ ವಿವರಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಸಾಮಾನ್ಯ ಜನರು ದೇಶಭಕ್ತಿಯಿಂದ ಬ್ರಿಟಿಷರ ಆಡಳಿತದ ವಿರುದ್ದ ಬಂಡೆದ್ದು ಹೋರಾಟ ನಡೆಸಿದ ರೀತಿಯನ್ನು ಪರಿಣಾಮಕಾರಿ ಹೇಳಲಾಗಿದೆ. ಅಂದಿನ ರಾಜಕೀಯ, ಸಾಮಾಜಿಕ ಹಾಗೂ ವೈಯಕ್ತಿಕ ಜೀವನದ ಸಂಕೀರ್ಣ ಅಭಿವ್ಯಕ್ತಿ ಸ್ವಾತಂತ್ರವನ್ನು ತೋರಿಸಲಾಗಿದೆ.

         ನಿರ್ದೇಶಕ ಕೂಡ್ಲು ರಾಮಕೃಷ್ಣ ಅಂದಿನ ಕಾಲದ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ತೆರೆ ಮೇಲೆ ಪ್ರದರ್ಶಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ದಿಟ್ಟ ಹೆಣ್ಣು ಮಗಳಾಗಿ ಶ್ರೀರ್ಷಿಕೆ ಹೆಸರಿನಲ್ಲಿ ರಾಗಿಣಿಪ್ರಜ್ವಲ್ ಮಿಂಚಿದ್ದಾರೆ. ಉಳಿದಂತೆ ನಿರಂಜನ್‌ಶೆಟ್ಟಿ, ಕಿಶೋರ್, ರಮೇಶ್‌ಭಟ್, ಸುಧಾಬೆಳವಾಡಿ, ವಾಣಿಶ್ರೀ, ಪದ್ಮವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜಿತ್‌ಕಾರ್ತಿಕ್, ಧರ್ಮನವೀನ್ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಕವಿರಾಜ್-ಅರಸುಅಂತಾರೆ ಸಾಹಿತ್ಯದ ಗೀತೆಗಳಿಗೆ ಅಮರ್ ಕಂಹರ ಸಂಗೀತ, ಛಾಯಾಗ್ರಹಣ ಜೈಆನಂದ್, ಸಂಭಾಷಣೆ ಬಿ.ಎ.ಮಧು ಇವೆಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ.

****

 

 

Copyright@2018 Chitralahari | All Rights Reserved. Photo Journalist K.S. Mokshendra,