Interval.Film Reviews

Friday, March 07, 2025

66

 

ಇಂಟರ್ ವೆಲ್ ಚಿತ್ರದ ವಿಮರ್ಶೆ;

 

ಹಳ್ಳಿ ಹುಡುಗರ ಪರದಾಟದ ಚಿತ್ರ ಇಂಟರ್ ವೆಲ್

 

 

ಚಿತ್ರ : ಇಂಟರ್ ವೆಲ್ 3/5

"ನಿರ್ದೇಶನ : ಭರತ್

ತಾರಾಗಣ: ಶಶಿರಾಜ್ ,ಪ್ರಜ್ವಲ್ ಕುಮಾರ್ ಗೌಡ, ಸುಖಿ, ಚರಿತ್ರ ರಾವ್, ಸಹನಾ ಆರಾಧ್ಯ, ಸಮೀಕ್ಷಾ ಮತ್ತಿತರರು

 

ಹಳ್ಳಿಯ ಹುಡುಗರ ತರಲೆ , ತುಂಟಾಟ ಮತ್ತು ಕೀಟಲೆ ಹಾಗು ಪರಪಾಲುಗಳನ್ಜು ಮುಂದಿಟ್ಟುಕೊಂಡು ತೆರೆಗೆ ಬಂದಿರುವ ಚಿತ್ರ " ಇಂಟರ್ ವೆಲ್".

 

ಚಿತ್ರದ ಮಧ್ಯಂತರದ ಬಿಡುವನ್ನು ಇಂಟರ್ ವೆಲ್ ಅನ್ನುತ್ತಾರೆ. ಅದೇ ಹೆಸರಲ್ಲಿ ಭರತ್ ಚಿತ್ರವನ್ನು ತೆರೆಗೆ ತಂದಿದ್ದಾರೆ ಈ ಮೂಲಕ ಬದುಕಿನ ಘಟನೆಗಳು ಮತ್ತು ತಿರುವುಗಳನ್ನು ಇಂಟರ್ ವೆಲ್ ಗೆ ಹೋಲಿಸಿದ್ದಾರೆ.

 

ಊರಿನ ಮೂರು ಮಂದಿ ಹುಡುಗರಾದ ಶಶಿರಾಜ್, ಪ್ರಜ್ಚಲ್ ಕುಮಾರ್ ಮತ್ತು ಸುಕಿ ಮೂರು ಮಂದಿಯ ಹೆಸರು ಗಣೇಶ್. ಹೀಗಾಗಿ ಚಿತ್ರದಲ್ಲಿ ಗಣೇಶಂದಿರ ಗಲಾಟೆ ಚಿತ್ರದಲ್ಲಿದೆ.‌ಅವರ ತುಂಟಾಟಗಳು ಮಾಡುವ ಕಿತಾಪತಿಗಳು ಚಿತ್ರದಲ್ಲಿ ಕಥನ ಕುತೂಹಲ ಮೂಡಿಸಿವೆ.

ಮೂರು ಮಂದಿ ಗಣೇಶರು ಬಾಲ್ಯದಲ್ಲಿಯೇ ಸ್ನೇಹಿತರು, ಒಂದೇ ಶಾಲೆಯಲ್ಲಿ ಓದಿದವರು ದೊಡ್ಡವರಾದ ಮೇಲೆ ಒಂದೇ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದವರು. ಆದರೂ ಓದಿನಲ್ಲಿ ಹಿಂದೆ ಇರುವ ಮಂದಿ. ಇದೇ ಕಾರಣಕ್ಕೆ ಕಡಿಮೆ ಅಂಕ ಪಡೆದಿದ್ದರೂ ಊರಿನ ಮಂದಿಯ ಮುಂದೆ ಬಾರಿ ಬಿಲ್ಡಪ್ ಕೊಡ್ತಾರೆ.

 

ಊರಲ್ಲಿ ಏನೇ ಆದರೂ ಮೂರು ಹುಡುಗರದೇ ಸಾರಥ್ಯ. ಅದರಿಂದ ಎಡಟ್ಟುಗಳೇ ಜಾಸ್ತಿ‌ . ಇಂಜಿನಿಯರಿಂಗ್ ಮಾಡಿದ್ದರೂ ಕೆಲಸ ಇಲ್ಲ. ಈ ನಡುವೆ ಊರ ಪಟೇಲನ ಮಗಳನ್ನು ಶಶಿರಾಜ್ ಪ್ರೀತಿಸುತ್ತಾನೆ. ಆಕೆಯೂ ಕೂಡ. ಆದರೆ ಈತನಿಗೆ ಜವಾಬ್ದಾರಿ ಇಲ್ಲ ಎನ್ನುವ ಕಾರಣಕ್ಕೆ ಬುದ್ದಿ ಹೇಳಿದರೂ ಕೇಳಿಸಿಕೊಳ್ಳದ ಜಾಯಮಾನ. ಕೊನೆಗೆ ಆತನನ್ನು ಬಿಟ್ಟು ತನ್ನ ದಾರಿ ತಾನು ನೋಡಿಕೊಳ್ಳುತ್ತಾಳೆ.

 

ಇತ್ತ ಕೆಲಸ ಅರಸಿಕೊಂಡು ನಗರಕ್ಕೆ ಬರುವ ಮೂರು ಹುಡುಗರು ತಮ್ಮ ಸ್ನೇಹಿತನ. ರೂಮ್ ನಲ್ಲಿ ಉಳಿದುಕೊಂಡು ಕೆಲಸ ಹುಡುಕಾ ನಡೆಸಿದರು ಅಲ್ಲಿ ಮತ್ತೊಬ್ಬ ಹುಡುಗಿಯ ಪರಿಚಯ .ಅಲ್ಲಿಂದ ಮುಂದೇನು ಕೆಲಸ ಗಿಟ್ಟಿಸಿಕೊಳ್ತಾರ ಇಲ್ಲ ವಾಪಸ್ ಹಳ್ಳಿಗೆ ಬರ್ತಾರಾ ಎನ್ನುವುದು ಚಿತ್ರದ ಕಥನ ಕುತೂಹಲ.

 

ಶಶಿರಾಜ್ ,ಪ್ರಜ್ವಲ್ ಕುಮಾರ್ ಗೌಡ, ಸುಖಿ, ಚರಿತ್ರ ರಾವ್, ಸಹನಾ ಆರಾಧ್ಯ, ಸಮೀಕ್ಷಾ ಮತ್ತಿತರರು ತಮಗೆ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಯುವ ಜನರನ್ನು‌ ಮುಂದಿಟ್ಟುಕೊಂಡು ನಿರ್ದೇಶಕರು ಯೂಥ್ ಪುಲ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,