ಚಿಲಿಪಿಲಿ ಹಕ್ಕಿಗಳ ಪ್ರೇಮಕಥೆ ****
ಚಿತ್ರ: ಸೂರಿ ಲವ್ಸ್ ಸಂಧ್ಯಾ
ನಿರ್ದೇಶನ: ಯಾದವ್ ರಾಜ್
ನಿರ್ಮಾಣ: ಕೆ.ಟಿ.ಮಂಜುನಾಥ್
ತಾರಾಗಣ: ಅಭಿಮನ್ಯು ಕಾಶಿನಾಥ್, ಅಪೂರ್ವ, ಪ್ರತಾಪ್‌ನಾರಯಣ್, ಜಯ್‌ರಾಮಣ್ಣ ಮುಂತಾದವರು
‘ಸೂರಿ ಲವ್ಸ್ ಸಂಧ್ಯಾ’ ಚಿತ್ರವು ಹೆಸರೇ ಹೇಳುವಂತೆ ಇದೊಂದು ಕಾಡುವ ಪ್ರೇಮಕತೆಯನ್ನು ಹೊಂದಿದೆ. ಅವನಿಗೆ ಅವಳು, ಅವಳಿಗೆ ಅವನು ಎನ್ನುತ್ತಲ್ಲೇ ಬಾಳ ದಾರಿ ಸಾಗುವ ಯುವ ಜೋಡಿಗಳ ಸುತ್ತ ಸಾಗುತ್ತದೆ.
ಬಾರ್ ಸಪ್ಲಯರ್ ಮತ್ತು ಮಧ್ಯಮ ವರ್ಗದ ಹುಡುಗಿ. ಇಬ್ಬರು ಒಬ್ಬರಿಗೊಬ್ಬರು ಜೀವನಕ್ಕೆ ನೆರಳಂತೆ ಇರುವಾಗಲೇ, ಅನಿರೀಕ್ಷಿತವಾಗಿ ಊಹಿಸಲಾಗದ ಘಟನೆಗಳು ಬಂದು ಚಿತ್ರಕ್ಕೆ ಹೊಸ ತಿರುವು ಕೊಡುತ್ತದೆ. ಇಬ್ಬರ ಪ್ರೇಮಕ್ಕೆ ವಿಘ್ನಗಳು ಒಂದಕ್ಕಿಂತ ಹೆಚ್ಚು ಬರುತ್ತಲೇ ಇರುತ್ತದೆ. ಆದರೂ ಏನೇ ಆಗಲಿ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಬೇಕು ಎನ್ನವಷ್ಟರಲ್ಲಿಯೇ ಮತ್ತೋಂದು ದುರ್ಘಟನೆ ನಡೆಯುತ್ತದೆ. ಅದು ಯಾವ ಮಟ್ಟಿಗೆ ಅಂತ ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ಯಾದವ್‌ರಾಜ್ ರಚನೆ, ಸಂಭಾಷಣೆ, ಚಿತ್ರಕತೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿರುವುದು ಸಮಂಜನಸವಾಗಿದೆ. ಅಭಿಮನ್ಯುಕಾಶಿನಾಥ್ ನಾಯಕನಾಗಿ ಗಮನ ಸೆಳೆದಿದ್ದಾರೆ. ಅಪೂರ್ವ ನಾಯಕಿ. ಖಳನಾಗಿ ಪ್ರತಾಪ್‌ನಾರಾಯಣ್ ಉಳಿದಂತೆ ಪಲ್ಲವಿ, ಶಾರದಮ್ಮ, ಜಯರಾಮಣ್ಣ, ಕೆ.ಎಂ.ರಾಜೇಶ್, ಮೊಟ್ಟೆರಾಜೇಂದ್ರನ್, ನೀನಾಸಂಅಶ್ವಥ್, ಅವೀನ್‌ಸಿಂಗ್, ಪ್ರದೀಪ್‌ಕಬ್ರಾ, ರಾಜೀವ್‌ಪಿಳ್ಳೈ, ಸಿಯಾಜ್‌ಕರೀಂ, ವೆಂಕಟೇಶ್‌ದೀಕ್ಷಿತ್, ಅರಣ್‌ಬಾಬು ಮುಂತಾದವರು ನಟಿಸಿದ್ದಾರೆ. ಎಸ್.ಎನ್.ಅರುಣಗಿರಿ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ.
****