ಚಿತ್ರ: ಆಪಲ್ ಕಟ್
ನಿರ್ದೇಶನ: ಸಿಂಧುಗೌಡ
ನಿರ್ಮಾಣ: ಶಿಲ್ಪಪ್ರಸನ್ನ
ತಾರಾಗಣ: ಸೂರ್ಯಗೌಡ, ಅಶ್ವಿನಿಪೋಲೆಪಲ್ಲಿ, ಬಲರಾಜವಾಡಿ, ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ ಮುಂತಾದವರು
ಸಂಗೀತ: ವೀರಸಮರ್ಥ್
ಸಿಹಿ ಆಪಲ್ನ ಕಹಿ ಕಥನ
‘ಆಪಲ್ ಕಟ್’ ಸಿನಿಮಾವು ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದ್ದು ಆಪಲ್ ಹಾಗೂ ಅದರ ಬೀಜದ ಸುತ್ತ ಸಾಗುತ್ತದೆ. ವೃತ್ತಿಯಲ್ಲಿ ಆತ ಮಾನವಶಾಸ್ತ್ರ ಪ್ರಾಧ್ಯಾಪಕ. ಒಳ್ಳಯವನಂತೆ ಕಂಡರೂ ಆತನೊಳಗೆ ಕೌರ್ಯ ತುಂಬಿಕೊಂಡಿರುತ್ತದೆ. ವಿವಾಹ ಪೂರ್ವ ಸಂಬಂಧ ಹೊಂದಿದವರು,
ಪ್ರೀತಿಸಿ ಮೋಸ ಮಾಡುವವರನ್ನು ಕೊಲೆ ಮಾಡುತ್ತಿರುತ್ತಾನೆ. ಅಂದರೆ ಈತನೊಬ್ಬ ಸೈಕೋ ಕಿಲ್ಲರ್ ಎನ್ನಬಹುದು. ಅಷ್ಟಕ್ಕೂ ಇವನು ಈ ರೀತಿ ಆಗಲು ಕಾರಣವೇನು? ಜತೆಗೆ ಮಾನವ ಶಾಸ್ತ್ರದ ಅಂಶಗಳು, ಅಮ್ಮ ಮಗನ ಬಾಂಧವ್ಯವನ್ನು ತೋರಿಸಲಾಗಿದೆ. ಸಿನಿಮಾದಲ್ಲಿ ಶವವೊಂದು ಪ್ರಮುಖ ಪಾತ್ರವಹಿಸಿರುವುದು ವಿಶೇಷ. ಅದು ಏನೆಂದು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ಮಾನವಶಾಸ್ತ್ರದ ಪ್ರೊಪೆಸರ್ ಆಗಿ ಸೂರ್ಯಗೌಡ ನಾಯಕ. ಸೈಕಾಲಜಿ ವಿದ್ಯಾರ್ಥಿಯಾಗಿ ಅಶ್ವಿನಿಪೋಲೆಪಲ್ಲಿ ನಾಯಕಿ. ಪೊಲೀಸ್ ಆಗಿ ಬಲರಾಜವಾಡಿ ನಗಿಸಿದ್ದಾರೆ. ಬಲರಾಜವಾಡಿ, ಅಪ್ಪಣ್ಣ, ಅಭಿಜಿತ್, ಮೀನಾಕ್ಷಿ ಮುಂತಾದವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.
ವೀರಸಮರ್ಥ್ ಸಂಗೀತದಲ್ಲಿ ಹಾಡುಗಳು ಕೇಳಬಲ್. ರಾಜೇಶ್‌ಗೌಡ ಛಾಯಾಗ್ರಹಣ ಇದಕ್ಕೆ ಪೂರಕವಾಗಿದೆ.