Eesha Mahesha.Film Review.

Friday, November 08, 2019

518

ಅಣ್ಣ ತಮ್ಮಂದಿರ  ಈಶ ಮಹೇಶ

        ಕೌಟಂಬಿಕ ಕತೆ ಹೊಂದಿರುವ  ‘ಈಶ ಮಹೇಶ’ ಚಿತ್ರವು   ನೀರಾವರಿ ಪ್ರದೇಶವುಳ್ಳ ಚಿಕ್ಕ ಹಳ್ಳಿಯಲ್ಲಿ  ನಡೆಯುತ್ತದೆ. ಸಮಾಜ ಸೇವೆ ಮಾಡುವ ಊರಿನ  ಮುಖ್ಯಸ್ಥನಿಗೆ ಇಬ್ಬರು ಮಕ್ಕಳು. ಅಣ್ಣ ಶ್ರೀಮಂತ, ತಮ್ಮ ಬಡವ. ಒಮ್ಮೆ ಸೋದರ ಚುನಾವಣೆಯಲ್ಲಿ ನಿಲ್ಲುತ್ತಾನೆ. ಫಲಿತಾಂಶದಲ್ಲಿ ಸೋತು ಹೋಗಿದ್ದೆನೆಂದು  ಬೇಸರಗೊಂಡು ಮನೆಗೆ ಹೋಗಿ ಆರೋಗ್ಯ ಸಮಸ್ಯೆಯಿಂದ  ಮರಣ ಹೊಂದುತ್ತಾನೆ. ಆದರೆ ಎಲೆಕ್ಷನ್‌ದಲ್ಲಿ ಗೆಲುವು ಕಂಡಿರುತ್ತಾನೆ. ಪತ್ನಿ ಇಲ್ಲಿಯ ಕಷ್ಟ, ವಾತವರಣ ನೋಡಲಾಗದೆ ದೂರದ ಊರಿಗೆ ಹೋಗುತ್ತಾರೆ. ಮುಂದೇನು ಎನ್ನುವುದು ಕುತೂಹಲಕಾರಿ ಯಾಗಿದೆ. ಜೊತೆಗೆ ಸ್ವಚ್ಚತಾ ಅಭಿಯಾನದ ಸಂದೇಶ ಇರಲಿದೆ. ಅಚ್ಚುಕಟ್ಟಾಗಿ ಸನ್ನಿವೇಶಗಳನ್ನು ಸೃಷ್ಟಿಸಿರುವ ನಿರ್ದೇಶಕ ಎಂ.ಡಿ.ಕೌಶಿಕ್ ಕೆಲಸ ಸಪಲವಾಗಿದೆ.

          ಮುಖ್ಯ ಪಾತ್ರದಲ್ಲಿ  ಶ್ರೀಧರ್, ನಾರಾಯಣಸ್ವಾಮಿ. ಜಯಶ್ರೀ  ೨೫ ಹಾಗೂ ೪೫ ವಯಸ್ಸಿನ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶರಣ್ಯಗೌಡ, ಎಂ.ಡಿ.ಕೌಶಿಕ್,ಸರಸ್ವತಿ, ಹಂಸರಾಜ್ ನಟನೆಯ ಜೊತೆಗೆ ಚಿತ್ರಕತೆಯ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಪ್ರೊ.ದೊಡ್ಡೆರಂಗೇಗೌಡ ಸಾಹಿತ್ಯದ ಗೀತೆಗಳಿಗೆ ವಿ.ಮನೋಹರ್ ಸಂಗೀತವಿದೆ. ಅದರಲ್ಲೂ ಮಲೈ ಮಹದೇಶ್ವರ ಜಾತ್ರೆ ಕುರಿತ ಹಾಡಿನಲ್ಲಿ  ದೇವರನ್ನು ವೈಭವಿ ಕರಿಸಿ, ಮಣ್ಣಿನ ಸಂಸ್ಕ್ರತಿ, ದೇಸಿ ಪದಗಳ ಬಳಕೆ ಮಾಡಿರುವ ಹಾಡಿಗೆ ಕಿಕ್ಕೇರಿಕೃಷ್ಣಮೂರ್ತಿ ಕಂಠದಾನ ಮಾಡಿರುವುದು ವಿಶೇಷ. ನಟರಾಜ್‌ಮಂಚಯ್ಯ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,