ರಣಭೂಮಿ ಯುದ್ದದ ಕತೆಯಾಗಿಲ್ಲ
‘ರಣಭೂಮಿ’ ಹೆಸರು ಕೇಳಿದರೆ ಇದೊಂದು ಯುದ್ದಕ್ಕೆ ಸಂಬಂದಿಸಿದ ಕತೆ ಅಂಂದುಕೊಮಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಕತೆಯಲ್ಲಿ ಸುಮತಿ,ವೇದಾ ಮತ್ತು ವಿಕ್ರಮ್ ಒಂದೇ ಕಡೆ ಕೆಲಸ ಮಾಡುವ ಸ್ನೇಹಿತರು. ಸುಮತಿಗೆ ವಿಕ್ರಮ್ ಮೇಲೆ ಒಲವು. ಇದಕ್ಕೂ ಮೊದಲು ವೇದಾ, ವಿಕ್ರಮ್ ಪ್ರೇಮಿಗಳು. ಕೊನೆಗೆ ಸಂಧಾನ ಮೂಲಕ ಸುಮತಿ ಇಬ್ಬರಿಗೂ ಮದುವೆ ಮಾಡಿಸುತ್ತಾಳೆ. ಒಳಗೆ ದ್ವೇಷದ ಜ್ವಾಲೆ ಹಾಗೆಯೇ ಇರುತ್ತದೆ. ವೃದ್ದಾಶ್ರಮವೊಂದರಲ್ಲಿ ನಡೆಯುವ ಹತ್ಯಾಕಾಂಡವನ್ನು ಕಣ್ಣಾರೆ ಕಂಡ ಸ್ನೇಹಿತೆಯರು ಮೊಬೈಲ್‌ದಲ್ಲಿ ಸೆರೆಹಿಡಿಯುತ್ತಾರೆ. ಅದನ್ನು ಶೂಟ್ ಮಾಡಿರುವುದು ಹಂತಕರಿಗೆ ಗೊತ್ತಾಗುತ್ದೆ. ಇಲ್ಲಿ ಸುಮತಿಯು ತನ್ನ ಸ್ನೇಹಿತೆ ಹಾಗೂ ಗಂಡನ ಮೇಲೆ ರಾಜಕಾರಣೀ, ಪೋಲೀಸರಿಗೆ ಹಚ್ಚಿಕೊಡುತ್ತಾಳೆ. ಅವರನ್ನು ಹಿಡಿದುಕೊಡಲು ಸಹಾಯ ಮಾಡುತ್ತಾಳೆ. ಒಂದು ಹಂತದಲ್ಲಿ ಪತಿ-ಪತ್ಮಿ ಕೊಲೆಯಾದಂತೆ ಸುಮತಿಗೂ ಅದೇ ಗತಿ ಬರುತ್ತದೆ. ಮುಂದೆ ರಾಜಕಾರಣಿ, ಪೋಲೀಸ್ ಇನ್ಸ್‌ಪೆಕ್ಟರ್ ಒಬ್ಬೋಬ್ಬರಾಗಿ ಮರ್ಡರ್ ಆಗುತ್ತಾರೆ. ಇದೆಲ್ಲಾವನ್ನು ಭೇದಿಸಲು ಎಸಿಪಿ ಎಂಟ್ರಿ ಕೊಡುತ್ತಾರೆ. ಆಗ ಇಡೀ ಪ್ರಕರಣ ತೆರೆದುಕೊಳ್ಳುವುದೇ ಸಾರಾಂಶವಾಗಿದೆ.
ಸಿನಿಮಾಕ್ಕೆ ಕತೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನ ಮತ್ತು ನಿರ್ಮಾಣ ಮಾಡಿರುವುದು ಚಿರಂಜೀವಿದೀಪಕ್. ನಿರಂಜನ್‌ಒಡೆಯರ್ ನಾಯಕ. ಕಾರುಣ್ಯಾರಾಮ್ ನಾಯಕಿ. ಶೀತಲ್‌ಶೆಟ್ಟಿ ಸೈಲೆಂಟ್ ವಿಲನ್. ಎಸಿಪಿಯಾಗಿ ಭಜರಂಗಿಲೋಕೇಶ್ ನಟನೆ ಚೆನ್ನಾಗಿದೆ. ಖಳನಾಯಕರುಗಳಾಗಿ ಹನುಮಂತೆಗೌಡ, ಡ್ಯಾನಿಯಲ್‌ಕುಟ್ಟಪ್ಪ ನೋಡಲು ಭಯ ಹುಟ್ಟಿಸುತ್ತದೆ. ಇದಕ್ಕೆ ಪೂರಕವಾಗಿ ಹಿನ್ನಲೆ ಸಂಗೀತ ಒದಗಿಸಿರುವ ಪ್ರದೀಪ್‌ವರ್ಮ ಕೆಲಸ ಸಾಥ್ ನೀಡಿದೆ. ನಾಗಾರ್ಜುನ್ ಛಾಯಾಗ್ರಹಣ, ವಿಕ್ರಂಮೋರ್ ಸಾಹಸ ಅಚ್ಚುಕಟ್ಟಾಗಿದೆ. ಕತೆಗೆ ಪೂರಕವಾಗಿ ಶೀರ್ಷಿಕೆ ಸೂಕ್ತವಾಗಿದೆ.