ಸಂಬಂದಗಳ ನಡುವಿನ ಅಪರಾಧಗಳು
ಎರಡು ಕೊಲೆಯನ್ನು ಭೇದಿಸುವ ‘ಆ ದೃಶ್ಯ’ ಚಿತ್ರದ ಕತೆಯಾಗಿದೆ. ಇದನ್ನು ಹುಡುಕಿಕೊಂಡು ಹೋಗುವ ತನಿಖಾಧಿಕಾರಿಗೆ ಒಂದೊಂದೇ ರಹಸ್ಯ ಘಟನೆಗಳು ಬಿಚ್ಚಿಕೊಳ್ಳುತ್ತದೆ. ಕೊನೆಗೆ ಅಪರಾಧಿಯನ್ನು ಹಿಡಿಯಲು ಹೋದಾಗ ಅಲ್ಲಿ ಆಗುವುದೇ ಬೇರೆಯಾಗಿರುತ್ತದೆ. ಇದರ ಹಿಂದಿನ ಮರ್ಮವೇನು. ಕೊಲೆಗೆ ಕಾರಣವಾದರೂ ಏನು ಎಂಬುದು ಕ್ಲೈಮಾಕ್ಸ್ ನಲ್ಲಿ ಗೊತ್ತಾಗುತ್ತದೆ. ತನಿಖೆ ಬೆಳಿಗ್ಗೆ ಶುರುವಾದರೆ ರಾತ್ರಿ ವೇಳಗೆ ಒಂದು ಹಂತಕ್ಕೆ ಬಂದಿರುತ್ತದೆ. ಇದರಿಂದ ನೋಡುಗನಿಗೆ ಒಂದು ರೀತಿಯ ಕುತೂಹಲ ಹುಟ್ಟಿಸುತ್ತದೆ. ನಾವು ಅಂದುಕೊಂಡಂತೆ ಆಗಿರುತ್ತದೆ ಎಂದು ಭಾವಿಸಿದರೆ ಅಲ್ಲಿ ಬೇರೆಯದೇ ನಡೆದಿರುತ್ತದೆ. ಹಾಗೇ ನೋಡಿದರೆ ಮೂರು ಕೇಸ್‌ಗಳು ಲಿಂಕ್ ಇರುವುದನ್ನು ತಿಳಿಯಲು ಟಾಕೀಸ್‌ಗೆ ಬರಬೇಕು.
ರವಿಚಂದ್ರನ್ ತನಿಖಾಧಿಕಾರಿಯಾಗಿ ಅವರೊಂದಿಗೆ ಹೊಸಬರೇ ನಟಿಸಿದ್ದಾರೆ. ಇದನ್ನು ಹೂರತುಪಡಿಸಿದರೆ ರಮೇಶ್‌ಭಟ್, ಅಚ್ಯುತಕುಮಾರ್ ಹಿರಿಯರು. ಅಜಿತ್‌ನಾಗರಾಜ್, ಯಶಸ್‌ಶೆಟ್ಟಿ, ಸಾಗರ್, ಅರ್ಜುನ್, ಚೈತ್ರಾಆಚಾರ್, ನಿಸರ್ಗ ಮುಂತಾದವರು ಇದ್ದಾರೆ. ಇವರೆಲ್ಲರನ್ನು ಒಂದು ಕಡೆ ಸೇರಿಸಿರುವ ನಿರ್ದೇಶಕ ಶಿವಗಣೇಶ್ ಶ್ರಮ ಪರದೆ ಮೇಲೆ ಚೆನ್ನಾಗಿ ಕಂಡುಬಂದಿದೆ. ಗೌತಂಶ್ರೀವತ್ಸ ಸಂಗೀತ ಮತ್ತು ವಿನೋಧ್‌ಭಾರತಿ ಕ್ಯಾಮಾರ ಕೆಲಸ ಚಿತ್ರಕ್ಕೆ ಮರೆಗು ತಂದಿದೆ. ಜೊತೆಗೆ ತಿರುವು, ಸಂದೇಶ ಜೊತೆಗೆ ಥ್ರಿಲ್ಲರ್, ಕುತೂಹಲ ಅಂಶಗಳು ಇರುವುದರಿಂದ ನೋಡುಗರಿಗೆ ಆಸಕ್ತಿ ಹುಟ್ಟಿಸುತ್ತದೆ. ಅಂದಹಾಗೆ ಚಿತ್ರಕ್ಕೆ ಬಂಡವಾಳ ಹೂಡಿರುವುದು ಕೆ.ಮಂಜು.