Amann Grewa ( Bomby )

Tuesday, October 23, 2018

1256

ಆಮದು ತಾರೆ ಅಮಾನ್ ಗ್ರೇವಾಲ್

ಚಂದನವನಕ್ಕೆ  ಆಮದು ತಾರೆಯರು ಬರುವುದು ಸರ್ವೆಸಾಮಾನ್ಯವಾಗಿದೆ. ಬೇರೆ ಭಾಷೆಯಲ್ಲಿ ನಟಿಸುತ್ತಿದ್ದರೂ ನಮ್ಮವರು ಆಫರ್ ನೀಡಿದರೆ ದಿಡೀರ್ ಅಂತ ಬರುತ್ತಾರೆ. ಅಂತಹ ಸಾಲಿಗೆ ಬಾಂಬೆ ನೀರೆ ಅಮಾನ್‌ಗ್ರೇವಾಲ್  ‘ತಲೆ ಬಾಚ್ಕೊಳ್ಳಿ ಪೌಡರ್ ಹಾಕ್ಕೊಳಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಬೆಂಗಳೂರಿಗೆ ಆಗಮಿಸಿದ್ದಾರೆ. ತಂದೆ ಆರ್ಮಿಯಲ್ಲಿ ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ತಾಯಿಗೆ ಚಿಕ್ಕಂದಿನಿಂದಲೂ ನಟಿಯಾಗಬೇಕೆಂಬ ಆಸೆ ಇತ್ತಂತೆ. ಅದು ಕೈಗೂಡಲಿಲ್ಲ. ಮಗಳ ಮೂಲಕವಾದರೂ ತನ್ನ ಆಸೆಯನ್ನು ಈಡೇರಿಸಿಕೊಂಡು ನಟಿಯಾಗಲು ಅನುಮತಿ ನೀಡಿದ್ದಾರೆ. ಇದಕ್ಕಂದೆ ನಟನಾ ತರಭೇತಿ ಕಾರ್ಯಗಾರದಲ್ಲಿ ಪಾಲ್ಗೋಂಡು ಅಭಿನಯದ ಬಗ್ಗೆ ತಾಲೀಮು ನಡೆಸಿದ ಬೆನ್ನಲ್ಲೆ ಪಂಜಾಬಿ ಭಾಷೆಯ ನಾಲ್ಕು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿಬಂದಿದೆ. ಇದರ ಮಧ್ಯೆ ಹಿಂದಿಯಲ್ಲಿ ಎರಡು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ನಟಿಯಾಗುವ ಮುನ್ನ ಸಿಂಗಪೂರ್ ಏರ್‌ಲೈನ್ಸ್‌ನಲ್ಲಿ  ಗಗನಸಖಿಯಾಗಿ ಹಲವಾರು ದೇಶಗಳನ್ನು ಸುತ್ತಾಡಿದ ಅನುಭವ ಇದೆಯಂತೆ. ಅಮೀರ್‌ಖಾನ್, ಶಾರುಖ್‌ಖಾನ್ ಇಷ್ಟಪಡುವ ನಟ. ಪ್ರಿಯಾಂಕಚೋಪ್ರ, ದೀಪಿಕಾಪಡುಕೋಣೆ ನಟನೆಯನ್ನು  ನೆನಪಿಸಿಕೊಳ್ಳುವ ಅಮಾನ್‌ಗೆ ಅವರಂತೆ ಒಳ್ಳೆ ಪಾತ್ರಗಳಲ್ಲಿ ನಟಿಸುವ ಆಸೆ.

ತೆಲುಗು, ತಮಿಳು ಭಾಷೆಗಳಿಂದ ಕರೆಗಳು ಬರುತ್ತಿದ್ದು ಮಾತುಕತೆ ಹಂತದಲ್ಲಿ ಇರುವುದರಿಂದ ಈಗಲೇ ಏನು ಹೇಳಲಾಗುವುದಿಲ್ಲ. ಸದ್ಯ ಕನ್ನಡದಲ್ಲಿ ನಟಿಸುತ್ತಿರುವುದರಿಂದ ಇದು ಮುಗಿದ ನಂತರ ನೋಡೋಣ ಅಂತಾರೆ. ಮೂರು ಭಾಷೆಯಲ್ಲಿ ನಟಿಸಿ ಉತ್ತಮ ನಟಿ ಎನಿಸಿಕೊಳ್ಳಬೇಕಂಬ ತವಕ. ಹಿಂದಿ ಚಿತ್ರರಂಗಕ್ಕೆ ಮೊದಲ ಸ್ಥಾನ ಕೊಡುತ್ತಾರಂತೆ. ಸ್ಯಾಂಡಲ್‌ವುಡ್‌ನಲ್ಲಿ ಕಾಲಿಟ್ಟಿರುವ ಅಮಾನ್‌ಗ್ರೇವಾಲ್‌ರನ್ನು  ಕನ್ನಡ ಚಿತ್ರರಸಿಕರು ಸ್ವೀಕರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,