ಮಾಡ್ರನ್ ಅಮ್ಮ
ಸ್ಯಾಂಡಲ್‌ವುಡ್‌ನಲ್ಲಿ ಅಮ್ಮ ಎಂದರೆ ತಟ್ಟನೆ ನೆನಪಿಗೆ ಬರುವುದು ಪಂಡರಿಭಾಯಿ. ಅಂತಹುದೆ ಆಧುನಿಕ ಅಮ್ಮ ಇದ್ದಾರೆ. ಅವರೆ ಶೈಲಜಾಜೋಷಿ. ಅವರ ಚಹರೆ ನೋಡಿದಾಗ ಮಂಗಳೂರಿನವರು ಅಂತ ಭಾಸವಾಗುತ್ತದೆ. ಆದರೆ ಇವರು ಉತ್ತರಕರ್ನಾಟಕದ ಗದಗ ಜಿಲ್ಲೆಯವರು. ಮಾತಾಡುವ ಭಾಷೆಯ ಧಾಟಿ ಬೆಂಗಳೂರಿನದೆ ಆಗಿರುತ್ತದೆ. ಇಪ್ಪತ್ತಾರು ವರ್ಷಗಳ ಹಿಂದೆ ಗುಲ್ಬರ್ಗಾದ ನಿರ್ಮಾಪಕರು ಮಹಾದಾಸಿ ಶರಣ ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂತು. ಅದರಲ್ಲಿ ಶ್ರೀನಿವಾಸಮೂರ್ತಿ ಅಭಿನಯಿಸಿದ್ದರು. ನಂತರ ಚಿತ್ರರಂಗದಿಂದ ಕೆಲಕಾಲ ದೂರವಿದ್ದ ಇವರಿಗೆ ಹದಿನೇಳು ವರ್ಷಗಳ ಹಿಂದೆ ನಾಗಭರಣರವರು ನಿರ್ದೇಶಿಸಿದ ಧಾರವಾಹಿಯಲ್ಲಿ ಅಭಿನಯಿಸಲು ಕರೆ ಬಂದಿದೆ. ನಂತರ ಎಸ್.ನಾರಾಯಣ್‌ರವರ ಪಾರ್ವತಿಯಲ್ಲಿ ಹಲವು ಕಂತುಗಳಲ್ಲಿ ಕಾಣಿಸಿಕೊಂಡಿದ್ದರಿಂದ ಅವರದೆ ನಿರ್ದೇಶನದ ಶಬ್ದವೇದಿ ಚಿತ್ರದಲ್ಲಿ ಪತಿಜೊತೆ ಜೊತೆ ನಟಿಸಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
ಅಲ್ಲಿಂದ ಪಯಣ ಶುರುವಾಗಿ ಚಿತ್ರರಂಗದಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಎಲ್ಲರಿಗೂ ಬೇಕಾದವರು ಆಗಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರನ್ನು ಎಲ್ಲರು ಮಾಡ್ರನ್ ಅಮ್ಮ ಅಂತಾರಂತೆ. ಕಿರಿತೆರೆಯಲ್ಲಿ ಸಾವಿರಕ್ಕೂ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸಿದ್ದು ಎರಡು ರಂಗದಲ್ಲಿ ವ್ಯತ್ಯಾಸವನ್ನು ಕಂಡಿಲ್ಲ ಅಂತಾರೆ. ಪತಿ ಎಲ್‌ಐಸಿಯಲ್ಲಿ ಅಧಿಕಾರಿಯಾಗಿ ಪತ್ನಿಯ ಬೆಂಬಲಕ್ಕೆ ನಿಂತು ಸಹಕಾರ ನೀಡುತ್ತಿದ್ದಾರೆ. ಮಗ ಅಮೇರಿಕಾದಲ್ಲಿ, ಮಗಳು ದುಬೈನಲ್ಲಿ ವಾಸವಾಗಿದ್ದು, ನಟನೆ ಬಿಟ್ಟರೆ ಬೇರೇನು ಹವ್ಯಾಸ ಇಲ್ಲ ಎಂಬ ಮಾತು ಶೈಲಜಾ ಜೋಷಿ ಉರುಫ್ ಅಮ್ಮ. ಪೂಜಗಾಂದಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಭಿನೇತ್ರಿ ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗಲಿದೆ.