ಅವಕಾಶಗಳ ನಿರೀಕ್ಷ್ಷೆಯಲ್ಲಿ ಅಪೂರ್ವ
ಚಂದನವನದಲ್ಲಿ ಅದೃಷ್ಟ ಪರೀಕ್ಷಿಸಲು ಕಲಾವಿದರು ಬರುತ್ತಿದ್ದಾರೆ. ಇದರ ಸಾಲಿಗೆ ಬೆಂಗಳೂರಿನ ಅಪೂರ್ವ ಕೂಡ ಒಬ್ಬರು. ಮಾಸ್ ಕಮ್ಯೂನಿಕೇಷನ್‌ನಲ್ಲಿ ಪದವಿ ಪಡೆದಿರುವ ಇವರಿಗೆ ಚಿಕ್ಕಂದಿನಿಂದಲೂ ನಟನೆ ಮಾಡಬೇಕೆಂಬ ತುಡಿತ ಇತ್ತು. ಇದಕ್ಕೆ ಪೋಷಕರಿಂದ ಪ್ರೋತ್ಸಾಹ ಸಿಕ್ಕಿದ್ದೆ ಮುಂದಕ್ಕೆ ಹೆಜ್ಜೆ ಇಡಲು ದಾರಿಯಾಗಿದೆ. ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಸೇವೆ ಸಲ್ಲಿಸಿದ್ದು, ಉಡುಪಿಯಲ್ಲಿರುವ ಖಾಸಗಿ ಚಾನಲ್‌ನಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ಅನುರೂಪ ಧಾರವಾಹಿಯಲ್ಲಿ ಬ್ಯುಸಿ ಇದ್ದಾರೆ. ಮಣಿಪಾಲ್‌ನಲ್ಲಿ ವ್ಯಾಸಾಂಗ ಮಾಡುತ್ತಿರುವಾಗ ನಿರ್ದೇಶಕಿ ಸಂಜೋತ ರವರಿಂದ ಕರೆ ಬಂತು. ಅದರಂತೆ ಅಡಿಷನ್‌ನಲ್ಲಿ ಭಾಗಿಯಾಗಿ ಮಿರ್ಚಿ ಮಂಡಕ್ಕಿ ಕಡಕ್ ಚಾಯ್ ಚಿತ್ರದಲ್ಲಿ ಹಳ್ಳಿ ಹುಡುಗಿ ಪಟ್ಟಣಕ್ಕೆ ಬಂದು ಬವಣೆ ಪಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪ ಸೀನಿಯರ್ ಕನ್ಸಲ್‌ಟಂಟ್ ಅಮ್ಮ ಶಿಕ್ಷಕಿ, ಅಕ್ಕ ಇಂಜಿನಿಯರ್ ಇವರೆಲ್ಲರೂ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಿರುವುದರಿಂದ ಖುಷಿಯಾಗಿದೆ ಅಂತೆ.
ಕಹಾನಿ ಚಿತ್ರ ವೀಕ್ಷಿಸಿ ವಿದ್ಯಾಬಾಲನ್ ಅಭಿಮಾನಿಯಾಗಿರುವ ಅಪೂರ್ವ ಅಂತಹ ಪಾತ್ರಗಳನ್ನು ಮಾಡುವ ಬಯಕೆ ಇದೆ. ಕನ್ನಡದಲ್ಲಿ ರಾಧಿಕಾಪಂಡಿತ್ ಅಮ್ಮನ ಕಾಲದಲ್ಲಿ ಕಲ್ಪನಾ ಇಷ್ಟ ಪಡುವ ಇವರಿಗೆ ಇಂತಹುದೆ ನಟನೆ ಮಾಡುವ ಶಪಥ ಹಾಕಿಕೊಂಡಿಲ್ಲ. ಮಿ.ಮಿಸ್ಟರ್ ರಾಮಾಚಾರಿ ಚಿತ್ರ ನೋಡಿ ಯಶ್‌ರಿಗೆ ಮನಸೋತ್ತಿದ್ದಾರೆ. ಪುನೀತ್‌ರೊಂದಿಗೆ ಯಾವ ಪಾತ್ರವಾದರೂ ನಟಿಸುವ ಬೃಹತ್ ಆಸೆ ಇದೆ ಅಂತ ಕಣ್ಣನ್ನು ಅರಳಿಸುತ್ತಾರೆ. ಅವರನ್ನು ಭೇಟಿ ಮಾಢುವ ಅವಕಾಶ ಸಿಕ್ಕಿಲ್ಲ. ತಮಿಳು, ತೆಲುಗು ಕಡೆಯಿಂದ ಕರೆ ಬರುತ್ತಿದೆ. ಅದಿನ್ನು ಮಾತುಕತೆಯಲ್ಲಿ ಇದೆ. ಈಗಲೆ ಏನು ಹೇಳಲು ಬರುವುದಿಲ್ಲ. ಮಾತೃಭಾಷೆ ತೆಲುಗು ಆದರೂ ಕನ್ನಡದಲ್ಲಿ ನಟಿಸಲು ಮೊದಲು ಆದ್ಯತೆ ಕೊಡುತ್ತೇನೆ ಅಂತ ಭಾಷೆಯ ಮೇಲೆ ವಾಂಚಲ್ಯ ಇದೆ ಎಂದು ತೋರಿಸುತ್ತಾರೆ ಅಪೂರ್ವ. ಇವರಿಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳು ಸಿಗಲಿ ಎಂಬ ಶುಭಹಾರೈಕೆ ನಮ್ಮ ಕಡೆಯಿಂದ ಸಲ್ಲುತ್ತದೆ.