ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ. ಆಟದಲ್ಲಿ ಎರಡು ತಂಡವಿದ್ದು, ಪ್ರತಿ ತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬು ಕೊಡಲು ತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆ ಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತ ಇಲ್ಲಿ ಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲು ತಾರೆಯರು ಬರುತ್ತಿರುವುದು ಒಂದು ವಿಶೇಷ. ಹಿರಿಯರಿಂದ ಕಿರಿಯರವರೆಗೂ ಮನೆಮಂದಿಯೆಲ್ಲಾ ಕೂತು ನೋಡುವಂತ ಶೋ “ಸವಾಲ್ ಗೆ ಸೈ”.
ಹಿರಿತೆರೆ ಮತ್ತು ಕಿರುತೆರೆ, ಎರಡರಲ್ಲೂ ತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯ ರಾಂ, ಇದೇ ಮೊದಲ ಬಾರಿಗೆ “ಸಾವಲ್ ಗೆ ಸೈ” ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆ ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್ ದೇಶಪಾಂಡೆ ಸಹ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ.
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ ಎಂಬುದು ಉದಯ ಟಿವಿಯ ಆಶಯ.