ತಾಯಿಯ ಕರುಳನ್ನು ಕಣ್ಣಾರೆ ಕಂಡು ನಡುಗಿದ “ಮೋಹನ್”
ತುತ್ತಾ ಮುತ್ತಾ ಇದೇ ಶನಿವಾರ ರಾತ್ರಿ ೯ಕ್ಕೆ
ಇದು ಪ್ರಖ್ಯಾತ ನಾಯಕ ಹಾಸ್ಯ ನಟ ಮೋಹನ್ರವರು ನಿರೂಪಕ ನಿರಂಜನ್ ದೇಶಪಾಂಡೆ ಅವರೊಂದಿಗೆ ತಮಗಾದ ಅಪ್ರಾಕೃತಿಕ ಘಟನೆಗಳನ್ನು ಉದಯ ಟಿವಿಯ ಹೊಸ ಕಾರ್ಯಕ್ರಮವಾದ ತುತ್ತಾ ಮುತ್ತಾದಲ್ಲಿ ಹಂಚಿಕೊಂಡಿದ್ದಾರೆ.
ಅತಿ ಹೆಚ್ಚು ವೀಕ್ಷಣೆ ಆಗುತ್ತಿರುವ ಕಾರ್ಯಕ್ರಮಗಳಲ್ಲಿ ಒಂದಾದ ತುತ್ತಾ ಮುತ್ತಾದ ಈ ವಾರದ ಸಂಚಿಕೆಯಲ್ಲಿ ವೀಕ್ಷಕರಿಗೆ ಒಂದು ರಸದೌತಣವೇ ಕಾದಿದೆ. ಮೋಹನ್ ತಮ್ಮ ಕುಟುಂಬದೊಂದಿಗೆ ಇದೇ ಶನಿವಾರ ೯ ಘಂಟೆಗೆ ಕಾಣಿಸಿಕೊಳ್ಳಲಿದ್ದಾರೆ.
ಉಗ್ರ ನರಸಿಂಹ ಎಂಬ ಆಕ್ಷನ್ ಚತ್ರದ ಸೆಟ್ನಲ್ಲಿ ನಡೆದ ಆ ವಿಚಿತ್ರ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಮೋಹನ್ ತಾನು ತಿಂದ ಪೆಟ್ಟುಗಳ ಬಗ್ಗೆ ತಿಳಿಸಿದರು ನಾವು ಚಿತ್ರೀಕರಣ ಮಾಡುತ್ತಿದ್ದ ಬಂಗಲೆಯೊಂದರಲ್ಲಿ
ದೆವ್ವ ಭೂತಗಳಿವೆ ಎಂದು ಹಲವಾರು ಬಾರಿ ನಮಗೆ ಎಚ್ಚರಿಸಲಾಗಿತ್ತು. ಅದಕ್ಕೆ ಬೆಲೆ ಕೊಡದೆ ನಾವು ಕೆಲಸ
ಮುಂದುವರಿಸಿದೆವು. ಅದು ಹೇಗೋ ಗೊತ್ತಿಲ್ಲ ನನ್ನ ಕುತ್ತಿಗೆಯ ಮೇಲೆ ಒಂದು ದೊಡ್ಡ ಹಂಚು ಬಂದು ಬಿದ್ದು ನನ್ನ ಪ್ರಜ್ಞೆಯನ್ನು ಹೋಗಿಸಿತು. ನಂತರ ನನ್ನ ಬೆನ್ನಿನಲ್ಲಿ ಇನ್ನೊಂದು ಗಾಯವಾಗಿ ವಾರವಿಡೀ ಶೂಟಿಂಗ್ ಸ್ಪಾಟಿಗೆ ಡಾಕ್ಟರ್ ಬಂದು ಸೂಜಿ ಚುಚ್ಚ ಬೇಕಾಯಿತು. ನಾವು ಸ್ಥಳದಲ್ಲಿ ಶಾಂತಿಯುತವಾಗಿ ಚಿತ್ರೀಕರಣ ಮಾಡಲು ಸಾಧ್ಯವೇ ಆಗಲಿಲ್ಲ ಎಂದರು.
ರಂಗಭೂಮಿ ಕಲಾವಿದರಾದ ಮೋಹನ್ ಅವರ ಪತ್ನಿ ವಿದ್ಯಾ ಸಂಚಿಕೆಯಲ್ಲಿ ಹಾಡುಗಳನ್ನು ಹಾಡಿ ಎಲ್ಲರಿಗೂ ಸಂತಸ ತಂದರು ತಮ್ಮ ಪ್ರೇಮ ಕಥೆಯನ್ನು ನೆನೆಯುತ್ತ ಮೋಹನ್ ಕಾಲೇಜಿನಲ್ಲಿದ್ದ ಮಹಿಳಾ ಫ್ಯಾನ್ಸ್ ಬಗ್ಗೆ ತಿಳಿಸಿಕೊಟ್ಟರು.
ಅವರ ತಾಯಿ ಸತ್ಯಭಾಮ ತನ್ನ ಮಗನ ಸಕಾರಾತ್ಮಕ ವರ್ತನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸತ್ಯಭಾಮಾರವರು ಕರುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಿ ಬಂದ ಸಮಯದ ಬಗ್ಗೆ ವಿವರಿಸಿ, ಆಪರೇಷನ್ ನಂತರ ತಾಯಿಯ ಕರುಳನ್ನು ಕೈಯಲ್ಲಿ ಹಿಡಿದ ಕ್ಷಣವನ್ನು ನೋವಿನಿಂದ ವಿವರಿಸಿದರು. ತಾಯಿ ಮಗುವಿನ ಕರಳು ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ ಆದರೆ ಆಕೆಯ ದೇಹದ ಒಂದು ಭಾಗವನ್ನು ಕೈಯಲ್ಲಿ ಹಿಡಿಯುವಂತಹ ನತದೃಷ್ಟ ಸನ್ನಿವೇಶ ಇನ್ಯಾರಿಗೂ ಬಾರದಿರಲಿ ಎಂದು ಹೇಳಿಕೊಂಡರು.
“ತುತ್ತಾ ಮುತ್ತಾ” ಇದೇ ಶನಿವಾರ ರಾತ್ರಿ ೯ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.