Siri Kannada-Movies and Entertainment Channel

Wednesday, December 12, 2018

1020

ಡದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ

ಸಿರಿ ಕನ್ನಡ ಕನ್ನಡಿಗರ ಮನೆ ಮನಕೆ

ಕನ್ನಡ ಸಿನಿರಸಿಕರಿಗೊಂದು ಸಂತಸದ ಸುದ್ದಿ. ಸಿರಿಕನ್ನಡ - ಸಿನಿಮಾ ಮತ್ತು ಮನರಂಜನಾ ವಾಹಿನಿ ವೀಕ್ಷಕರ ಮನೆಯಂಗಳದಲ್ಲಿ ಸಿನಿಮಾ ಮತ್ತು ಕಾರ್ಯಕ್ರಮಗಳ ಕಂಪನ್ನು ಬೀರಲಿದೆ.

ಸಿರಿಕನ್ನಡ ವಾಹಿನಿಯ ಮುಖ್ಯಸ್ಥರು ಹೇಳುವಂತೆ ೮೪ರ ವಸಂತದಲ್ಲಿರುವ ಕನ್ನಡ ಸಿನಿಮಾ ರಂಗಕ್ಕೆ ಸಿರಿಕನ್ನಡ ವಾಹಿನಿಯು ಹೆಮ್ಮೆಯ ಕೊಡುಗೆಯಾಗಿದ್ದು ಈ ವಾಹಿನಿಯ ಪರಿಕಲ್ಪನೆಯೇ ವಿಭಿನ್ನ. ಸಿನಿಮಾ ವಾಹಿನಿಗಳೆಂದರೆ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿರುತ್ತವೆ ಆದರೆ ಸಿರಿಕನ್ನಡ ಇದಕ್ಕೂ ಮೀರಿದ ಮನರಂಜನೆಯನ್ನು ತನ್ನ ವೀಕ್ಷಕರಿಗೆ ನೀಡಲಿದೆ. ಒಂದು ಸಿನಿಮಾದಿಂದ ವೀಕ್ಷಕರು ಬಯಸುವುದಯ ಪರಿಪೂರ್ಣ ಮನರಂಜನೆ, ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮೇಕಿಂಗ್‌ನ ಪ್ರತಿಯಂದು ಹಂತವನ್ನು ಒಂದು ಎಂಟರ್ಟೈನಮೆಂಟ್ ಪ್ಯಾಕೇಜ್ ಮೂಲಕ ವೀಕ್ಷಕರಿಗೆ ಕೊಡುವುದಲ್ಲದೇ ಹೊಸ ಸಿನಿಮಾಗಳ ಹೊಸ ವಿಷಯ, ನಟ ನಟಿಯರ ಲೈಫ್ ಸ್ಟೈಲ್, ಹಳೆಯ ಸಿನಿಮಾಗಳ ಮಧುರ ನೆನಪು ಎಲ್ಲವೂ ಕಾರ್ಯಕ್ರಮಗಳಾಗಿ ವೀಕ್ಷಕರನ್ನು ರಂಜಿಸಲಿವೆ. 

ಎವರ್ಗ್ರೀನ್ ಸಾಂಗ್ಸ್, ನಕ್ಕು ನಗಿಸೋ ಕಾಮಿಡಿ ಸೀನ್ಸ್ ಇದರೊಟ್ಟಿಗೆ ಭವಿಷ್ಯದ ಚಿಂತಕರಿಗೆ ಜ್ಯೋತಿಷ್ಯ, ಆರೋಗ್ಯ ವೃದ್ದಿಗಾಗಿ ಹೆಲ್ಥ್ ಪ್ರೋಗ್ರಾಮ್, ಕಣ್ಮನ ತಣಿಸೋ ಟ್ರಾವೆಲ್ ಶೋ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಸಿರಿಕನ್ನಡ ವಾಹಿನಿ ವೀಕ್ಷಕರಿಗೆ ನೀಡಲಿದೆ.

ಸಿರಿಕನ್ನಡದಲ್ಲಿ ಅತ್ಯುತ್ತಮ ಸಾಂಸಾರಿಕ, ಹಾಸ್ಯ, ಥ್ರಿಲ್ಲರ್, ಭಕ್ತಿಪ್ರಧಾನ, ಪ್ರೇಮಕಥೆ ಎಲ್ಲಾ ರೀತಿಯ ಸಿನಿಮಾಗಳ ಸಂಗ್ರಯವಿದ್ದು ಎಲ್ಲಾ ವರ್ಗದ ವೀಕ್ಷಕರನ್ನು ರಂಗಿಸಲಿದೆ. ಮುಂಬರುವ ದಿನಗಳಲ್ಲಿ ನಮ್ಮ ಸಿನಿಮಾ ಸಂಗ್ರಹವನ್ನು ಹೆಚ್ಚಿಸುತ್ತಾ ಸಾಗುವ ಯೋಜನೆ ನಮ್ಮದಾಗಿದ್ದು ಹೆಚ್ಚು ಹೆಚ್ಚು ಉತ್ತಮ ಚಿತ್ರಗಳನ್ನು ಚಿತ್ರ ಪ್ರೇಮಿಗಳಿಗೆ ಕೋಡೋ ಹೆಬ್ಬಯಕೆ ಸಿರಿಕನ್ನಡದ್ದು. ಕಾರ್ಯಕ್ರಮಗಳಲ್ಲೂ ವಿಭಿನ್ನ ಬಗೆಯ ವಿನೂತನ ಪ್ರೋಗ್ರಾಮ್ ರೂಪಿಸೋ ಬಯಕೆ ನಮ್ಮದಾಗಿದ್ದು ಇದಕ್ಕಾಗಿ ಪ್ರತಿಭಾವಂತರ ತಂಡ ಮತ್ತು ಉತ್ಕೃಷ್ಠ ತಂತ್ರಜ್ಞಾನ ಬರುತ್ತಿರೋ ಸಿರಿಕನ್ನಡ ವಾಹಿನಿ ಉಚಿತವಾಗಿ (ಪ್ರೀ ಟು ಏರ್) ನಿಮಗೆ ಲಭ್ಯವಾಗಿದ್ದು ಸಿರಿಕನ್ನಡ ವಾಹಿನಿ ವೀಕ್ಷಿಸಲು ನಿಮ್ಮ ಕೇಬಲ್ ಆಪರೇಟರ್ಗಳನ್ನು ಸಂಪರ್ಕಿಸಬಹುದಾಗಿದೆ.

ತಾರೆಯರ ಅಂದ ಚಂದಕ್ಕೆ ಅವರು ತಿನ್ನುವ ಆಹಾರವೂ ಅಷ್ಟೇ ಮುಖ್ಯ. ಬಗೆಗೆ ತಿಳಿಸಲು ವಾಹಿನಿಯಲ್ಲಿ ವಿಭ್ನಿನ್ನವಾದ ಅಡುಗೆ ಷೋ ಪ್ರಾರಂಭಿಸುತ್ತಿದ್ದಾರೆ. ಒಟ್ಟಾರೆ ಕರ್ನಾಟಕದ ಮೊದಲ ಸಿನಿಮಾ ಮತ್ತು ಮನರಂಜನಾ ವಾಹಿನಿ ಎಂಬ ಹೆಗ್ಗಳಿಕೆ "ಸಿರಿ ಕನ್ನಡ" ಚಾನಲ್ಗೆ ಇದೆ.

 

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯಂತೆ ಕನ್ನಡಿಗರ ನಾಡಿಯಾಗಿ ಮೂಡಿಬರಲಿದೆ  ಸಿರಿಕನ್ನಡ ವಾಹಿನಿ. ನಿಮ್ಮ ಅಭಿಮಾನದ ವಾಹಿನಿಯನ್ನು ಎಲ್ಲರೂ ಹರಸಿ ಹಾರೈಸಬೇಕೆಂಬುದು ಸಿರಿಕನ್ನಡ ತಂಡದ ಆಶಯ.

 

Copyright@2018 Chitralahari | All Rights Reserved. Photo Journalist K.S. Mokshendra,