Sevanthi.Udaya Tv

Friday, February 22, 2019

736

 

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಸೇವಂತಿ

ಫೆ.೨೫ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ .೩೦ಕ್ಕೆ

 

ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಸಾಲಿನಲ್ಲಿ ಈಗ ಹೊಸ ಸೇರ್ಪಡೆ ಸೇವಂತಿ.

ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಕನ್ನಡದ ಮನರಂಜನಾ ವಾಹಿನಿಗಳ ವ್ಯಾಪ್ತಿ. ಹೊಸ ತಂತ್ರಜ್ಞಾನ, ವಿನೂತನ ಕಥಾ ಹಂದರ, ನವಿರಾದ ನಿರೂಪಣೆ ಎಲ್ಲವನ್ನೂ ಒಳಗೊಂಡು ಕನ್ನಡದ ವೀಕ್ಷಕರಿಗೆ ಹೊಸ ಧಾರಾವಾಹಿಯನ್ನು ಉಣಬಡಿಸಲು ಸಿದ್ಧತೆ ನಡೆಸಿದೆ ಉದಯ ಟಿವಿಸೇವಂತಿ ಎಂಬ ಸುಂದರ ಧಾರಾವಾಹಿ ಫೆ. ೨೫ ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ .೩೦ಕ್ಕೆ ಪ್ರಸಾರವಾಗಲಿದೆ.

ಒಂದಾಗಬೇಕೆಂದುಕೊಂಡಾಗ ದೂರವಾಗುವ, ದೂರವಾಗಬೇಕೆಂದುಕೊಂಡಾಗ ಒಂದಾಗಲು ಬಯಸುವ  ಹುಡುಗಿಯ ಕಥೆ ಸೇವಂತಿ - ಒಂದು ದೃಶ್ಯ ವೈಭವವಾಗಿ ವೀಕ್ಷಕರ ಮುಂದೆ ಬರಲಿದೆ.

ಪ್ರಸಿದ್ಧ ನಿರ್ಮಾಣ ಸಂಸ್ಥೆ ಸರೆಗಮ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೆ ಬಹಳ ದಿನಗಳ ನಂತರ ಕಿರುತೆರೆಗೆ ಆಗಮಿಸುತ್ತಿರುವ ಹಿರಿಯ ನಟಿ ಭಾರತಿ ವಿಷ್ಣುವರ್ದನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಂಜುನಾಥ್ ಭಟ್, ಹಂಸ, ಮೈಕೋ ಶಿವು, ಕೃಷ್ಣ ಅಡಿಗ, ಸಂಗೀತ, ಗಿರೀಶ್ ಅಭಿನಯಿಸುತ್ತಿದ್ದಾರೆ.

ಚೆಂದುಳ್ಳಿ ಚೆಲುವೆ ನಟಿ ಪಲ್ಲವಿ ಗೌಡ ಸೇವಂತಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇವರ ಜೋಡಿಯಾಗಿ ಹ್ಯಾಂಡ್ ಸಮ್ ಶಿಶಿರ್ ಅವರು ನಾಯಕ ಅರ್ಜುನ್ ಆಗಿ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

ಸೇವಂತಿ ಇದೇ ಫೆಬ್ರವರಿ ೨೫ ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ .೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,