Kshama.Udaya Tv.

Tuesday, February 26, 2019

901

 

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ ಕ್ಷಮಾ

ಮಾರ್ಚ್ ೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ .೦೦ಕ್ಕೆ

 

ಉದಯ ಟಿವಿ ಹೊಸ ಹೊಸ ಕಥೆಗಳ ಮುಖಾಂತರ ವೀಕ್ಷಕರ ಮನಗೆಲ್ಲುವಲ್ಲಿ ಸದಾ ಮುಂಚೂಣಿಯಲ್ಲಿರುತ್ತದೆ. ಈಗ ಮಹಿಳಾ ಪ್ರಧಾನ ಕಥೆಯೊಂದನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪನ್ನು ಮೂಡಿಸಿದ್ದಾಳೆ. ಮನೆಯನ್ನು ಸೌಹಾರ್ದಯುತವಾಗಿ ನಡೆಸುವುದರಿಂದ ಹಿಡಿದು ಕಾರ್ಯಕ್ಷೇತ್ರದಲ್ಲೂ ಅಗ್ರಸ್ಥಾನವನ್ನು ಸಾಧಿಸಬಲ್ಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆ. ಹಾಗಾಗೀನೇ ಹೆಣ್ಣನ್ನು ಕ್ಷಮೆಗೆ ಮತ್ತೊಂದು ಹೆಸರು ಎನ್ನುತ್ತಾರೆ. ಭೂಮಿಗೆ ಮತ್ತೊಂದು ರೂಪ ಎನ್ನುತ್ತಾರೆ. ಇಂತಹ ಭೂಮಿತೂಕದ ಹೆಣ್ಣಿನ ಕಥೆ ಕ್ಷಮಾ ಉದಯ ಟಿವಿಯಲ್ಲಿ ಮಾರ್ಚ್ ೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ೮ಕ್ಕೆ ಶುರುವಾಗಲಿದೆ.

ಮಧ್ಯಮ ವಯಸ್ಸಿನ ಹೆಣ್ಣೊಬ್ಬಳ ಹೋರಾಟ, ಪ್ರಾಮಾಣಿಕವಾಗಿ ಸಂಸಾರ ನಡೆಸುವ ಕಷ್ಟ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅನುಭವಿಸುವ ಪರಿಪಾಟಲುಗಳು ಕಥೆಯ ಜೀವಾಳ. ಕ್ಷಮಾ ಇಬ್ಬರು ಮಕ್ಕಳ ತಾಯಿ. ಗಂಡ ಬಿಟ್ಟು ಹೋದಾಗ ತನ್ನ ಸಂಸಾರದ ಜವಾಬ್ದಾರಿಯನ್ನು ಹೊತ್ತ ವೀರಮಹಿಳೆ. ತನ್ನ ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸ ಕೊಡುವಲ್ಲಿ ಸಫಲಳಾಗುತ್ತಾಳಾ? ಸಮಾಜ ಒಂಟಿ ಮಹಿಳೆಗೆ ಸೂರು ಕಲ್ಪಿಸಿಕೊಳ್ಳಲು ಅವಕಾಶ ಮಾಡಿಕೊಡತ್ತಾ? ಇಂತಹ ಸೂಕ್ಷ್ಮ ಎಳೆಯೊಂದಿಗೆ ಸಾಗುವ ಕಥೆ ಕ್ಷಮಾ.

ಧಾರಾವಾಹಿರಂಗದಲ್ಲಿ ಹತ್ತಾರು ಸೂಪರ್ಹಿಟ್ ಧಾರಾವಾಹಿ ಕೊಟ್ಟಿರುವ ಭಾರತೀಶ್ ನಿರ್ದೇಶನ ಮತ್ತು ಮೀಡಿಯಾ ಹೌಸ್ ನಿರ್ಮಾಣ ಜವಾಬ್ದಾರಿ ಹೊತ್ತಿದೆ. ಮುಖ್ಯಭೂಮಿಕೆಯಲ್ಲಿ ಕ್ಷಮಾ ಪಾತ್ರಧಾರಿಯಾಗಿ ಶ್ವೇತಾ ರಾವ್ ಮಾಡುತ್ತಿದ್ದು ಇತರ ತಾರಾಗಣದಲ್ಲಿ ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರು ಇದ್ದಾರೆ.

ಕ್ಷಮಾ ಮಾರ್ಚ್ ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ ಗಂಟೆಗೆ  ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,