ಡಾ ಶಿವರಾಜ್ ಕುಮಾರ್ ಹಾಗು ನಿವೇದಿತಾ ಶಿವರಾಜ್ ಕುಮಾರ್ ರವರ ಶ್ರೀ ಮುತ್ತು ಸಿನಿ ಸರ್ವಿಸಸ್ ಹಾಗು ಸಕ್ಕತ್ ಸ್ಟುಡಿಯೋ ಸಹನಿಮಾಣದ ಕನ್ನಡದ ವೆಬ್ ಸರಣಿ " ಹನಿಮೂನ್ " ಇತ್ತೀಚಿಗಷ್ಟೇ ಕೇರಳದ ಅಲ್ಲೆಪಿಯಲ್ಲಿ ಚಿತ್ರಿಕರಣ ಮಾಡಲಾಯಿತು
ಕೇರಳದ ಅಲ್ಲೆಪ್ಪಿ ಜಾಗದಲ್ಲಿ ಚಿತ್ರಿಕರಣ ಮಾಡಲಾಗಿರುವ ಭಾರತದ ಮೊದಲ ವೆಬ್ ಸರಣಿ ಇದಾಗಿದೆ.ಸಾಕಷ್ಟು ಮಳೆಯಾಲಂನ ಕಲಾವಿದರು ಇದರಲ್ಲಿ ನಟಿಸಿದ್ದಾರೆ.
ನಗಭೂಷಣ ಹಾಗು ಸಂಜನಾ ಆನಂದ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಹದ್ದೂರ್, ಬರ್ಜರಿ ಹಾಗು ಯೆಜಮಾನ ಚಿತ್ರಗಳನ್ನು ಸೆರೆಹಿಡಿದ ಶ್ರೀಶ ಕೂಡುವಳ್ಳಿ ಈ ಸರಣಿಯನ್ನು ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ವಾಸುಕಿ ವೈಭವ್ ರವರ ಸಂಗೀತ ಸಂಯೋಜಿಸುತ್ತಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ಸಹಾಯ ಮಾಡಿದ ಅಲ್ಲೆಪಿಯ DC ನಮ್ಮ ಕನ್ನಡದ ಮಂಡ್ಯದ ಸುಹಸ್ ರವರಿಗೆ ಹನಿಮೂನ್ ತಂಡ ಕೃತಜ್ಞತೆಯ್ನನು ಸಲ್ಲಿಸುತ್ತದೆ.
ಬೆಂಗಳೂರಿನ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು . ಹೇಟ್ ಯು ರೋಮಿಯೋ ವೆಬ್ ಸರಣಿಯ ನಂತರ ಈ ಸರಣಿಯನ್ನು ಬಿಡುಗಡೆ ಮಡಲಾಗುವುದು