ಪುನೀತ್ರಾಜಕುಮಾರ್ ಸಾರಥ್ಯದಲ್ಲಿ ಕನ್ನಡದ ಕೋಟ್ಯಾಧಿಪತಿ
ಏಳು ವರ್ಷಗಳ ನಂತರ ಪುನೀತ್‌ರಾಜ್‌ಕುಮಾರ್ ಮತ್ತೆ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಕನ್ನಡಿಗರಿಗೆ ಖುಷಿಯ ವಿಷಯವಾಗಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪುನೀತ್ ೨೦೦೦ದಲ್ಲಿ ಕೌನ್ ಬನೇಗ ಕರೋರ್‌ಪತಿಗೆ ಅಮಿತಾಬ್‌ಬಚ್ಚನ್ ನಡೆಸಿಕೊಡುತ್ತಿದ್ದನ್ನು ಅಪ್ಪಾಜಿ ತಪ್ಪದೆ ನೋಡುತ್ತಿದ್ದರು. ೨೦೧೧ರಂದು ಕನ್ನಡದಲ್ಲಿ ನಡೆಸಿಕೊಡಲು ಕರೆ ಬಂದಾಗ ಭಯವಾಯಿತು.. ನಂತರ ಸಿದ್ದಾರ್ಥ್‌ಬಸು ಅವರಲ್ಲಿ ತರಭೇತಿ ಪಡೆದುಕೊಂಡು, ಅಣ್ಣಂದಿರು ಧೈರ್ಯ ತುಂಬಿದ್ದರಿಂದ ಹಾಟ್ ಸೀಟಿಗೆ ಬರಲಾಯಿತು. ಸ್ಪರ್ಧಿಗಳು ಕೊಡುತ್ತಿದ್ದ ಉತ್ತರ ನನ್ನ ಜೀವನದ ಬದಲಾವಣೆ, ಅವರುಗಳಿಂದ ಸಾಕಷ್ಟು ಜ್ಘಾನ ಸಂಪಾದನೆ ಆಯಿತು. ಸರಸ್ವತಿ ಮೂಲಕ ಲಕ್ಷಿಯನ್ನು ಹೊತ್ತುಕೊಂಡು ಹೋಗುತ್ತಾರೆ. ಇದು ಯಾವಾಗಲೂ ನನಗೆ ವಿಶೇಷ ಶೋ. ಏನೂ ತಿಳಿಯದಂತೆ ಇಲ್ಲಿಗೆ ಬಂದು ಸ್ಪರ್ಧಿಗಳಿಗೆ ಹುಮ್ಮಸ್ಸು ತಂದು ದುಡ್ಡು ತೆಗೆದುಕೊಂಡು ಹೋಗಲು ಸಹಕಾರ ಮಾಡುವುದೇ ಗುರಿಯಾಗಿದೆ ಎಂದರು.
ಶೋದ ರೂಪರೇಷೆಗಳು ಹಾಗೆಯೇ ಇರುತ್ತದೆ. ಸ್ಪರ್ಧಿಗಳ ಕತೆಗಳು, ಅವರ ಅಗತ್ಯಗಳು ಕೋಟಿ ರೂಪಾಯಿ ಗೆಲ್ಲಲು ಅವರು ಪಡುವ ಪ್ರಯತ್ನ, ಬುದ್ದಿವಂತಿಕೆ ಮುಂತಾದವುಗಳನ್ನು ತೋರಿಸುವ ವಿಧಾನ ಹೊಸದಾಗಿರುತ್ತದೆ. ಪುನೀತ್ ಅವರು ವಾಹಿನಿಗೆ ಮತ್ತೋಮ್ಮೆ ಬಂದು ನಡೆಸಿಕೊಡುತ್ತಿರುವುದು ಹೆಮ್ಮೆಯಾಗಿದೆ. ವೂಟ್ ಮತ್ತು ಮೈ ಜಿಯೋ ಆಪ್‌ಗಳಲ್ಲಿ ‘ಪ್ಲೇ ಅಲಾಂಗ್’ ಮೂಲಕ ಕಾರ್ಯಕ್ರಮ ವೀಕ್ಷಿಸುವ ಜನರು ಕಾರ್ಯಕ್ರಮದ ಜೊತೆಜೊತೆಗೆ ಕೇಳಲಾಗುವ ಪ್ರಶ್ನಗಳಿಗೆ ಉತ್ತರಿಸಿ ಬಹುಮಾನ ಗೆಲ್ಲಲು ಅವಕಾಶವಿರಲಿದೆ. ಈ ಬಾರಿ ನಾಲ್ಕು ಲೈಫ್‌ಲೈನ್ ಡಬ್ಬಲ್ ಡಿಪ್ ಪರಿಚಯಿಸಲಾಗಿದೆ. ಹುಬ್ಬಳ್ಳಿ, ಧಾರವಾಡ, ಮೈಸೂರು, ಬೆಂಗಳೂರು ಮತ್ತು ಮಂಗಳೂರು ಕಡೆಗಳಿಂದ ಆಯ್ದ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಒಟ್ಟು ೪೦ ಕಂತುಗಳು ಬರಲಿದ್ದು, ಫಿನಾಲೆಯಲ್ಲಿ ಸೆಲಬ್ರಟಿಯನ್ನು ಕರೆಸಲು ಚಿಂತನೆ ನಡೆಸಲಾಗಿದೆ ಎಂದು ವಾಹಿನಿ ಮುಖ್ಯಸ್ಥ ಪರಮೇಶ್ವರ್‌ಗುಂಡ್ಕಲ್ ಹೇಳುತ್ತಾರೆ. ಮಾರ್ಕ್ ಪೂಲ್ ಎನ್ನುವಂತೆ ಆಯ್ಕೆಯಾದ ಒಬ್ಬ ಪತ್ರಕರ್ತರನ್ನು ಹಾಟ್ ಸೀಟ್‌ನಲ್ಲಿ ಕೂರಿಸಿ, ಪುನೀತ್ ಕೇಳಲಾದ ಐದು ಪ್ರಶ್ನೆಗೆ ಉತ್ತರ ನೀಡಲಾಯಿತು. ಗೆದ್ದಂತ ಹತ್ತು ಸಾವಿರ ಹಣವನ್ನು ಚಾರಿಟಬಲ್ ಟ್ರಸ್ಟ್‌ಗೆ ನೀಡಲಾಗಿದೆ.
ಸೋನಿ ಪಿಕ್ಚರ್ಸ್‌ನ ಸ್ಟುಡಿಯೋ ನೆಕ್ಸ್ಟ್ ನಿರ್ಮಾಣ ಮಾಡುತ್ತಿರುವ ಶೋ ಇದೇ ಜೂನ್ ೨೨ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ ೮ ಗಂಟೆಗೆ ‘ಕಲರ್ಸ್ ಕನ್ನಡ’ ವಾಹಿನಿದಲ್ಲಿ ಪ್ರಸಾರವಾಗಲಿದೆ.