ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14 ವಿಶ್ವದಾದ್ಯಂತ ಎಲ್ಲೆಡೆ ಕನ್ನಡಿಗರ ಮನಗೆದ್ದು ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ ಎನಿಸಿಕೊಂಡಿದೆ. ಕರುನಾಡ ಸಂಗೀತ ಸಾಮ್ರಾಟ ನಾದಬ್ರಹ್ಮ ಹಂಸಲೇಖ ಮಹಾ ಗುರುಗಳಾಗಿರುವುದು ಪ್ರಮುಖ ಆಕರ್ಷಣೆ. ಇನ್ನು ತೀರ್ಪುಗಾರರಾದ ಭಾರತದ ಪ್ರಸಿದ್ಧ ಗಾಯಕ ವಿಜಯ್ ಪ್ರಕಾಶ್ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯರ ಪ್ರೋತ್ಸಾಹದ ಮಾತುಗಳು, ಅನುಶ್ರೀಯವರ ಲವಲವಿಕೆಯ ನಿರೂಪಣೆ ಕಾರ್ಯಕ್ರಮದ ಮೆರಗು ಹೆಚ್ಚಿಸಿದೆ. ಈ ಭಾರಿಯ ಪುಟಾಣಿ ಗಳಂತೂ ಎಲ್ಲರೂ ವಿಭಿನ್ನ ಹಾಗೂ ವಿಶೇಷ ಪ್ರತಿಭಾವಂತರು.
ಪ್ರತಿ ವಾರ ವಿಶೇಷ ಸುತ್ತುಗಳಿಂದ ರಂಜಿಸುವ ಸರಿಗಮಪ ವೇದಿಕೆಗೆ ಈ ವಾರದ ಸಂಚಿಕೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮ ವಿಭೂಷಣ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು ಬಂದಿದ್ದಾರೆ. ಕಿರುತೆರೆಯ ಇತಿಹಾಸದಲ್ಲೇ ಮೊಟ್ಟಮೊದಲ ಭಾರಿಗೆ ರಿಯಾಲಿಟಿ ಶೋ ಗೆ ಶ್ರೀಗಳು ಬಂದಿರುವುದು ಬಹು ವಿಶೇಷ. ಈ ವಾರ ಶ್ರೀಗಳ ಮುಂದೆ ಸರಿಗಮಪ ಮಕ್ಕಳು ಭಕ್ತಿಗೀತಗಳನ್ನ ಹಾಡಿ ಭಾರಿ ಮೆಚ್ಚುಗೆ ಹಾಗೂ ಪ್ರಶಂಸೆ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥನ ನೇರ ಅನುಗ್ರಹವೇ ಮಕ್ಕಳಿಗೆ ಸಿಕ್ಕಿದೆ.
ವಿಶೇಷವಾಗಿ ಸರಿಗಮಪ ವೇದಿಕೆಯ ಕ್ಯೂಟ್ ಕೃಷ್ಣ ಸುಂದರಿ ನೇಹಾ ಶ್ರೀಗಳ ಮುಂದೆ ನೀ ನಮ್ಮ ಗೆಲುವಾಗಿ ಬಾ ಎಂದು ಗಣಪತಿಯ ಹಾಡನ್ನು ಹಾಡಿ ಶ್ರೀಗಳ ಮನ ಗೆದ್ದಳು ಜೊತೆಗೆ ನೇಹಾ ಪುಟ್ಟ ಕೃಷ್ಣನ ಧಿರಿಸು ಧರಿಸಿ ಭರತನಾಟ್ಯ ಮಾಡಿ ಪೂಜ್ಯರ ಪ್ರಶಂಸೆ ಪಡೆದಳು. ಇದನ್ನು ಕಂಡು ವೀರೇಂದ್ರ ಹೆಗ್ಗಡೆಯವರು ತಮ್ಮ ಬಾಲ್ಯದ ನೆನಪುಗಳಿಗೆ ಮರಳಿದರು. ಅವರ ಅಜ್ಜಿಯವರು ಬಾಲ್ಯದಲ್ಲಿ ಅವರಿಗೆ ಕೃಷ್ಣನ ವೇಷ ತೊಡಿಸಿದ್ದನ್ನು ನೆನೆಸಿಕೊಂಡರು. ವಿಶ್ವಪ್ರಸಾದ್ ಹಾಡಿದ ಭೂಕೈಲಾಸ ಚಿತ್ರದ ರಾಮನ ಅವತಾರ ಹಾಡು ತಮಗೆ ಬಲು ಇಷ್ಟ ಎಂದು ಶ್ರೀಗಳು ಮೆಚ್ಚಿಕೊಂಡರು. ಇನ್ನು ನಮ್ಮ ಶಿಶು ತಾನ್ ಸೇನ್ ಜ್ನಾನೇಶನಿಗೆ ಹಾಗೂ ಅವನ ಕಂಠಕ್ಕೆ ವಿಶೇಷ ಮೆಚ್ಚುಗೆ ಸಿಕ್ಕಿತು. ಅಜ್ಜೋರ ಮಠದಿಂದ ಬಂದ ಜ್ನಾನೇಶ ತೊರೆದು ಜೀವಿಸಬಹುದೇ ಹಾಡನ್ನು ಹಾಡಿ ಆಶೀರ್ವಾದ ಪಡೆದ. ಇನ್ನೂ ಧರ್ಮಸ್ಥಳದವರೇ ಆದ ಕ್ಷಿತಿ ಕೆ ರೈ ಶ್ರೀ ಮಂಜುನಾಥ ಚಿತ್ರದ ಗೀತೆ ಹಾಡಿ ಶ್ರೀಗಳನ್ನು ಮೆಚ್ಚಿಸಿದರು. ಹೇಗೆ ಎಲ್ಲ ಮಕ್ಕಳು ತಮ್ಮ ಭಕ್ತಿ ರಾಗ ಸುಧೆಯಿಂದ ಪೂಜ್ಯರ ಪ್ರಶಂಸೆಯಾ ಜೊತೆಗೆ ಎಲ್ಲರ ಮನ ತುಂಬಿಸಿದರು.
ಇವೆಲ್ಲಕ್ಕೂ ಕಳಶವಿಟ್ಟಂತೆ ವಿಜಯ ಪ್ರಕಾಶ್ ಅವರ ಗಾಯನ ಕೊನೆಯಲ್ಲಿ ಶ್ರೀಗಳ ಮನ ಗೆದ್ದಿತು. ಶ್ರೀ ವೀರೇಂದ್ರ ಹೆಗ್ಗಡೆಯವರು ವಿಜಯ್ ಪ್ರಕಾಶ್ ಅವರ ಗಾಯನವನ್ನು ಬಹುವಾಗಿ ಮೆಚ್ಚಿಕೊಂಡು ಹೊಗಳಿದರು. ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 14ರ ಈ ವಿಶೇಷ ಸಂಚಿಕೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.