Akruthi.Udaya Tv

Thursday, August 20, 2020

657

 

ಉದಯ ಟಿವಿಯಲ್ಲಿ ಹೊಸ ಧಾರಾವಾಹಿಆಕೃತಿ

         ಆಗಸ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ .೩೦ಕ್ಕೆ

“ಆಕೃತಿ ಉದಯಟಿವಿಯಲ್ಲಿ ಆಗಸ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯:೩೦ಕ್ಕೆ ಹೊಸದಾಗಿ ಪ್ರಾರಂಭವಾಗುತ್ತಿರವ ಹೊಚ್ಚ ಹೊಸ ಧಾರವಾಹಿ. ಕನ್ನಡದ ಮೊದಲ ಸ್ಯಾಟಿಲೇಟ್ ವಾಹಿನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉದಯ ಟಿವಿ ಕಾಲಕ್ಕೆ ತಕ್ಕಂತೆ ಕ್ರಿಯೇಟಿವಿಟಿ ಮತ್ತು ಟೆಕ್ನಾಲಜಿಯಲ್ಲಿ ಹೆಸರುವಾಸಿಯಾಗಿ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಕೌಟಂಬಿಕದ ಜೊತೆಗೆ ಹಾರಾರ್‌ಗೆ ಸಂಬಂಧ ಪಟ್ಟ ಕಥೆಯನ್ನು ಹೆಣೆದು ಮತ್ತಷ್ಟು ಮನರಂಜಿಸಲು ಬರುತ್ತಿರುವ ಕಥೆಯೇ ಆಕೃತಿ.

ದಿವ್ಯ ಮಹಾತ್ವಾಕಾಂಕ್ಷಿ ಹೆಣ್ಣು. ಅವಳ ತಂದೆ ಪ್ರಜ್ವಲ್, ತಾಯಿ ಚೈತ್ರ ಮತ್ತು ತಮ್ಮ ಸುಜಯ್. ಇವರ ಕುಟುಂಬ ಚಿಕ್ಕದಾಗಿದ್ದು, ಇವರ ಮನೆಯಲ್ಲಿ ಸಂತೋμ ಮನೆಮಾಡಿದೆ. ದಿವ್ಯಾಳ ಕುಟುಂಬ ಸಕಲೇಶಪುರದಲ್ಲಿ ಒಂದು ಹಳೆ ಫಾರ್ಮ್ ಹೌಸ್ ಕೊಂಡುಕೊಳ್ಳುತ್ತಾರೆ. ಆ ಮನೆಯ ಅಂಗಳದಲ್ಲಿ ಒಂದು ಮರ, ಆ ಮರದಲ್ಲಿ ಒಂದು ಆಕೃತಿ, ಅದಕ್ಕೆ ಒಂದು ಹಿನ್ನಲೆ ಇದೆ. ಆ ಆಕೃತಿಯಿಂದ ಸಂತೋμತುಂಬಿದ್ದ ಕುಟುಂಬ ನಾನಾ ವಿಚಿತ್ರ ಘಟನೆಗಳನ್ನು ಎದುರಿಸುತ್ತಾ ಹಲವಾರು ಅನಿರೀಕ್ಷಿತ ತಿರುವುಗಳಿಗೆ ಗುರಿಯಾಗುತ್ತದೆ. ಇದು ಕಾಕತಾಳಿಯ ಅಲ್ಲ. ಇದಕ್ಕೆ ಕಾರಣ ಇದೆ. ಆ ಕಾರಣ ಏನು? ಆ ಆಕೃತಿಯ ಹಿನ್ನಲೆ ಏನು? ಇವರ ಕುಟುಂಬಕ್ಕೂ ಮನೆಗೂ ಏನೂ ಸಂಬಂಧ? ದಿವ್ಯಾ ಅಪಾಯಗಳಿಂದ ತನ್ನ ಕುಟುಂಬವನ್ನು ಹೇಗೆ ಕಾಪಾಡುತ್ತಾಳೆ ಎಂಬುದೇ “ಆಕೃತಿ” ಕಥೆಯ ಹಂದರ.

ಇದೊಂದು ವಿಭಿನ್ನ ಕಥೆಯಾಗಿದ್ದು, ಇದುವರೆಗೂ ಕಿರುತೆರೆಯಲ್ಲಿ ನೋಡಿರದಂತಹ ಚಿತ್ರಕಥೆಯ ಶೈಲಿ ಕಿರುತೆರೆ ಲೋಕಕ್ಕೆ ಹೊಸದಾಗಿದೆ ಅμ ಅಲ್ಲದೆ ಸಕಲೇಶಪುರ ಸುತ್ತಮುತ್ತ ಪ್ರದೇಶಗಳಲ್ಲಿ ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಈ ಧಾರಾವಾಹಿಗೆ ಹೊಸಪರಿಚಯವಾಗಿ ತನ್ವಿರಾವ್, ನೇತ್ರಾವತಿ ಜಾದವ್, ಬಾಬಿ, ನಟಿಸುತ್ತಿದ್ದಾರೆ. ಕಿರುತೆರೆ ನಟ ಪವನ್, ಪ್ರಖ್ಯಾತ್, ತನುಜ, ಇವರುಗಳು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು  ಇವರ ಜೊತೆ ಪ್ರಮುಖ ಪಾತ್ರದಲ್ಲಿ ಶ್ರೀಧರ್, ಉμ ಭಂಡಾರಿ ಹೀಗೆ ಹಲವಾರು ಜನಪ್ರಿಯ ತಾರೆಗಳ ಸಮಾಗಮ ಮಾಡಲಾಗಿದೆ.

ಈ ಧಾರವಾಹಿಯನ್ನು ಪ್ರಖ್ಯಾತ ಸಿನಿಮಾ ನಿರ್ದೇಶಕರಾದ ಕೆ.ಎಂ. ಚೈತನ್ಯ ನಿರ್ಮಾಣ ಮಾಡುತ್ತಿದ್ದಾರೆ ಅವರಜೊತೆಯಾಗಿ ಹರಿದಾಸ್.ಪಿ ಕೆ.ಜಿ.ಎಫ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಛಾಯಾಗ್ರಹಣ ಮತ್ತು ನಿರ್ದೇಶನ – ಎಂ. ಕುಮಾರ್, ಕಥೆ ಮತ್ತು ಚಿತ್ರಕಥೆ - ಸಿಧ್ಧಾರ್ಥ, ಸಂಭಾμಣೆ - ಮೃಗಶಿರ ಶ್ರೀಕಾಂತ್, ಶೀರ್ಷಿಕೆಗೀತೆ–ಗುರುಕಿರಣ್. ಸಾಹಿತ್ಯ–ಕವಿರಾಜ್. ಗಾಯಕರು–ಅನುರಾಧಾಭಟ್, ಸಂಕಲನ–ಗುರುರಾಜ್ ಬಿ  ಕೆ ಹೀಗೆ ಹಲವಾರು ನಿಪುಣರ ತಂಡ ಈ ಧಾರಾವಾಹಿಯಲ್ಲಿದೆ.

ಆಕೃತಿ ಧಾರಾವಾಹಿಯು ಇದೇ ಅಗಷ್ಟ್ ೨೪ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ .೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,