ಉದಯ ಟಿವಿಯ ಹೊಸ ಧಾರಾವಾಹಿ “ಕನ್ಯಾದಾನ”
ನವೆಂಬರ್ ೧೫ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮.೩೦ಕ್ಕೆ
ಕಳೆದ ೨೭ ವರ್ಶಗಳಿಂದ ನಿರಂತರವಾಗಿ ಕನ್ನಡಿಗರಿಗೆ ತನ್ನ ವಿಶಿಷ್ಟ ಶೈಲಿಯ ಮನರಂಜನಾ ಕಾರ್ಯಕ್ರಮಗಳಿಂದ ಅತ್ಯಂತ ಜನಪ್ರಿಯ ವಾಹಿನಿ ಉದಯ ಟವಿ. ಈ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೌರಿಪುರದ ಗಯ್ಯಾಳಿಗಳು, ನೇತ್ರಾವತಿ, ಸುಂದರಿ, ಕಾವ್ಯಾಂಜಲಿ, ನಯನತಾರ, ಸೇವಂತಿ, ಕಸ್ತೂರಿ ನಿವಾಸ ಧಾರಾವಾಹಿಗಳು ಕನ್ನಡಿಗರ ದೈನಂದಿನ ಮನರಂಜನೆಯ ಭಾಗವಾಗಿ ಯಶಸ್ವಿಯಾಗಿವೆ.
ಸದಾ ಹೊಸ ರೂಪದ ಕಥೆಗಳನ್ನು ಕೊಡುತ್ತಿರುವ ಉದಯ ಟಿವಿ ಹೊಸತನದ ಮೆರುಗನ್ನು ನೀಡಲು ಈಗ ವೀಕ್ಷಕರಿಗೆ ಮತ್ತೊಂದು ಹೊಸ ಧಾರಾವಾಹಿ “ಕನ್ಯಾದಾನ”ವನ್ನು ಅರ್ಪಿಸುತ್ತಿದೆ
ಬೆಂಗಳೂರು ಪಕ್ಕದ ಹಳ್ಳಿಯಲ್ಲಿ ವಾಸಿಸುತ್ತಿರುವ ಅಶ್ವತ್ನಿಗೆ ೫ ಜನ ಹೆಣ್ಣು ಮಕ್ಕಳು. ಅಶ್ವತ್ಮೌಲ್ಯಗಳಿಗೆ ಬೆಲೆ ಕೊಡುವ ಮನುಷ್ಯ.. ತಾಯಿ ಇಲ್ಲದ ಮಕ್ಕಳಿಗೆ ಯಾವುದೇ ಕೊರತೆ ಇಲ್ಲದ ಹಾಗೆ ಅಕ್ಕರೆಯಿಂದ ಸಂಸ್ಕಾರವಂತರಾಗಿ ಬೆಳೆಸಿರುತ್ತಾನೆ.
ತನ್ನ ಮಕ್ಕಳಿಗೆ ಮದುವೆ ಮಾಡಿ ಅವರಿಗೆ ಹೊಸ ಜೀವನ ಕೊಡುವ ಭರದಲ್ಲಿದ್ದಾನೆ. ಅವನ ಇಚ್ಚೆಯಂತೆ ತನ್ನಿಬ್ಬರ ಮಕ್ಕಳಿಗೆ ಮದುವೆ ಮಾಡುತ್ತಾನೆ ಆದರೆ ಮದುವೆ ಮಾಡಿ ಕಳುಹಿಸಿದ ತಕ್ಷಣ ಒಬ್ಬ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ ಎಂಬುದರ ಅರಿವಿದೆ. ಹೇಗೆ ಮಕ್ಕಳ ಮೇಲಿನ ಜವಾಬ್ದಾರಿ ತಂದೆಗೆ ಕೊನೆ ಉಸಿರಿನವರೆಗು ಇರುತ್ತದೆ ಎನ್ನುವ ಕಥೆ “ಕನ್ಯಾದಾನ”.
ಹಿರಿಯ ನಟ ಮೈಕೊ ಮಂಜು ತಂದೆಯ ಪಾತ್ರ ವಹಿಸಿದ್ದಾರೆ. ೫ ಜನ ಮುದ್ದು ಹೆಣ್ಣು ಮಕ್ಕಳ ಪಾತ್ರವನ್ನು ಮಾನಸ ನಾರಾಯಣ್, ಕೀರ್ತಿ ವೆಂಕಟೇಶ್, ಯಶಸ್ವಿನಿ, ವಿದ್ಯಾ ರಾಜ್ ಹಾಗು ಪ್ರಾರ್ಥನ ಕಿರಣ್ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಅರುಣ್ ಹರಿಹರನ್ ನಿರ್ದೇಶನ, ಅಂಜಲಿ ವೆಂಚರ್ಸ್ ನಿರ್ಮಾಣದಲ್ಲಿ ಈ ಧಾರಾವಾಹಿ ವೀಕ್ಷಕರ ಮುಂದೆ ಬರಲಿದೆ.
“ಈ ಧಾರಾವಾಹಿಯ ವಿಷಯ ಬೇರೆ ಕಥೆಗಳಿಗಿಂತ ಭಿನ್ನವಾಗಿದ್ದು, ಅಪರೂಪವಾದ ಜೋಡಿಗಳು ನಮ್ಮ ಧಾರಾವಾಹಿಯಲ್ಲಿದ್ದು ಒಂದು ಜೋಡಿ ಅಪ್ಪ ಹಾಗು ಅವರ ೫ ಜನ ಹೆಣ್ಣುಮಕ್ಕಳಾದರೆ ಮತ್ತೊಂದು ಜೋಡಿ ಕಥೆ ಮತ್ತು ಚಿತ್ರಕಥೆ. ಈ ಕಥೆ ಕನ್ನಡ ವೀಕ್ಷಕರಿಗೆ ತುಂಬಾ ಇಷ್ಟವಾಗಲಿದೆ” ಎಂದು ಧಾರಾವಾಹಿಯ ನಿರ್ದೇಶಕ ಅರುಣ್ ತಮ್ಮ ಅಭಿಪ್ರಾಯ ಪಟ್ಟಿದ್ದಾರೆ.
ʻಕನ್ಯಾದಾನʼ ಇದೇ ನವೆಂಬರ್ ೧೫ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮:೩೦ ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.