Shanthi Nivas.News

Thursday, July 18, 2024

84

ಉದಯ ಟಿವಿಯಲ್ಲಿ  ಶಾಂತಿನಿವಾಸ

ಜುಲೈ ೨೨ ರಿಂದ ಸೋಮವಾರ-ಶನಿವಾರ ರಾತ್ರಿ .೩೦ ಗಂಟೆಗೆ

ಶಾಂತಿ...

     ಇದು ಬರೀ ಒಂದು ಹೆಸರಲ್ಲ... ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು, ಗೋವರ್ಧನರಾಯರ ಮುದ್ದಿನ ಸೊಸೆ, ಅವರೇ ಹೇಳುವಂತೆ ಕುಲದೇವತೆ, ಭಾಮಿನಿಯ ಸೊಸೆ, ಸುಶಾಂತನ ಮುದ್ದಿನ ಮಡದಿ, ಸಿದ್ದಾರ್ಥನ ನಾದಿನಿ, ಸಾಧನಾಳ ತಂಗಿ, ಸುಕೃತಾಳ ಅತ್ತಿಗೆ, ವರ್ಷಾಳ ಮುದ್ದು ಚಿಕ್ಕಮ್ಮ, ರಾಘವನ ಹೆತ್ತಮ್ಮ,.. ಮನೆ ಕೆಲಸದಾಕೆ ರತ್ನಮ್ಮಳ ಅಘೋಷಿತ ಮಗಳು,  ಒಟ್ಟಿನಲ್ಲಿ ಆ ಮನೆಯ... ನಂದಾದೀಪ...ನೀಲಾಂಜನ.... ಪ್ರತಿಯೊಬ್ಬರ ಮನಸ್ಸನ್ನುಅರಿತು.. ಅವರವರ ಭಾವನೆಗಳಿಗೆ ಬೆರೆತು, ಅವರ ಬೇಕು ಬೇಡಗಳನ್ನು ಅವರು ಕೇಳುವುದಕ್ಕೆ ಮುಂಚೆಯೇ... ಅವರ ಮುಂದೆ ಇಡುವ

ಇಷ್ಟ ದೇವತೆ... ಅಷ್ಟೇನೂ ಓದು ಬರಹ ಕಲಿಯದ ಶಾಂತಿ, ಸಂಸ್ಕಾರದಲ್ಲಿ, ಅತಿಥಿ ಸತ್ಕಾರದಲ್ಲಿ, ಹುಟ್ಟಿನಿಂದಲೇ ಪದವೀಧರೆ...  ಶಾಂತಿ ನಿವಾಸದ ಸೊಸೆಯಾಗಿ ಬಂದರೂ ಸಹ.. ತನ್ನ ಮಲತಾಯಿ ಯಶೋಧಾಳನ್ನು ಮರೆಯದ ಮಮತಾಮಯಿ...

ಇಂದು ಮಹಿಳೆ ಮನೆಯ ಹೊರಗೂ ಒಳಗೂ ದುಡಿಯುತ್ತಿದ್ದಾಳೆ... ಹಾಗೆ ಮನೆಯೊಳಗೆ ದಣಿವರಿಯದೆ ದುಡಿಯುವ ಗೃಹಿಣಿಯರ ಮೊದಲ ಸಾಲಿನಲ್ಲಿ ನಿಲ್ಲುವ ಅಜಾತಶತ್ರು ನಮ್ಮ ಶಾಂತಿ...

ಜಗತ್ತಿನಲ್ಲಿ... ಎಲ್ಲರಿಗೂ ಶತ್ರುಗಳು ಇರಲೇಬೇಕಲ್ಲವೇ.... ಹಾಗೇ ಶಾಂತಿಗೂ ಒಬ್ಬಳು ಶತ್ರು ಇದ್ದಾಳೆ... ಅವಳೇ ಮಂಥರ... ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾ...ಜೈಲಿನಲ್ಲಿ ಇದ್ದಷ್ಟು ದಿನವೂ... ಶಾಂತಿಯ ಮೇಲಿನ ಸೇಡು ತೀರಿಸಿಕೊಳ್ಳುವುದೇ ಅವಳು ಪಠಿಸಿದ ಮೂಲ ಮಂತ್ರ... ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬಂದ ಮಂಥರ, ತನ್ನ ಗೆಳತಿ ಗಗನಾಳೊಂದಿಗೆ... ಶಾಂತಿಯನ್ನು ಹುಡುಕಲು ಆರಂಭಿಸುತ್ತಾಳೆ...

ಹತ್ತು ಹಲವು ಪ್ರಯತ್ನಗಳ ನಂತರ... ತಾನು ಹುಡುಕುತ್ತಿರುವ ಶಾಂತಿಯ ಭೇಟಿಯಾಗುತ್ತದೆ... ಆದರೆ ಶಾಂತಿ... ತಾನೇ ಕಟ್ಟಿಕೊಂಡಿರುವ... ಪ್ರೀತಿ, ವಾತ್ಸಲ್ಯ, ಮಮಕಾರ, ಮತ್ತು ನಂಬಿಕೆ ಎಂಬ ನಾಲ್ಕು ಸುತ್ತಿನ ಕೋಟೆಯಲ್ಲಿ ನೆಮ್ಮದಿಯಾಗಿರುವುದನ್ನ ಕಂಡು ರೋಷಾ ವೇಷದಿಂದ ಕುದಿಯುತ್ತಾಳೆ ಮಂಥರ... ಹೇಗಾದರೂ ಮಾಡಿ

ತಾನು ಆ ಕೋಟೆಯೊಳಗೆ ಪ್ರವೇಶಿಸಬೇಕೆಂಬ ಸಂಚು ಹೂಡುತ್ತಾಳೆ... ಆ ಸಂಚಿನ ಪ್ರಕಾರವೇ... ನಿಧಾನವಾಗಿ... ಶಾಂತಿ ನಿವಾಸದ ಒಳಗೆ ಕಾಲಡಿ ಇಡುತ್ತಾಳೆ...  ಆದರೆ ತನ್ನ ವಿರುದ್ಧ ಸೇಡಿಗಾಗಿ ಹಾತುರೆಯುತ್ತಿರುವ.. ಮಂಥರಾಳ  ಬಗ್ಗೆಯಾಗಲಿ... ಅವಳ ಉದ್ದೇಶದ ಬಗ್ಗೆಯಾಗಲಿ... ಏನೊಂದೂ ಅರಿಯದ ಶಾಂತಿ... ಅವಳನ್ನು ತನ್ನ ಕುಟುಂಬದಲ್ಲೊಬ್ಬಳಾಗಿ... ಅದೇ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಾಳೆ... ಮಂಥರಾಳ ಬಗ್ಗೆ ಕಿಂಚಿತ್ ಅನುಮಾನ ಬಂದು  ಒಂದಿಬ್ಬರು ಶಾಂತಿಯನ್ನು ಪರೋಕ್ಷವಾಗಿ ಎಚ್ಚರಿಸಿದರೂ... ನಸುನಗುತ್ತಾ ಅದನ್ನು ಅಲ್ಲಗಳೆಯುತ್ತಾಳೆ ಶಾಂತಿ...

ಅದನ್ನರಿತ  ಮಂಥರ ಮನೆಯವರ  ಮುಖಾಂತರವೇ  ತನ್ನ  ಕುತಂತ್ರ ಯೋಜನೆಯನ್ನ  ರೂಪಿಸುತ್ತಾಳೆ...

ಹಾಗಾದರೆ  ಆ  ಯೋಜನೆ  ಏನು. .? ಸೇಡಿನ ಹಕ್ಕಿಯಾಗಿ ಜೈಲಿನಿಂದ ಹೊರಬಂದ ಮಂಥರಾಳಿಂದ ಶಾಂತಿಗಾದ ತೊಂದರೆ ಯಾವುದು...? ಸ್ಪಟಿಕದಷ್ಟೇ ನಿಷ್ಕಲ್ಮಶವಾದ ಮನಸ್ಸುಳ್ಳ ಶಾಂತಿಯ ಬದುಕಿನಲ್ಲಿ ಮುಂದೇನಾಯ್ತು....?

ಶಾಂತಿ ನಿವಾಸಕ್ಕೆ ಎದುರಾದ ತೊಂದರೆಯನ್ನು ಶಾಂತಿ ಹೇಗೆ ನಿಭಾಯಿಸಿ ಗೆಲ್ಲುತ್ತಾಳೆ....?  ತನ್ನ ಮೂಲ ಅಸ್ತ್ರವಾದ ಸಹನೆಯನ್ನೇ ಬಳಸಿ ಶಾಂತಿ ಮಂಥರಾಳ ಸೇಡಿನ ಯುದ್ಧದಲ್ಲಿ ಜಯಶೀಲೆಯಾಗ್ತಾಳಾ?

ಹೀಗೆ ಕುತೂಹಲಕಾರಿ ಕಥಾಹಂದರವುಳ್ಳ... ರೋಚಕ ತಿರುವುಗಳ.. ಪ್ರತಿ ಕಂತಿನಲ್ಲೂ.. ಕುತೂಹಲ ಮೂಡಿಸುವ.. ಧಾರಾವಾಹಿ   ʻಶಾಂತಿನಿವಾಸʼ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ .೩೦ ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,