Premam Pujyam.Film Trailer Launch

Thursday, October 14, 2021

ಪ್ರೇಮಂ ಪೂಜ್ಯಂಟ್ರೈಲರ್ ಬಿಡುಗಡೆ

ಸಾಕಷ್ಟು ಬಾರಿ ಬಿಡುಗಡೆ ದಿನಾಂಕವನ್ನು ಘೋಷಿಸಿ ಮುಂದೂಡಿದ್ದ ‘ಪ್ರೇಮಂ ಪೂಜ್ಯಂ’ ಚಿತ್ರದಟ್ರೈಲರ್‌ಇತ್ತೀಚೆಗೆ ಬಿಡುಗಡೆಗೊಂಡಿತು.ಪ್ರಚಾರದ ಸಲುವಾಗಿ ಹಮ್ಮಿಕೊಂಡಿದ್ದಕಾರ್ಯಕ್ರಮದಲ್ಲಿ ನಿರ್ದೇಶಕಡಾ.ರಾಘವೇಂದ್ರ ಮಾತನಾಡಿಚಿತ್ರ ಮುಗಿದುಒಂದು ವರ್ಷದ ಮೇಲಾದರೂಕೊನೆಗೂ ಅಕ್ಟೋಬರ್ ೨೯ರಂದು ತೆರೆಗೆ ಬರಲಿದೆ. ಮೂಲತ: ವೈದ್ಯನಾಗಿದ್ದು, ಕ್ಲಿನಿಕ್‌ದಲ್ಲಿಕತೆ ಶುರುವಾಯಿತು. ಕಾರ್‌ನಲ್ಲಿ ಬೆಳೆಯುತ್ತಾ ಹೋಯಿತು.ಬಾಥ್‌ರೂಂದಲ್ಲಿಟ್ಯೂನ್‌ಆಯಿತು.ಪುಟಗಟ್ಟಲೆ ಬರೆದಿಟ್ಟುಕೊಂಡಿದ್ದೆ.ಸಿನಿಮಾವಾಗುತ್ತದಂಬ ನಂಬಿಕೆ ಇರಲಿಲ್ಲ. ತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದಎಲ್ಲವು ಸುಗಮವಾಗಿ ಮುಗಿಯಿತು.ಪ್ರತಿಭೆಇರಬಹುದು.

ಆದರೆ ಒಂದೊಳ್ಳೆಯ ತಂಡವಿಲ್ಲದಿದ್ದರೆ ಏನು ಆಗುವುದಿಲ್ಲ. ನಮ್ಮಚಿತ್ರವನ್ನುಜನ ಹೇಗೆ ಸ್ವೀಕರಿಸುತ್ತಾರೋ ಎಂಬುದು ತಿಳಿಯದು.ಈಗಲೇ ಆಸ್ಕರ್ ಸಿಕ್ಕಷ್ಟು ಖುಷಿಯಾಗಿದೆ.ಯಾವತ್ತುಅಂಬರೀಷ್‌ರವರು ನಾಲ್ಕೂವರೆ ಗಂಟೆಗಳ ಕಾಲ ಕತೆ ಕೇಳಿ ಊಟ ಹಾಕಿಸಿದರೋ, ಯಾವತ್ತು ಮಾಸ್ಟರ್‌ಆನಂದ್ ನೀವೆ ನಿರ್ದೇಶನ ಮಾಡಿಎಂದು ಬೆನ್ನುತಟ್ಟಿದರೋ, ನನ್ನನ್ನು ಹೇಗಾದರೂ ಸಾಗಹಾಕಬೇಕೆಂದಿದ್ದ ಪ್ರೇಮ್‌ಕತೆ ಕೇಳಿ ಚಪ್ಪಾಳೆ ಹೊಡೆದರೋ, ಆಗಲೇ ಆಸ್ಕರ್ ಪ್ರಶಸ್ತಿ ಬಂದಂತೆಆಯಿತುಎಂದರು.

ಸೂಟ್‌ಧಾರಿಯಾಗಿ ಆಗಮಿಸಿದ್ದ ನಾಯಕ ಪ್ರೇಮ್‌ಚಿತ್ರೀಕರಣದ ಅನುಭವಗಳನ್ನು ಮೆಲುಕು ಹಾಕಿದರು.ನಾಯಕಿಬೃಂದಾಆಚಾರ್ಯಕಡಿಮೆ ಸಮಯತೆಗೆದುಕೊಂಡರು.ಡಾ.ರಕ್ಷಿತ್‌ಕೆಡಂಬಾಡಿ, ಡಾ.ರಾಜಕುಮಾರ್, ಜಾನಕಿರಾಮನ್, ಮನೋಜ್‌ಕೃಷ್ಣನ್‌ಜಂಟಿಯಾಗಿಕೆಡಂಬಾಡಿಕ್ರಿಯೇಶನ್ಸ್ ಬ್ಯಾನರ್‌ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಸಂಗೀತ ಮತ್ತು ಸಾಹಿತ್ಯಡಾ.ಬಿ.ಎಸ್.ರಾಘವೇಂದ್ರ, ಛಾಯಾಗ್ರಹಣ ನವೀನ್‌ಕುಮಾರ್, ಸಂಕಲನ ಹರೀಶ್‌ಕೊಮ್ಮೆ ನಿರ್ವಹಿಸಿದ್ದಾರೆ.ತಾರಗಣದಲ್ಲಿಐಂದ್ರಿತಾರೈ, ಮಾಸ್ಟರ್‌ಆನಂದ್, ಸಾಧುಕೋಕಿಲ, ಅವಿನಾಶ್, ಮಾಳವಿಕ, ಅನುಪ್ರಭಾಕರ್ ಮುಂತಾದವರು ನಟಸಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,