Ondaanondu Kaaladalli.Film Teaser Rel

Sunday, December 05, 2021

230

ಒಂದಾನೊಂದುಕಾಲದಲ್ಲಿಟ್ರೈಲರ್  ಬಿಡುಗಡೆ

೧೯೭೦ರಲ್ಲಿ ಶಂಕರ್‌ನಾಗ್‌ಅಭಿನಯದ ‘ಒಂದಾನೊಂದುಕಾಲದಲ್ಲಿ’ ಚಿತ್ರವೊಂದುತೆರೆಕಂಡುಯಶಸ್ಸು ಗಳಿಸಿತ್ತು.ಈಗ ಅದೇ ಹೆಸರಿನಲ್ಲಿಚಿತ್ರವೊಂದುಕೊನೆಯ ಹಂತದಲ್ಲಿ ಬಂದು ನಿಂತಿದೆ.ಹಾಗಂತಅದಕ್ಕೂಇದಕ್ಕೂ ಸಂಬಂದವಿರುವುದಿಲ್ಲ.ಭಾನುವಾರದಂದು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಸಮಾಧಿ ಬಳಿ ಚಿತ್ರದಟ್ರೈಲರ್‌ನ್ನು ಪುನೀತ್‌ರಾಜ್‌ಕುಮಾರ್‌ಅಂಗರಕ್ಷಕರಾಗಿದ್ದ ಚಲಪತಿ ಮತ್ತು ಸಿರಿ ಮ್ಯೂಸಿಕ್ ಸಂಸ್ಥೆಯಚಿಕ್ಕಣ್ಣ ಬಿಡುಗಡೆ ಮಾಡಿದರು. ಹಿರಿಯ ನಿರ್ದೇಶಕ ಭಗವಾನ್ ಬಳಿ ತರಭೇತಿ ಪಡದುಕೊಂಡಿರುವಎನ್.ಮಂಜುನಾಥ್ ಸಿನಿಮಾಕ್ಕೆಕಥೆ,ಚಿತ್ರಕತೆ, ಸಂಭಾಷಣೆ, ನಿರ್ದೇಶನದಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. 

ಆನೇಕಲ್ ಮೂಲದಟಿ.ಎಸ್.ಗೋಪಲ್‌ಅವರು ಮುನಿ ಲಕ್ಷೀವೆಂಕಟೇಶ್ವರಕ್ರಿಯೆಶನ್ಸ್‌ಅಡಿಯಲ್ಲಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮುನೇಶ್, ಪ್ರಜ್ವಲ್ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

೧೯೮೦ರ ರೆಟ್ರೋದಲ್ಲಿ ನಡೆಯುವಕರವಸ್ತ್ರ (ಕರ್ಚಿಫ್)ದ ಮೇಲಿನ ಪ್ರೀತಿಕತೆಇರಲಿದೆ. ನಾಯಕ ಮತ್ತು ನಾಯಕಿಒಬ್ಬರನ್ನೊಬ್ಬರು ಭೇಟಿಯಾಗಿರುವುದಿಲ್ಲ. ಕರವಸ್ತ್ರವುಇಬ್ಬರ ನಡುವೆಆಟವಾಡಿಸುತ್ತಿರುತ್ತದೆ.ಅದುಇಬ್ಬರನ್ನು ಹೇಗೆ ಸೇರಿಸುತ್ತದೆ.ಪ್ರೀತಿಯ ಸಂದೇಶಯಾವರೀತಿರವಾನೆಯಾಗುತ್ತಿರುತ್ತದೆಎಂಬಂತ ವಿಷಯಗಳನ್ನು ಅಂದಿನ ಕಾಲಘಟ್ಟಕ್ಕೆಅನುಗುಣವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ.

ಹರ್ಷಲಹನಿ ನಾಯಕಿ.ಇನ್ನುಳಿದಂತೆ ಶೋಭರಾಜ್, ಸಂಗೀತ, ನೀನಾಸಂಸತೀಶ್, ಜಿ.ತರುಣ್‌ಕುಮಾರ್ ಮುಂತಾದವರು ನಟಿಸಿದ್ದಾರೆ. ಪ್ರಶಾಂತ್‌ಹೊನ್ನಾವರ ಸಾಹಿತ್ಯದ ನಾಲ್ಕು ಗೀತೆಗಳಿಗೆ ಯಶವಂತ್‌ಭೂಪತಿ ಸಂಗೀತ ಸಂಯೋಜಿಸಿದ್ದಾರೆ.ಛಾಯಾಗ್ರಹಣ ಏಳುಕೋಟೆಚಂದ್ರು, ಸಂಕಲನ ಸೆಲ್ವರಾಜು-ವಿನೋಧ್, ಸಾಹಸ ಅಲ್ಟಿಮೇಟ್‌ಶಿವು, ನೃತ್ಯ ಲಕ್ಷೀತಅವರದು. ಕನಕಪುರ, ಹಾರೋಹಳ್ಳಿ,ಆನೇಕಲ್, ತಟ್ಟಗೆರೆ, ಹೂಕ್ಲೇರಿಕಡೆಗಳಲ್ಲಿ ಚಿತ್ರೀಕರಣ ನಡೆದುಕೊನೆಯಎರಡು ದಿನದಕ್ಲೈಮಾಕ್ಸ್‌ನ್ನುಸಕಲೇಶಪುರದಲ್ಲಿನಡೆಸಲುಯೋಜನೆ ಹಾಕಿಕೊಂಡಿದೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,