Raaji.Film Pooja.News

Friday, December 10, 2021

 

*ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಯಿತು "ರಾಜಿ".*

 

 *ರಾಘವೇಂದ್ರ ರಾಜಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರೀತಿ ಎಸ್ ಬಾಬು ನಿರ್ದೇಶನ.*

 

ರಾಘವೇಂದ್ರ ರಾಜಕುಮಾರ್ ಅಭಿನಯದ " ರಾಜಿ" ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ನಾಯಕ ಶ್ರೀಮುರಳಿ ಆರಂಭ ಫಲಕ ತೋರಿದರು.

ನಾಯಕಿ ಹರ್ಷಿಕಾ ಪೂಣ್ಣಚ್ಛ ಕ್ಯಾಮೆರಾ ಚಾಲನೆ ಮಾಡಿದರು.

 

ಕನ್ನಡ ಹಲವಾರು ಚಿತ್ರಗಳಲ್ಲಿ ಸಹ ಕಲಾವಿದೆಯಾಗಿ ಅಭಿನಯಿಸಿರುವ ಪ್ರೀತಿ ಎಸ್ ಬಾಬು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ ಇರುವ ನಿರ್ದೇಶಕಿಯರ ಸಾಲಿಗೆ ಪ್ರೀತಿ ಎಸ್ ಬಾಬು ಸೇರ್ಪಡೆಯಾಗಿದ್ದಾರೆ. ಬಸವರಾಜ್ ಎಸ್ ಮೈಸೂರು ಅವರೊಂದಿಗೆ ಸೇರಿ ನಿರ್ಮಾಣವನ್ನು ಮಾಡುತ್ತಿರುವ ಪ್ರೀತಿ ಎಸ್ ಬಾಬು ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಮಡದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌.

 

ಸಹ ಕಲಾವಿದೆಯಾಗಿ ನನ್ನ ವೃತ್ತಿ ಜೀವನ ಆರಂಭವಾಗಿದ್ದು‌ ಕಂಠೀರವ ಸ್ಟುಡಿಯೋದಲ್ಲಿ. ಇಂದು ನಾನು ನಿರ್ದೇಶಿಸುತ್ತಿರುವ ಮೊದಲ ಚಿತ್ರದ ಮುಹೂರ್ತ ನಡೆಯುತ್ತಿರುವುದು ಇದೇ ಸ್ಟುಡಿಯೋದಲ್ಲಿ‌ ಎಂದು ಮಾತು‌ ಆರಂಭಿಸಿದ ಪ್ರೀತಿ ಎಸ್ ಬಾಬು ಅವರು, ಗಂಡ - ಹೆಂಡತಿ ಸುಂದರ ಒಪ್ಪಂದದ ಈ ಕಥೆ ಬಗ್ಗೆ  ರಾಘಣ್ಣನವರ ಬಳಿ ಹೇಳಿದಾಗ, ಮೆಚ್ಚುಗೆ ಸೂಚಿಸಿ ನಟಿಸಲು  ಒಪ್ಪಿದ್ದಾರೆ. ಈ ಚಿತ್ರ ಆರಂಭವಾಗಲು ಮುಖ್ಯ ಕಾರಣ ನಮ್ಮ ಚಿತ್ರದ ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ. ಹೆಚ್ಚಿನ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಯಾರು ನಿರೀಕ್ಷಿಸದ ಕಥೆ ನಮ್ಮ ಚಿತ್ರದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪ್ರೀತಿ ಎಸ್ ಬಾಬು.

ನನ್ನ ತಮ್ಮನ ನಿಧನ‌ದ ನಂತರ ನಾನು ಅಭಿನಯಿಸುತ್ತಿರುವ ಮೊದಲ ಸಿನಿಮಾ ಇದು. ಅವನು ಇದಿದ್ದರೆ, ಅವನೇ‌ ಬಂದು ಕ್ಲಾಪ್ ಮಾಡಬೇಕಿತ್ತು.

 ಆದರೆ ವಿಧಿಬರಹವೇ ಬೇರೆ.

ಹೆಣ್ಣುಮಗಳೊಬ್ಬಳು ನಿರ್ದೇಶನ ಮಾಡುತ್ತಿರುವುದು ಖುಷಿಯ ವಿಚಾರ. ಗಂಡ-ಹೆಂಡತಿ ನಡುವಿನ ಸುಂದರ ಒಪ್ಪಂದವೇ "ರಾಜಿ".  ಇನ್ನೊಂದು ಅರ್ಥ ಕೂಡ ಇದೆ.‌ ರಾ ಅಂದರೆ ರಾಘವೇಂದ್ರ, ಜಿ ಅಂದರೆ ಜೀವಿತಾ ಎಂದು. ನನ್ನ ಪಾತ್ರ ಚೆನ್ನಾಗಿದೆ.  ಈ ಸಿನಿಮಾದಿಂದ ನನಗೆ ಒಳ್ಳಯ ಹೆಸರು ಅಥವಾ ಪ್ರಶಸ್ತಿ ಬಂದರೆ, ನನ್ನ ಮೂರು ಹೆಣ್ಣುಮಕ್ಕಳಿಗೆ ಅರ್ಪಿಸುತ್ತೇನೆ. ಆ ಮೂವರು ಯಾರೆಂದರೆ,  ನನ್ನ ತಮ್ಮನ ಹೆಂಡತಿ ಅಶ್ವಿನಿ, ಅವರ ಮಕ್ಕಳಾದ‌‌ ದೃತಿ ಹಾಗೂ ವಂದಿತ. ಇನ್ನು ಮುಂದೆ ಅವರೇ ನನ್ನ‌ ಹೆಣ್ಣುಮಕ್ಕಳು ಎಂದು‌ ಭಾವುಕರಾದರು ‌ರಾಘಣ್ಣ.

 

ವಸುಮತಿ ಉಡುಪ ಅವರ ಕಥೆಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕಥೆಯನ್ನು ನಾನು ಬರೆಯುತ್ತಿದ್ದೇನೆ ಎಂದರು ಹರೀಶ್.

 

ಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು  ಐದು ಕವನಗಳನ್ನು ಈ ಚಿತ್ರಕ್ಕಾಗಿ ಬರೆದಿದ್ದಾರೆ ಸಂಗೀತ ನಿರ್ದೇಶಕ‌ ಉಪಾಸನ ಮೋಹನ್.

 

ನಿರ್ಮಾಪಕ ಬಸವರಾಜ್(ಮೈಸೂರು),  ಛಾಯಾಗ್ರಹಕ ಪಿ.ವಿ.ಆರ್ ಸ್ವಾಮಿ, ಸಂಕಲನಕಾರ ನಾಗೇಶ್, ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರತಾಪ್ ‌ಸಿಂಹ, ಕಾರ್ತಿಕ್‌ ಹಾಗೂ ಚಂದನ "ರಾಜಿ"  ಬಗ್ಗೆ ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,