Paramvah.Film News

Wednesday, January 11, 2023

213

ವೀರಗಾಸೆ ಕುರಿತಾದ ಪರಂವ

      ಹೊಸಬರ ‘ಪರಂವ’ ಸಿನಿಮಾವು ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಈಗ ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ. ಟೀಸರ್ ಬಿಡುಗಡೆ ಮಾಡಿದ ಡಾರ್ಲಿಂಗ್ ಕೃಷ್ಣ ತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕ ಸಂತೋಷ್ ಹೇಳುವಂತೆ ನಾಟಕ, ಸಿನಿಮಾ ನೋಡುತ್ತಾ ಬೆಳೆದವನು. ಆರ್ಯನ್ ಚಿತ್ರದ ಮೂಲಕ ತಂತ್ರಜ್ಘನಾಗಿ ಪಾದಾರ್ಪಣೆ ಮಾಡಿದೆ. ಗೆಳಯ ಪ್ರೇಮ್ ಅವರೊಂದಿಗೆ ಸೇರಿಕೊಂಡು ಒಳ್ಳೆಯ ಕಥೆ ಮಾಡಿಕೊಂಡೆವು. ಸುಮಾರು ೨೦೦ ಜನ ಹಣ ಹಾಕಿದ್ದಾರೆ. ಒಂಥರ ಕ್ರೌಡ್ ಫಂಡಿಂಗ್ ಎನ್ನಬಹದು.  ತುಮಕೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ವೀರಗಾಸೆಯನ್ನೆ ವೃತ್ತಿಯನ್ನಾಗಿ ಬಳಸಿಕೊಂಡ ಕುಟುಂಬದ ಕಥೆಯು ಇಂದಿನ ಯುವ ಜನಾಂಗದ ಜೀವನ ಶೈಲಿಯನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ನಮ್ಮ ಪ್ರಯತ್ನಕ್ಕೆ ಗುರುದೇಶಪಾಂಡೆ ಬೆನ್ನಲುಬಾಗಿ ನಿಂತಿದ್ದಾರೆ ಎಂದರು.

       ನಾಯಕನಾಗಿ ನಟಿಸಿರುವ ಪ್ರೇಮ್‌ಕುಮಾರ್ ಮಾತನಾಡಿ ಸಹ ನಿರ್ದೇಶಕನಾಗಿ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದು ಈಗ ಬಡ್ತಿ ಹೊಂದಿದ್ದೇನೆ. ಚಿತ್ರವು ಸದ್ಯ ಸೆನ್ಸಾರ್ ಹಂತದಲ್ಲಿದೆ. ನಾನು ಹೀರೋ ಅಲ್ಲ. ಕಂಟೆಂಟ್ ಹೀರೋ. ೪-೫ ಗೆಟಪ್ ಇರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಕ್ಯಾಮಾರ ಮುಂದೆ ನಿಲ್ಲುತ್ತಿದ್ದೆ. ಮೈಸೂರು ದಸರಾದಿಂದ ಚಿತ್ರ ಶುರುವಾಗುತ್ತದೆ. ವೀರಗಾಸೆ ಕುಟುಂಬದಿಂದ ಬಂದಂತ ಹುಡುಗ ಏನೆಲ್ಲಾ ಆಗುತ್ತಾನೆ ಎಂಬುದು ಒನ್ ಲೈನ್ ಕಥೆಯಾಗಿದೆ ಅಂತ ಮಾಹಿತಿಯನ್ನು ಹಂಚಿಕೊಂಡರು.

 

Copyright@2018 Chitralahari | All Rights Reserved. Photo Journalist K.S. Mokshendra,