Yadha Yadha Hi.Film News

Sunday, May 21, 2023

132

ಯದಾ ಯದಾಹಿ ಹೀ ಟ್ರೇಲರ್ ಲೋಕಾರ್ಪಣೆ

      ಸೆಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ ‘ಯದಾ ಯದಾ ಹೀ’ ಚಿತ್ರದ ಟ್ರೇಲರ್ ಅನಾವರಣ ಸಮಾರಂಭವು ಇತ್ತೀಚೆಗೆ ನಡೆಯಿತು. ಮಹಾಭಾರತದಲ್ಲಿ ಬರುವ ಶ್ಲೋಕವೊಂದನ್ನು ಶೀರ್ಷಿಕೆಯಾಗಿ ಬಳಸಲಾಗಿದೆ. ಈಗಾಗಲೇ ಟೈಟಲ್ ಸಾಂಗ್‌ನ್ನು ಸುದೀಪ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದ್ದಾರೆ. ನಾಗಾರ್ಜುನಶರ್ಮ ಸಾಹಿತ್ಯಕ್ಕೆ  ವಸಿಷ್ಠಸಿಂಹ ಮತ್ತು ಹರಿಪ್ರಿಯಾ ಕಂಠದಾನ ಮಾಡಿರುವುದು ವಿಶೇಷ. ಟಾಲಿವುಡ್‌ನ ಅಶೋಕ್‌ತೇಜ ನಿರ್ದೇಶನವಿದೆ. ಗೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದರಬಾದ್ ಮೂಲದ ರಾಜೇಶ್‌ಅಗರ್‌ವಾಲ್ ನಿರ್ಮಾಣ ಮಾಡಿದ್ದಾರೆ. ತೆಲುಗಿನ ‘ಎವರು’ ರಿಮೇಕ್ ಆಗಿದ್ದರೂ, ಕನ್ನಡದ ನೇಟಿವಿಟಗೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದೆ.

       ಮದುವೆ ನಂತರ ಒಟ್ಟಿಗೆ ಕಾಣಿಸಿಕೊಂಡ ವಸಿಷ್ಠಸಿಂಹ, ಹರಿಪ್ರಿಯಾ ನಟನೆ ಮತ್ತು  ಪೋಲೀಸ್ ಆಫೀಸರ್ ಪಾತ್ರದಲ್ಲಿ ದಿಗಂತ್ ಇದ್ದಾರೆ. ಇವರುಗಳ ಸುತ್ತ ಕಥೆಯು ಸಾಗುತ್ತದೆ. ಚಿತ್ರವು ಕ್ಲಾಸ್ ಆಗಿ ಮೂಡಿಬಂದಿದ್ದು, ನೋಡುಗರಿಗೆ ಕುತೂಹಲ ಕೆರಳಿಸುತ್ತಾ ಹೋಗುತ್ತದೆ. ವಿಕ್ಟಿಮ್ ಅಂದ್ರೆ ಹುಡುಗಿಯರು ಮಾತ್ರವಲ್ಲ, ಹುಡುಗರ ಮೇಲೂ ಇರುತ್ತೆ. ಮೂವರು ಒಬ್ಬರಿಗಿಂತ ಒಬ್ಬರು ಚಾಣಾಕ್ಷರು. ಇದರಲ್ಲಿ ಪ್ರೀತಿ ಮೋಸ ಎಲ್ಲವು ಇದೆ. ಕೊಲೆಗಾರನನ್ನು ಪತ್ತೆ ಹಚ್ಚುವುದೇ ಮುಖ್ಯ ಏಳೆಯಾಗಿದೆ.

      ಶ್ರೀಚರಣ್‌ಪಾಕಾಲ ಸಂಗೀತದಲ್ಲಿ ಮೂರು ಗೀತೆಗಳು ಇರಲಿದೆ. ಯೋಗಿ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ಅಂದಹಾಗೆ ಚಿತ್ರವು ಜೂನ್ ೨ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.

 

 

Copyright@2018 Chitralahari | All Rights Reserved. Photo Journalist K.S. Mokshendra,