Agrasene.Film News

Wednesday, May 24, 2023

164

ಹಳ್ಳಿ ಮತ್ತು ನಗರದ ಪ್ರೇಮ ಕಥನ

      ‘ಅಗ್ರಸೇನಾ’ ಚಿತ್ರವು ಎರಡು ಆಯಾಮಗಳಲ್ಲಿ ಸಾಗಲಿದ್ದು, ತಂದೆ-ಮಗನ ಬಾಂಧವ್ಯದ ಸಾರ, ಹಳ್ಳಿ ಹಾಗೂ ಪಟ್ಟಣದಲ್ಲಿ ನಡೆಯುವ ಪ್ರೇಮ ಕಥೆ, ರಾಜಕೀಯ ಸುತ್ತ ನಡೆಯುವ ಅಂಶಗಳನ್ನು ಹೇಳ ಹೊರಟಿದೆ. ಮುರುಗೇಶ್‌ನಿರಾಣಿ ನಿರ್ದೇಶನದಲ್ಲಿ, ಮಮತಾಜಯರಾಮರೆಡ್ಡಿ ಬಂಡವಾಳ ಹೂಡಿದ್ದಾರೆ.

      ಅಮರ್, ವಿರಾಜ್ ನಾಯಕರು. ರಚನಾದಶರಥ ನಾಯಕಿ. ಹಿರಿಯ ಕಲಾವಿದರಾದ ರಾಮಕೃಷ್ಣ ಅವರದು ೨೦೦ನೇ ಸಿನಿಮಾ, ಉಳಿದಂತೆ ಭಜರಂಗಿ ಹರ್ಷ, ಭಾರತಿಹೆಗಡೆ ನಟಿಸಿದ್ದಾರೆ. ಚೇತನ್‌ಕುಮಾರ್, ಗೌಸ್‌ಪೀರ್, ವಿಜಯ್, ಶಿವುಬೆರಗಿ ಸಾಹಿತ್ಯದ ಗೀತೆಗಳಿಗೆ ಎಂ.ಎಸ್.ತ್ಯಾಗರಾಜು ಸಂಗೀತ ಸಂಯೋಜಿಸಿದ್ದಾರೆ. ಆರ್.ಪಿ.ರೆಡ್ಡಿ ಛಾಯಾಗ್ರಹಣ, ವಿಜಯ್.ಎಂ ಸಂಕಲನವಿದೆ. ಪ್ರಚಾರದ ಸಲುವಾಗಿ ಮೊನ್ನೆಯಷ್ಟೇ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಅಂದುಕೊಂಡಂತೆ ಆದರೆ ಸಿನಿಮಾವು ಜೂನ್ ೨೩ರಂದು ತೆರೆಗೆ ಬರುವ ಸಾಧ್ಯತೆ ಇದೆ.

 

Copyright@2018 Chitralahari | All Rights Reserved. Photo Journalist K.S. Mokshendra,