Lankasura.Film Song Launch.

Saturday, February 11, 2023

110

ಲಂಕಾಸುರದಲ್ಲಿ ಮಾಡರ್ನ್ ಮಹಾಲಕ್ಷೀ ಗೀತೆ

      ವಿನೋದ್‌ಪ್ರಭಾಕರ್ ನಾಯಕನಾಗಿ ನಟಿಸಿರುವ ‘ಲಂಕಾಸುರ’ ಚಿತ್ರದ ‘ಮಾಡರ್ನ್ ಮಹಾಲಕ್ಷೀ’ ಹಾಡನ್ನು ಮಾಲಾಶ್ರೀ ಬಿಡುಗಡೆ ಮಾಡಿದರು. ನಂತರ ಮಾತನಾಡಿ ನಾನು ವಿನೋದ್‌ಪ್ರಭಾಕರ್ ದೊಡ್ಡ ಅಭಿಮಾನಿ. ಅವರ ಸಾಹಸ ಸನ್ನಿವೇಶಗಳು ನನಗೆ ತುಂಬಾ ಇಷ್ಟ. ಟೈಗರ್ ಟಾಕೀಸ್ ಮೂಲಕ ಪತ್ನಿ ನಿಶಾ ಹೆಸರಿನಲ್ಲಿ ಮೊದಲ ಬಾರಿ ಬಂಡವಾಳ ಹೂಡಿದ್ದಾರೆ. 

ಸಿನಿಮಾವು ಭರ್ಜರಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.

      ಕೋವಿಡ್ ಮುಂಚೆ ರಾಘವಮುನಿಸ್ವಾಮಿ ಅವರು ಮುಂಗಡ ಹಣ ನೀಡಿ ಚಿತ್ರ ಆರಂಭಿಸಿದ್ದರು. ತದನಂತರ ಕಾರಣಾಂತರಗಳಿಂದ ನಾವೇ ನಮ್ಮ ಸಂಸ್ಥೆ ಮೂಲಕ ನಿರ್ಮಾಣ ಮಾಡಬೇಕಾಯಿತು. ಇದು ನನ್ನ ಕನಸಿನ ಚಿತ್ರ. ಪ್ರೇಕ್ಷಕರು ಮೆಚ್ಚುವ ಎಲ್ಲಾ ಅಂಶಗಳು ಇರಲಿದೆ. ಒಳ್ಳೆಯ ಪಾತ್ರದ ಮೂಲಕ ಬರುತ್ತಿದ್ದೇನೆಂಬ ಖುಷಿ ನನಗಿದೆ ಎಂದು ವಿನೋದ್‌ಪ್ರಭಾಕರ್ ಹೇಳಿದರು.

        ನಾಲ್ಕು ಹಾಡುಗಳಿಗೆ ಚೇತನ್‌ಕುಮಾರ್ ಸಾಹಿತ್ಯ ಒದಗಿಸಿದ್ದು, ವಿಜೇತ್‌ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುಜ್ಘಾನ್ ಅವರದಾಗಿದೆ. ತಾರಗಣದಲ್ಲಿ ರವಿಶಂಕರ್, ಲೂಸ್‌ಮಾದ ಯೋಗಿ, ದೇವರಾಜ್ ಮುಂತಾದವರು ಅಭಿನಯಿಸಿದ್ದಾರೆ. ಸಮಾರಂಭದಲ್ಲಿ ಶೃತಿ, ಶ್ರೀನಗರಕಿಟ್ಟಿ ಹಾಜರಿದ್ದರು.

                                                                 

Copyright@2018 Chitralahari | All Rights Reserved. Photo Journalist K.S. Mokshendra,