Matte Udbhava.Film Pooja and Press Meet.

Thursday, June 06, 2019

40

ಉಧ್ಭವ, ಮತ್ತೆ ಉಧ್ಭವ ಆಯ್ತು

                  ೧೯೯೦ರಲ್ಲಿ  ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವ ಚಿತ್ರ ಮುಂದುವರೆದ ಭಾಗದಂತೆ ‘ಮತ್ತೆ ಉಧ್ಭವ’ ಹೆಸರಿನೊಂದಿಗೆ ಬರುತ್ತಿದೆ. ಅನಂತನಾಗ್ ಮಾಡಿದ ಪಾತ್ರವನ್ನು  ರಂಗಾಯಣರಘು ನಟಿಸುತ್ತಿದ್ದು, ಇವರ ಮಕ್ಕಳು ದೊಡ್ಡವರಾಗಿ ಅಪ್ಪನಿಗೆ ಸಹಾಯ ಮಾಡುತ್ತಾರೆ.  ಬೆರಳು ತೋರಿಸಿದರೆ ಹಸ್ತ ನುಂಗುವ ಮಹಾನ್ ಬುದ್ದವಂತ. ಭಯ-ಭಕ್ತಿಯನ್ನು ಸಮಯೋಚಿತವಾಗಿ ಹೇಗೆ ಉಪಯೋಗಿಸುತ್ತಾನೆ. ಅಪ್ಪ ಕಾಪೋರೇಶನ್ ಲೆವಲ್‌ದಲ್ಲಿ  ಇದ್ದರೆ ಮಗ ವಿಧಾನಸೌದ ಸಂಪರ್ಕ ಬೆಳಸಿಕೊಂಡಿರುವ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಹಿರಿಮಗ. ವಕೀಲನಾಗಿ  ಮಂಡ್ಯಾರವಿ ಕಿರಿಮಗ. ಚಿತ್ರದಲ್ಲಿ ನಾಯಕಿಯಾಗಿ ಅದೇ ರೀತಿಯಾಗಿ ಮತ್ತು ಪರಿಸರ ಪ್ರೇಮಿ, ರಾಜಕಾರಿಣಿ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಮಿಲನನಾಗರಾಜು.  ಶೃಂಗಾರಸ್ವಾಮೀಜಿಯಾಗಿ ಮೋಹನ್ ಬಣ್ಣ ಹಚ್ಚುವುದರ ಜೊತೆಗೆ ಸಂಭಾಷಣೆಗೆ ಪದಗಳನ್ನು ಪೋಣಿಸುತ್ತಿದ್ದಾರೆ.  ಇವರ ಆಪ್ತ ಭಕ್ತೆಯಾಗಿ ಶುಭರಕ್ಷಾ ನಟನೆ ಇದೆ.

         ಎರಡೂ ಚಿತ್ರಕ್ಕೂ ಕತೆ ಬರೆದಿರುವ  ನಿರ್ದೇಶಕ ಕೂಡ್ಲುರಾಮಕೃಷ್ಣ ಹೇಳುವಂತೆ ಎಲ್ಲೆ ಹೋದರೂ ಇದೇ ಚಿತ್ರದ ಕುರಿತಂತೆ ಕೇಳುತ್ತಾರೆ. ಅದಕ್ಕಾಗಿಯೇ ಸಿನಿಮಾವನ್ನು ಮಾಡಬೇಕಾಯಿತು. ಅನಂತ್‌ನಾಗ್ ಒಟ್ಟಾರೆ ದಿನಾಂಕಗಳು ಸಿಗದ ಕಾರಣ ರಂಗಾಯಣರಘು ಬಂದಿದ್ದಾರೆ.  ಅದು ಕ್ಲಾಸ್ ಅಗಿತ್ತು. ಇದರಲ್ಲಿ ಡ್ಯಾನ್ಸ್, ಫೈಟು, ಕಾಮಿಡಿ ಇರುವುದರಿಂದ ಮಾಸ್ ಎನ್ನಬಹುದು. ಪಾತ್ರಗಳನ್ನು ಹಾಗಯೇ ಉಳಿಸಿಕೊಂಡು ಕಲಾವಿದರನ್ನು ಬದಲಾವಣೆ ಮಾಡಿಕೊಂಡಿದೆ. ಮೊದಲಭಾಗದಲ್ಲಿ ದೇವರನ್ನು ತೋರಿಸಲಾಗಿ,  ಎರಡನೆಯದರಲ್ಲಿ ದೇವರಿಗಿಂತ ದೊಡ್ಡದು ಉಧ್ಭವವಾಗುತ್ತೆ. ಅದು ಏನು ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕು.

         ಉಳಿದಂತೆ  ಸುಧಾಬೆಳವಾಡಿ,ಅವಿನಾಶ್, ಪಿ.ಡಿ.ಸತೀಶ್, ಗಿರೀಶ್‌ಭಟ್, ಚೇತನ್‌ಚಮನ್, ನರೇಶ್, ಶಂಕರ್‌ಅಶ್ವಥ್, ನಿರಂಜನ್ ಮುಂತಾದವರು ನಟಿಸುತ್ತಿದ್ದಾರೆ. ಜಯಂತ್‌ಕಾಯ್ಕಣಿ-ಪ್ರಹ್ಲಾದ್ ಸಾಹಿತ್ಯದ ಮೂರು ಗೀತೆಗಳಿಗೆ ವಿ.ಮನೋಹರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಮೋಹನ್, ಸಂಕಲನ ಕೆಂಪರಾಜು, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ ತ್ರಿಭುವನ್ ನಿರ್ವಹಿಸುತ್ತಿದ್ದಾರೆ. ನಟಿ ಅಪೇಕ್ಷಾಪುರೋಹಿತ್ ಮೊದಲಬಾರಿ ಕಾಸ್ಟ್ಯೂಮ್ ಡಿಸೈನರ್ ಆಗಿ ತೆರೆ ಹಿಂದೆ ಕೆಲಸ  ಮಾಡುತ್ತಿರುವುದು ವಿಶೇಷ. ನಿತ್ಯಾನಂದಭಟ್,ಸತ್ಯ, ಮಹೇಶ್‌ಮುದ್ಗಲ್  ಮತ್ತು ರಾಜೇಶ್ ಜಂಟಿಯಾಗಿ ವೈಟ್ ಪ್ಯಾಂಥರ‍್ಸ್ ಕ್ರಿಯೇಟೀವ್ ಹಾಗೂ ಇನ್‌ಫಾನಿಟಿ ಫಿಲ್ಸ್, ಮುಂಬಯಿ ಇದರ ಮೂಲಕ  ನಿರ್ಮಾಪಕರುಗಳಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ನಡೆದ ಮಹೂರ್ತ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಜೋಗಿ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು.

 

 

 

Copyright@2018 Chitralahari | All Rights Reserved. Photo Journalist K.S. Mokshendra,