Ninna Sanihake.Film Poster Rel.

Monday, August 05, 2019

58

ಚಂದನವನಕ್ಕೆ  ಡಾ.ರಾಜ್  ಮೊಮ್ಮಗಳು

         ಡಾ.ರಾಜ್‌ಕುಮಾರ್ ಎರಡನೇ  ಪುತ್ರಿ  ಪೂರ್ಣಿಮಾರಾಮ್‌ಕುಮಾರ್  ಮಗಳು ಧನ್ಯಾರಾಮ್‌ಕುಮಾರ್ ‘ನಿನ್ನ  ಸನಿಹಕೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೆಸರೇ ಹೇಳುವಂತೆ ಇಬ್ಬರು ಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣ ಇರಲಿದೆ.  ಪ್ರಸಕ್ತ ಯುವಜನಾಂಗಕ್ಕೆ ಹೊಂದಿಕೊಳ್ಳುವಂತೆ ಆದಿತ್ಯ-ಅಮೃತ ಆಸಕ್ತಿ ಪ್ರೀತಿ ಆಗಿರುತ್ತದೆ. ಇವರುಗಳ  ಖುಷಿ, ನೋವು,  ಕನಸುಗಳನ್ನು ಕಾಣುವಾಗ, ಪರಿಸ್ಥಿತಿ ಒದಗಿಬಂದು ಕಂಟಕಗಳು ಬರುತ್ತವೆ. ಅದನ್ನೆಲ್ಲಾವನ್ನು ಎದುರಿಸಿ ಹೇಗೆ ಒಂದಾಗುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಇದರಲ್ಲಿ ಸಿಲಿಕಾನ್ ಸಿಟಿಯು ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ.  ಹದಿನೆಂಟು ವರ್ಷಗಳ ಕಾಲ ಎಲ್ಲಾ ವಿಭಾಗಗಳಲ್ಲಿ ದುಡಿದಿರುವ ಸುಮನ್‌ಜಾದೂಗರ್ ಚಿತ್ರಕಥೆ ರಚಿಸಿ ಮೊದಲಬಾರಿ ನಿರ್ದೇಶಕನ ಕುರ್ಚಿಯನ್ನು ಅಲಂಕರಿಸುತ್ತಿದ್ದಾರೆ.

        ಆಗ ತಾನೆ ಕಾಲೇಜು ಮುಗಿಸಿ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುವ  ಸೂರಜ್‌ಗೌಡ ನಾಯಕ ಮತ್ತು ಕತೆ ಬರೆದಿದ್ದಾರೆ. ಪಾತ್ರದ ಸಲುವಾಗಿ ಸುಮಾರು ಎಂಟು ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರೆ.  ತಾತನ ಚಿತ್ರದ ಚರ್ಚೆ ನಡೆಯುವ ಸಂದರ್ಭದಲ್ಲಿ ಮಗುವಾಗಿ ಎಲ್ಲವನ್ನು ನೋಡುತ್ತಿದ್ದ ಧನ್ಯಾರಾಮ್‌ಕುಮಾರ್‌ಗೆ ಇಂದು  ಒನ್ ಲೈನ್ ಕೇಳಿ, ಮಾತುಕತೆ ನಡೆಸಿ ಕ್ಯಾಮಾರ ಮುಂದೆ ನಿಲ್ಲಲು ಒಪ್ಪಿಕೊಂಡಿದ್ದಾರೆ. ತಾರಾಗಣದಲ್ಲಿ ಗಿರೀಶ್‌ಶಿವಣ್ಣ, ಮಂಜುನಾಥ್‌ಹೆಗ್ಡೆ, ಸುಧಾಬೆಳವಾಡಿ, ಕರಿಸುಬ್ಬು, ಚಿತ್ಕಲಾಬಿರಾದರ್, ಪ್ರಮೀಳಾಸುಬ್ರಮಣ್ಯಂ, ವೆಂಕಟೇಶ್‌ಪ್ರಸಾದ್ ಮುಂತಾದವರು ನಟಿಸುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಗಗಳನ್ನು ಹೊಸೆಯುತ್ತಿರುವ ರಘುದೀಕ್ಷಿತ್‌ಗೆ ಇದಕ್ಕಿಂತ ಹಿನ್ನಲೆ ಸಂಗೀತದಲ್ಲಿ ಸ್ಕೋಪ್ ಇರುವ ಕಾರಣ ಕೆಲಸ ಮಾಡಲು ಉತ್ಸುಕರಾಗಿದ್ದಾರೆ.

       ಛಾಯಾಗ್ರಹಣ ಅಭಿಲಾಷ್‌ಕಳತ್ತಿ, ಸಂಕಲನ ಸುರೇಶ್‌ಆರ್ಮುಗಂ, ಕಲೆ ವರದರಾಜ್‌ಕಾಮತ್, ಸಂಭಾಷಣೆಗೆ ಪ್ರವೀಣ್‌ಕುಮಾರ್.ಜೆ. ಪದಗಳನ್ನು ಪೋಣಿಸುತ್ತಿದ್ದಾರೆ. ಮೈಸೂರಿನ  ಗೆಳೆಯರಾಗಿರುವ ಅಕ್ಷಯ್‌ರಾಜಶೇಖರ್ ಮತ್ತು ರಂಗನಾಥ್ ಕುಡ್ಲಿ ಸಿನಿಮಾ ಕೃಷಿಗೆ  ಬಂಡವಾಳ ಹೂಡುತ್ತಿರುವುದು ಹೊಸ ಅನುಭವ.  ಈ ಪೈಕಿ ರಂಗನಾಥ್‌ಕುಡ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ನಾಗರಪಂಚಮಿ ದಿನದಂದು ಸಿನಿಮಾದ ಪೋಸ್ಟರ್‌ನ್ನು ಡಾ.ರಾಜ್‌ಕುಮಾರ್ ಅಳಿಯ ಎಸ್.ಎ.ಗೋವಿಂದರಾಜು  ಅನಾವರಣಗೊಳಿಸಿ ತಂಡಕ್ಕೆ ಶುಭಹಾರೈಸಿದರು. ಮಗಳ ಮಾತುಗಳನ್ನು ಕೇಳಲು ಅಮ್ಮ ಹಾಜರಿದ್ದರು. ಇದೇ ಹತ್ತೋಂಬತ್ತರಂದು ಮಹೂರ್ತ ಸಮಾರಂಭ ನಡೆಯಲಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,