Deepak.Film Hero 15 Years Journy Press Meet.

Saturday, March 07, 2020

67

ನಾಯಕ  ಈಗ  ಖಳನಾಯಕ

ಶಿಷ್ಯ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದ ದೀಪಕ್ ಮುಂದೆ ಶಿಷ್ಯದೀಪಕ್ ಅಂತ ಗುರುತಿಸಿಕೊಂಡಿದ್ದರು.೧೮ನೇ ಕ್ರಾಸ್, ಬಾ ಬೇಗ ಚಂದಮಾಮ, ಮಾಗಡಿ, ತ್ಯಾಗು ಸೇರಿದಂತೆ ಹದಿನೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ, ‘ಬೆಳ್ಳಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ ನಟಿಸಿ, ವೈಯಕ್ತಿಕಕಾರಣದಿಂದದೂರಇದ್ದರು.ಗ್ಯಾಪ್ ನಂತರಜೋಗಿಪ್ರೇಮ್ ನಿರ್ದೇಶನದಅದ್ದೂರಿಚಿತ್ರ

‘ಏಕ್‌ಲವ್ಯ’ದಲ್ಲಿಇನ್ಸ್‌ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.ಅಲ್ಲದೆ ಪ್ರಜ್ವಲ್‌ದೇವರಾಜ್‌ಅಭಿನಯದ ‘ವೀರಂ’ದಲ್ಲಿ ಖಳನಾಯಕನಾಗಿ ಅಭಿನಯಿಸಲು ಸಹಿ ಮಾಡಿದ್ದಾರೆ.ನಾಯಕನಾಗುವುದರೂ ಬದಲು ಖಳನಟನಾಗಿ ಕಾಣಿಸಿಕೊಳ್ಳುವುದರಲ್ಲಿ ಖುಷಿ ಕೊಡುತ್ತದೆಂದು ನಂಬಿದ್ದು, ಅದರಂತೆ ಭವಿಷ್ಯದಲ್ಲಿಅಂತಹುದೇರೋಲ್‌ಗೆ ಸೀಮಿತರಾಗಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.ಚಿತ್ರರಂಗದಲ್ಲಿ ಹದಿನಾಲ್ಕು ವರ್ಷಅನುಭವ ಗಳಿಸಿದ್ದರಿಂದ, ಅವಕಾಶ ನೀಡಿದಅನ್ನದಾತ ನಿರ್ಮಾಪಕರು, ಸಿನಿಮಾ ಪ್ರಚಾರಕರ್ತರುಗಳನ್ನು ಸನ್ಮಾನಿಸಿ ದೀಪಕ್ ಮಾತನಾಡುತ್ತಿದ್ದರು.

 

Copyright@2018 Chitralahari | All Rights Reserved. Photo Journalist K.S. Mokshendra,