Kadala Theerada Bhargava.Reviews

Friday, March 03, 2023

171

ಸ್ನೇಹ ಪ್ರೀತಿ ಸಾರುವ ಕಡಲ ತೀರದ ಭಾರ್ಗವ ****

       ‘ಕಡಲ ತೀರದ ಭಾರ್ಗವ’ ಎಂದರೆ ತಕ್ಷಣ ಶಿವರಾಮಕಾರಂತರು ಕಣ್ಣ ಮುಂದೆ ಬರುತ್ತಾರೆ. ಆದರೆ ಇದೇ ಹೆಸರಿನಲ್ಲಿರುವ ಚಿತ್ರವು ಬೇರೆಯದ್ದೇ ಹೇಳುತ್ತದೆ. ಭರತ್ ಮತ್ತು ಭಾರ್ಗವ  ಚಿಕ್ಕಂದಿನಿಂದಲೂ ಸ್ನೇಹಿತರು. ದೊಡ್ಡವರಾದ ಮೇಲೆ ಇಂಪನಾ ವಿಚಾರವಾಗಿ ಇಬ್ಬರಲ್ಲೂ ಬಿರುಕು ಮೂಡುತ್ತದೆ. ಒಂದು ಹಂತದಲ್ಲಿ ಭರತ್ ಅತಿಯಾದ ಮದ್ಯ ವ್ಯಸನಿ ಆಗುತ್ತಾನೆ. ಕುಡಿತದಿಂದ ಮುಕ್ತಿ ಹೊಂದಿಸಲು ಆತನನ್ನು ಶಾಂತಿ ಸಾಧನ ರಿಹ್ಯಾಬಿಟೇಶನ್ ಸೆಂಟರ್‌ಗೆ ಸೇರಿಸಲಾಗುತ್ತದೆ. ಅಲ್ಲೂ ಅವನು ಮೊದಲಿನಂತಾಗುವುದಿಲ್ಲ. ಅವನಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಥಾಮಸ್ ಮನದಲ್ಲಿರುವ ಕಲ್ಪನೆ ಬಗ್ಗೆ ತಿಳಿದುಕೊಂಡು ಟ್ರೀಟ್‌ಮೆಂಟ್ ಕೊಡಲು ಪ್ರಯತ್ನಿಸುತ್ತಾನೆ. ಇಂಪನಾ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿರುತ್ತದೆ. ಇವೆಲ್ಲಾ ಗೊಂದಲಗಳ ಮಧ್ಯೆ ಭರತ್ ಮೊದಲಿನಂತಾದನೇ? ಭಾರ್ಗವ ಸರಿದಾರಿಗೆ ಬಂದನೇ. ಇವೆಲ್ಲಕ್ಕೂ ಉತ್ತರ ಚಿತ್ರ ನೋಡಬೇಕು.

ಭರತ್‌ಗೌಡ ಮತ್ತು ವರುಣ್‌ರಾಜು ಪಟೇಲ್ ನಾಯಕರಾಗಿ ಮೊದಲ ಚಿತ್ರದಲ್ಲೆ ಅಂಕ ಗಳಿಸುತ್ತಾರೆ. ಬಿಗ್ ಬಾಸ್ ಖ್ಯಾತಿಯ ಶೃತಿಪ್ರಕಾಶ್ ನಾಯಕಿ. ಇನ್ನುಳಿದಂತೆ ಶ್ರೀಧರ್, ರಾಘವ್‌ನಾಗ್, ಅಶ್ವಿನ್‌ಹಾಸನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಅನಿಲ್.ಸಿ.ಜೆ ಸಂಗೀತ, ಕೀರ್ತನ್‌ಪೂಜಾರಿ ಛಾಯಾಗ್ರಹಣ, ಸಾಹಸ ಥ್ರಿಲ್ಲರ್‌ಮಂಜು, ನೃತ್ಯ ಆರ್ಯನ್‌ರೋಷನ್-ಗೀತಾಸೈ ಇವೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,