South Indian Hero.Reviews

Friday, February 24, 2023

181

ಲಾಜಿಕ್ ತುಂಬಿರುವ ಸೌತ್ ಇಂಡಿಯನ್ ಹೀರೋ

       ಕಮರ್ಷಿಯಲ್ ಚಿತ್ರಗಳಲ್ಲಿ ಲಾಜಿಕ್ ಇರುವುದಿಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ‘ಸೌತ್ ಇಂಡಿಯನ್ ಹೀರೋ’ ಸಿನಿಮಾವು ವಿನೂತನ ಕಥೆಯನ್ನು ಹೊಂದಿದೆ. ಶಿಕ್ಷಕ ಲಾಜಿಕ್ ಲಕ್ಷಣರಾವ್ ಅಂತಲೇ ಕರೆಸಿಕೊಂಡಿರುವ ಆತನಿಗೆ ಅದೇ ಶಾಲೆಯ ಶಿಕ್ಷಕಿ ಪರಿಚಯವಾಗಿ ಅದು ಪ್ರೀತಿಗೆ ತಿರುಗುತ್ತದೆ. ಇದೇ ಸಂದರ್ಭದಲ್ಲಿ ಸೋಲನ್ನು ಕಂಡ ನಿರ್ದೇಶಕನೊಬ್ಬ ಸ್ಟಾರ್ ನಾಯಕರುಗಳ ಗುಣಕ್ಕೆ ಬೇಸತ್ತು, ಹೊಸಬನನ್ನು ಸ್ಟಾರ್ ಮಾಡಲು ಮುಂದಾದಾಗ ಲಕ್ಷಣರಾವ್ ಕಣ್ಣಿಗೆ ಬೀಳುತ್ತಾನೆ. ಮುಂದೇ ಇವನನ್ನೇ ಹೀರೋ ಮಾಡುತ್ತಾನೆ. ಚಿತ್ರರಂಗದಲ್ಲಿ ಬಿಲ್ಡಪ್, ಶೋಕಿ ಇದೆಲ್ಲಾವನ್ನು ನೋಡುವ ಅವನು ಲಾಜಿಕ್ ಹುಡುಕುತ್ತಾನೆ.  ಆಗ ನಿರ್ದೇಶಕ ಬೇರೋಬ್ಬ ನಿರ್ದೇಶಕರೊಬ್ಬರಿಂದ ಲಾಜಿಕ್ ಮತ್ತು ಮ್ಯಾಜಿಕ್ ಬಗ್ಗೆ ಅರಿವು ಮೂಡಿಸುತ್ತಾನೆ.  

.  ನಂತರ ನಾಯಕನ ಬದುಕಿನಲ್ಲಿ ಹಲವು ರೀತಿಯ ತಿರುವುಗಳು ಎದುರಾಗುತ್ತದೆ. ಹೀಗೆ ತೆರೆಹಿಂದಿನ ಚಟುವಟಿಕೆಗಳನ್ನು ದಾಟಿ ಸಾಗುವ ನಾಯಕನ ಮನಸ್ಥಿತಿ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ನಿರ್ದೇಶಕ ನರೇಶ್‌ಕುಮಾರ್ ಚೆನ್ನಾಗಿ ನಿರೂಪಣೆ ಮಾಡಿರುವುದು ಪ್ಲಸ್ ಪಾಯಿಂಟ್.

       ಲಾಜಿಕ್ ಲಕ್ಷಣರಾವ್, ಮುಂದೆ ಲಕ್ಕಿಯಾಗಿ ಬದಲಾಗುವ ಸಾರ್ಥಕ್ ನಟನೆ ಭರವಸೆಯ ನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ನಾಯಕಿ ಕಾಶಿಮಾ ಹೊಸ ಅನುಭವವಾಗಿದ್ದರೂ ಸೈಕಲ್ ಹೊಡಯದೇ ತೆರೆಮೇಲೆ ಮುದ್ದಾಗಿ ಅಭಿನಯಿಸಿದ್ದಾರೆ. ಇವರಿಗೆ ಸಾಥ್ ಕೊಟ್ಟಂತೆ ಊರ್ವಶಿ ಕೂಡ ಗಮನ ಸೆಳೆಯುತ್ತಾರೆ. ಹಾಸ್ಯ ಪಾತ್ರದಲ್ಲಿ ಇಲ್ಲಿಯವರೆಗೂ ಮಿಂಚಿದ್ದ ವಿಜಯ್‌ಚೆಂಡೂರ್ ನಾನು ಈ ರೀತಿಯ ನಟನೆಯನ್ನು ಮಾಡಬಲ್ಲೆ ಅಂತ ಸಾಬೀತು ಪಡಿಸಿದ್ದಾರೆ. ಉಳಿದಂತೆ ಅಶ್ವಿನಿರಾವ್‌ಪಲ್ಲಕ್ಕಿ, ಶ್ರೀಹರಿ, ರಾಜಶೇಖರ್, ಅಮಿತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹರ್ಷವರ್ಧನ್‌ರಾಜ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಒಟ್ಟಾರೆ ಸಿನಿಮಾವು ಕುಟುಂಬಸಮೇತ ನೋಡಬಹುದಾಗಿದೆ.

****

 

Copyright@2018 Chitralahari | All Rights Reserved. Photo Journalist K.S. Mokshendra,