Bharaate.Film Review.

Friday, October 18, 2019

                  

ನಿರ್ದೇಶಕನ  ಬ್ರ್ಯಾಂಡ್, ನಾಯಕನ ಬ್ಯಾಂಗ್

        ಹಾವಳಿ  ದೀಪಾವಳಿ ಎಲ್ಲವು ನನ್ನದೆ, ಸಲಾಂ ಹೊಡೆಯೋ ಸೀನ್ ಇಲ್ಲ ಡಾರ್ಲಿಂಗ್, ಸುಮ್ನೆ ನುಗ್ತಾ ಇರೋದೆ, ತೊಡೆ ತಟ್ತಾ ಇರೋದೇ. ಜೀವನದಲ್ಲಿ ಯಾವಾಗಲೂ ಒಳ್ಳತನ ಇರೋನೆ ಭರಾಟೆ. ಇಂತಹ ಹಲವು ಮಾಸ್ ಡೈಲಾಗ್‌ಗಳು  ‘ಭರಾಟೆ’ ಚಿತ್ರದಲ್ಲಿ ಇರುವುದರಿಂದ ಅಭಿಮಾನಿಗಳು, ನೋಡುಗರಿಗೆ ಖುಷಿ ಕೊಡುತ್ತದೆ. ಸರಳ ಕತೆಯನ್ನು  ಹೀಗೂ ಹೇಳಬಹುದೆಂದು ನಿರ್ದೇಶಕ ಚೇತನ್‌ಕುಮಾರ್ ಮೂರನೇ ಬಾರಿ ನಿರೂಪಿಸುವಲ್ಲಿ ಸಪಲರಾಗಿದ್ದಾರೆ. ಯೋಗ, ಬುದ್ದ, ಓಂಕಾರ ಇವೆಲ್ಲವು ಸನ್ನಿವೇಶಕ್ಕೆ ಪೂರಕವಾಗಿ ಬಂದು ಹೋಗುತ್ತದೆ.  ದೈವರಾಧನೆ, ಒಳ್ಳೆಯತನ, ರೈತರ ಕಾಳಜಿ, ಕನ್ನಡ ಪ್ರೇಮ ಎಲ್ಲರೂ ಚೆನ್ನಾಗಿರಬೇಕೆಂದು ಬಯಸುವ ಗುಣ, ಪಾಳೇಗಾರಿಕೆ ಇವೆಲ್ಲವು ಸಾಕ್ಷಿಭೂತರಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಕಾಣಿಸಿಕೊಂಡು ಹೋಗುವ ಶಕ್ತಿ ನಿರ್ದೇಶಕರಿಗೆ ಇದೆ ಎಂದು ಸಾಬೀತು ಮಾಡಿದ್ದಾರೆ.

        ಶ್ರೀಮುರಳಿ ಶಾಂತಿಸ್ವರೂಪ, ಉಗ್ರಸ್ವರೂಪ ಹೀಗೆ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಶ್ರೀಲೀಲಾ ಸುಂದರ ಬೊಂಬೆಯಂತೆ  ಲವಲವಿಕೆಯಿಂದ ನಟಿಸಿದ್ದಾರೆ. ಚಂದನವನಕ್ಕೆ ಸುಂದರ ನಟಿ ಸಿಕ್ಕಿದ್ದಾರೆ ಎನ್ನಬಹುದು. ಎಣಿಸಲಾಗದಷ್ಟು ಪೋಷಕ ಕಲಾವಿದರು ಇರುವುದು ವಿಶೇಷ. ಅದರಲ್ಲೂ ಸಾಯಿಕುಮಾರ್,ರವಿಶಂಕರ್, ಅಯ್ಯಪ್ಪಶರ್ಮ ಸೋದರರು ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ.   ಮುಗ್ದ ಅಮ್ಮ ತಾರ, ಅಪ್ಪ ಸುಮನ್  ಗಮನ ಸೆಳೆಯುತ್ತಾರೆ. ಖಳರುಗಳಾಗಿ ಪೆಟ್ರೋಲ್ ಪ್ರಸನ್ನ, ಶರತ್‌ಲೋಹಿತಾಶ್ವ, ಡ್ಯಾನಿಕುಟ್ಟಪ್ಪ, ಮನಮೋಹನ್‌ರೈ ಮುಂತಾದವರು ಹಾಗೆ ಬಂದು ಮಾಯವಾಗುತ್ತಾರೆ.  ರಚಿತಾರಾಮ್ ಓಷದಿಯಂತೆ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್‌ಜನ್ಯಾ ಸಂಗೀತ, ಚೇತನ್‌ಕುಮಾರ್ ಸಾಹಿತ್ಯದ ಹಾಡುಗಳಲ್ಲಿ ಎರಡು ಕೇಳಬಹುದು,ನೋಡಬಹುದು. ಪ್ರತಿಯೊಂದು ದೃಶ್ಯವು ಶ್ರೀಮಂತವಾಗಿದೆ, ಇದಕ್ಕೆ ಹೊಂದಿಕೊಂಡಂತೆ ಹಿನ್ನಲೆ ಸಂಗೀತ, ಛಾಯಾಗ್ರಹಣ  ಆಪ್ತವಾಗುತ್ತದೆ.  ಇದೆಲ್ಲಾ ಫಲಿತಾಂಶಕ್ಕೆ ನೀರಿನಂತೆ ಖರ್ಚು ಮಾಡಿರುವ ಸುಪ್ರಿತ್ ಧೈರ್ಯವನ್ನು ಮೆಚ್ಚಲೇಬೇಕಾಗಿದೆ.  

 

Copyright@2018 Chitralahari | All Rights Reserved. Photo Journalist K.S. Mokshendra,