Andavada.Film Review.

Friday, October 25, 2019

                       

ಅಂದದ ಪಯಣದಲ್ಲಿ ಸೋಜಿಗದ ತಿರುವುಗಳು

      ‘ಅಂದವಾದ’ ಚಿತ್ರದ ಹೆಸರಿನಂತೆ ಕತೆಯು ಅಷ್ಟೇ ಅಂದವಾಗಿ ಸಾಗುತ್ತದೆ.  ನಿರೀಕ್ಷೆ ಇಲ್ಲದೆ ಅಚ್ಚರಿಯ ದೃಶ್ಯಗಳು ನೋಡುಗರಿಗೆ ಅಂದ ತರಿಸುತ್ತದೆ.  ಹಚ್ಚ ಹಸಿರಿನ ಊರು. ಬಾಲ್ಯದಲ್ಲೇ ಸ್ನೇಹಿತರಾಗುವ ಹುಡುಗ-ಹುಡುಗಿ. ಎಲ್ಲರಿಗೂ  ಇವಳು ಅಪಾಯಕಾರಿ. ಆತನಿಗೆ ಮಾತ್ರ ಏನೋ ಒಂಥರ ಆಕರ್ಷಣೆ. ಮುಂದೆ ಅಪ್ಪನೊಂದಿಗೆ ಊರು ಬಿಟ್ಟುಬರುತ್ತಾನೆ. ಹತ್ತು ವರ್ಷದ ನಂತರ ಅದೇ ಹುಡುಗಿಯನ್ನು ಹುಡುಕುತ್ತಾನೆ. ಒಮ್ಮೆ ಸಿಕ್ಕು, ತನ್ನ ಪ್ರೀತಿಯನ್ನು ಹೇಳಬೇಕು ಎನ್ನುವಷ್ಟರಲ್ಲಿ ವಿದೇಶಕ್ಕೆ ಹೋಗುತ್ತೇನೆ ಎಂದವಳು ಆಸ್ಪತ್ರೆಯಲ್ಲಿ ಇರುತ್ತಾಳೆ. ಆಗ ಕತೆ ಮತ್ತೋಂದು ಮಗ್ಗಲಿಗೆ ತೆಗೆದುಕೊಂಡು ಹೋಗುತ್ತದೆ. ಇಲ್ಲಿಂದ ಮೆಡಿಕಲ್ ಮಾಫಿಯಾ ತೆರೆದುಕೊಳ್ಳುತ್ತದೆ.  ಅವಳು ಸುಳ್ಳು ಕತೆ ಹೇಳಿ ದೂರ ಇರುವ ಹುಡುಗಿಯ ಜೀವನದ ಹಿಂದಿನ ಗುಟ್ಟೇನು? ತಾನು ಎಲಿಯನ್ ಅಂತ ಹೇಳಿಕೊಂಡು ಓಡಾಡುವುದು ಯಾಕೆ. ಇವೆಲ್ಲಾ ಅಂಶಗಳು ಸನ್ನಿವೇಶಗಳ ಮೂಲಕ ಬಿಚ್ಚಿಟ್ಟು ಕೊಳ್ಳುತ್ತದೆ.   ಪ್ರಾರಂಭದಲ್ಲಿ ಆಮೆ  ನಡೆಯಂತೆ ಇದ್ದರೂ ಸುಂದರ ತಾಣಗಳು ಅವೆಲ್ಲವನ್ನು ಮರೆಸುತ್ತವೆ.

      ಕಥಾ ನಾಯಕ ಜೈಗೆ ನಟನೆ ಹೊಸ ಅನುಭವ. ಆದರೂ ಅದನ್ನು ಕ್ಯಾಮಾರು ಮುಂದೆ ತೋರಿಸಿಲ್ಲ. ಸುಳ್ಳು ಹೇಳುವ ಅನುಷಾರಂಗನಾಥ್ ನಾಯಕಿಯಾಗಿ ಗಮನ ಸೆಳೆಯುತ್ತಾರೆ. ಉಳದಂತೆ ಹರೀಶ್‌ರೈ, ಶ್ರೀಧರ್ ಇರುವಿಕೆಯಷ್ಟು  ನೋಡುಗರಿಗೆ ಇಷ್ಟವಾಗುತ್ತಾರೆ. ವಿಕ್ರಮ್‌ಆರ್ಯನ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಇದಕ್ಕೆ ಪೂರಕವಾಗಿ ಗುರುಕಿರಣ್ ಹಿನ್ನಲೆ ಶಬ್ದ ಆಸಕ್ತಿ ಹುಟ್ಟಿಸುತ್ತದೆ.  ಬ್ಯಾಂಕಾಕ್, ಸಕಲೇಶಪುರದಲ್ಲಿ ಚಿತ್ರೀಕರಿಸಿರುವ ಎರಡು ಗೀತೆಗಳು ನೋಡಲು ಖುಷಿ ಕೊಡುತ್ತದೆ. ರಚನೆ,ನಿರ್ದೇಶನ ಮಾಡಿರುವ ಚಲ ಪ್ರಯತ್ನ ಪರವಾಗಿಲ್ಲ. ಹರೀಶ್.ಎನ್.ಸೊಂಡೇಕೊಪ್ಪ ಮಲೆನಾಡಿನ ಸೊಬಗನ್ನು ಚೆನ್ನಾಗಿ ತೋರಿಸಿದ್ದಾರೆ. ಡಿ.ಆರ್.ಮಧು.ಜಿ.ರಾಜ್ ನಿರ್ಮಾಣ ಮಾಡಿರುವ ಚಿತ್ರವು ಅಂದವಾಗಿದೆ ಎಂದು ಹೇಳಬಹುದು.

 

Copyright@2018 Chitralahari | All Rights Reserved. Photo Journalist K.S. Mokshendra,