ಮೆಡಿಕಲ್ ಮಾಫಿಯಾ ಸುತ್ತ ಭ್ರಮೆಯ ಹುತ್ತ..
ಕುಂದಾಪುರದಲ್ಲಿ ನಡೆದಂಥ ನೈಜ ಘಟನೆಯೊಂದನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ ಭ್ರಮೆ. ಹಿರಿಯ ನಿರ್ದೇಶಕ ತಿಪಟೂರು ರಘು ಅವರ ಪುತ್ರ ನವೀನ್ ಈ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಹಾರರ್ ಕಾಮಿಡಿ ಸಬ್ಜೆಕ್ಟ್ ಇರುವ ಈ ಚಿತ್ರಕ್ಕೆ ಚರಣರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಂಜನಾಗೌಡ ಹಾಗೂ ಇಶಾನಾ ನಾಯಕಿಯರು. ಈ ಚಿತ್ರದ ಟ್ರೈಲರ್ ಬಿಡುಗಡೆ ಸೆ.5ರ ಶಿಕ್ಷಕರ ದಿನಾಚರಣೆಯಂದು ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಭಗವಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದಭರ್Àದಲ್ಲಿ ಮಾತನಾಡಿದ ನಿರ್ದೇಶಕ ಚರಣರಾಜ್ ಕುಂದಾಪುರದಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಪ್ರೇರಣೆ. ಚಿತ್ರದ ನಾಯಕ ಆಸ್ಪತ್ರೆಯೊಂದರಲ್ಲಿ ಮೇಲ್‍ನರ್ಸ್. ನವೆಂಬರ್ ಒಂದರ ಕನ್ನಡ ರಾಜ್ಯೊತ್ಸವದಂದು ನಮ್ಮಫ್ಲಿಕ್ಟ್ ಎಂಬ ಓಟಿಟಿ ಪ್ಲಾಟ್‍ಫಾರಂ ಮೂಲಕ ಚಿತ್ರವನ್ನು ಬಿಡುಗಡೆ ಮಾಡುತ್ತಿz್ದÉೀವೆ. ಆನ್‍ಲೈನ್‍ನಲ್ಲಿ 99ರೂ.ಗಳನ್ನು ಪಾವತಿಸಿ ಟಿಕೆಟ್ ಖರೀದಿಸಿ, ಅದರಲ್ಲಿರುವ ನಂಬರ್ ಸ್ಕ್ರ್ಯಾಚ್ ಮಾಡಿ ಆ ನಂಬರನ್ನು ನಮ್ಮಫ್ಲಿಕ್ಸ್ ಆಪ್‍ನಲ್ಲಿ ಎಂಟ್ರಿ ಮಾಡಿದರೆ ಚಿತ್ರ ಅನ್ಲಾಕ್ ಆಗುತ್ತದೆ. ಕಂಪ್ಯೂಟರ್ ಅಲ್ಲದೆ ತಮ್ಮ ಮೊಬೈಲಿನಲ್ಲಿ ಕೂಡ ನಮ್ಮ ಚಿತ್ರವನ್ನು ವೀಕ್ಷಿಸಬಹುದು ಎಂದು ಹೇಳಿದರು.
ಚಿತ್ರದ ನಾಯಕ ನವೀನ್ ಮಾತನಾಡಿ ತಂದೆಯವರು ಒಬ್ಬ ನಿರ್ದೇಶಕರಾಗಿರುವುದು, ನನಗೆ ಮನೆಯಲ್ಲೇ ಕಲಿಯುವ ಅವಕಾಶ ಕಲ್ಪಿಸಿತು. ಭಗವಾನ್ ಸರ್ ಅವರ ಜೊತೆ ಇನ್‍ಸ್ಟಿಟ್ಯೂಟ್‍ನಲ್ಲಿ ಟ್ರೈನಿಂಗ್ ಪಡೆದೆ. ಇದೊಂದು ಹಾರರ್ ಕಾಮಿಡಿ ಚಿತ್ರ. ಡಾ. ವಿ.ನಾಗೇಂದ್ರಪ್ರಸಾದ್ ಅವರು ಹಾಡು ಬರೆದು ಸಂಗೀತ ಸಂಯೋಜನೆ ಮಾಡಿಕೊಟ್ಟಿದ್ದಾರೆ. ನನ್ನ ಸಹೋದರಿಯೇ ಈ ಚಿತ್ರದಲ್ಲಿ ಸಹನಿದೇಶಕಿಯಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಾಯಕಿ ಅಂಜನಾಗೌಡ ಮಾತನಾಡಿ ಕೋವಿಡ್‍ನಂಥ ಸಂದರ್ಭದಲ್ಲೂ ಈ ಕಾರ್ಯಕ್ರಮ ನಡೆಯುತ್ತಿರುವುದು ಹೊಸ ಆಶಾಕಿರಣ ಮೂಡಿಸಿದೆ. ಒಂದೇ ಮನೆಯವರ ಥರ ಸೇರಿ ಎಲ್ಲರೂ ಕೆಲಸ ಮಾಡಿz್ದÉೀವೆ. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಅವಕಾಶ ಕಮ್ಮಿ ಇದ್ದರೂ ನೋಡುಗರ ನೆನಪಲ್ಲುಳಿಯುತ್ತದೆ ಎಂದು ಹೇಳಿದರು. ಮತ್ತೊಬ್ಬ ನಾಯಕಿ ಇಶಾನಾ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದೇ ನವೆಂಬರ‍್ನಲ್ಲಿ ರಿಲೀಸ್ ಆಗುತ್ತಿದೆ ಎಂದರು. ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಪವನ್ ಮಾತನಾಡಿ ಇದು ನೈಜ ಘಟನೆ ಇಟ್ಟುಕೊಂಡು ಮಾಡಿರುವ ಚಿತ್ರ. ನನ್ನದು ಹಾಸ್ಪಿಟಲ್‍ನಲ್ಲಿ ಅಟೆಂಡರ್ ಪಾತ್ರ. ತುಂಬಾ ಕಾಮಿಡಿಯಾಗಿದೆ ಎಂದು ಹೇಳಿಕೊಂಡರು. ಗೀತಾ ಆರ್. ಪಟ್ಟಣಶೆಟ್ಟಿ ಹಾಗೂ ರವಿಕಿರಣ್ ಶೆಟ್ಟಿ ಸೇರಿ ವೀರಪುತ್ರ ಚಿತ್ರದ ಪೆÇೀಸ್ಟರ್ ರಿಲೀಸ್ ಮಾಡಿದರು. ಚಿತ್ರತಂಡ ಟಿಕೆಟ್ ಖರೀದಿಸಿದವರಿಗೆ ಕಾರು, ಬೈಕ್ ಹೀಗೆ ಹಲವಾರು ಬಹುಮಾನಗಳನ್ನು ಇಟ್ಟಿದೆ. ಅಲ್ಲದೆ ಪತ್ರಕರ್ತರಿಗಾಗಿಯೇ ವಿಶೇಷ ಟಿಕೆಟ್ ಡ್ರಾ ಏರ್ಪಡಿಸಲಾಗಿತ್ತು. ವಿಜೇತರನ್ನು ನಿರ್ದೇಶಕ ಭಗವಾನ್ ಅವರೇ ಆಯ್ಕೆ ಮಾಡಿದರು.
ನಮ್ಮ ಫ್ಲಿಕ್ಸ್‍ನ ವಿಜಯಪ್ರಕಾಶ್ ಮಾತನಾಡಿ ನಮ್ಮ ಫ್ಲಿಕ್ಸ್‍ನಲ್ಲಿ ಪ್ರೀಮಿಯರ್ ಆಗುತ್ತಿರುವ ಮೊದಲ ಕನ್ನಡ ಚಿತ್ರವಿದು. ನಿರ್ಮಾಪಕರು ರಿಲೀಸ್‍ಹಾಗಿ ಖರ್ಚುಮಾಡುವ ಹಣವನ್ನೇ ನಾವು ಪ್ರೇಕ್ಷಕರಿಗೆ ಬಹುಮಾನದ ರೂಪದಲ್ಲಿ ನೀಡುತ್ತಿz್ದÉೀವೆ ಎಂದು ಹೇಳಿದರು. ಕಾಮಿಡಿ ಕಿಲಾಡಿಗಳು ಮುತ್ತುರಾಜ್ ಹಾಗೂ ಗಾಯಕ ಹರ್ಷ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.