Kasturi Mahal.Film News

Saturday, September 26, 2020

361

ಕಸ್ತೂರಿ ಮಹಲ್ ನಲ್ಲಿ ಶಾನ್ವಿ ಶ್ರೀವಾಸ್ತವ್.

 

ಕಸ್ತೂರಿ ನಿವಾಸ ಶೀರ್ಷಿಕೆಯೊಂದಿಗೆ ಆರಂಭವಾದ ಈ ಚಿತ್ರ ಡಾ||ರಾಜ್ ಕುಟುಂಬ ಹಾಗೂ ಅಭಿಮಾನಿಗಳ ಮೇಲಿರುವ ಗೌರವದಿಂದ ಕಸ್ತೂರಿ ಮಹಲ್ ಎಂದು ಹೆಸರು ಬದಲಿಸಿದ್ದು ಎಲ್ಲರಿಗೂ ತಿಳಿದ ವಿಷಯ.

ಈ ಚಿತ್ರದ ನಾಯಕಿಯಾಗಿ ಮೊದಲು ರಚಿತಾರಾಂ ಆಯ್ಕೆಯಾಗಿದ್ದರು. ಕಾರಣಾಂತರದಿಂದ ರಚಿತಾರಾಂ ಚಿತ್ರತಂಡದಿಂದ ಹೊರನಡೆದಿದ್ದು, ಈಗ ಕಸ್ತೂರಿ ಮಹಲ್ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ಆಯ್ಕೆಯಾಗಿದ್ದಾರೆ.

 ಹಾರಾರ್ ಥ್ರಿಲ್ಲರ್ ‌ಕಥಾಹಂದರ ಹೊಂದಿರುವ ‌ಈ‌ ಚಿತ್ರವನ್ನು ‌ಖ್ಯಾತ ನಿರ್ದೇಶಕ ದಿನೇಶ್ ಬಾಬು ‌ನಿರ್ದೇಶಿಸುತ್ತಿದ್ದಾರೆ. ಅವರೆ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ.

ಅಕ್ಟೋಬರ್ 5ರಿಂದ ಕಸ್ತೂರಿ ಮಹಲ್‌ ಗೆ ಕೊಟ್ಟಿಗೆಹಾರದಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

 ಶ್ರೀಭವಾನಿ‌ ಆರ್ಟ್ಸ್ ಹಾಗೂ

ರುಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀಶ್ ಆರ್ ಸಿ  ಹಾಗೂ ರುಬಿನ್ ರಾಜ್ ಅವರು ನಿರ್ಮಿಸುತ್ತಿರುವ‌ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಸೌಂದರ್ ರಾಜ್ ಅವರ ಸಂಕಲನವಿದೆ.

ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಶೃತಿ ಪ್ರಕಾಶ್, ಕಾಶಿಮಾ,

ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,