ಕ್ಯಾನ್ಸರ್ ರೋಗಿಗಳಿಗೆ ಚಿತ್ರದ ಗಳಿಕೆ ಹಣ
೮೦ರ ದಶಕದಲ್ಲಿ ‘ಬೆಂಕಿಯ ಬಲೆ’ ಸಾಂಸರಿಕ ಸಿನಿಮಾ ತರೆಕಂಡು ಹಿಟ್ ಆಗಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ತೆರೆಗೆ ಬರಲು ಕಾರ್ಯನಿರತವಾಗಿದೆ. ಇದರಲ್ಲಿ ಹಲವು ವಿಶೇಷತೆಗಳು ಕೂಡಿದೆ. ಕತೆ,ಚಿತ್ರಕತೆ, ಸಾಹಿತ್ಯ, ನಿರ್ಮಾಪಕ,ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ಮೈಸೂರಿನ ಶಿವಾಜಿ ಹೇಳುವುದಿಷ್ಟು: ನನಗೆ ಯಾವುದೇ ರೀತಿಯ ಚಿತ್ರರಂಗದ ಅನುಭವವಿಲ್ಲ. ಸ್ಕ್ರಿಪ್ಟ್ ಬರೆದುಕೊಂಡಿಲ್ಲ. ಶೂಟಿಂಗ್ ಜಾಗಕ್ಕೆ ಹೋದಾಗ ಅಲ್ಲಿಯೇ ನಾನು ಈ ಡೈಲಾಗ್ ಹೇಳುತ್ತೇನೆ. ನೀವು ಇದನ್ನು ಹೇಳಿ ಎಂದು ಮಾತನಾಡಿಕೊಂಡು ಚಿತ್ರೀಕರಿಸಿದ್ದೇವೆ. ಒಂದು ಬ್ಲಾಕ್ ಮ್ಯಾಜಿಕ್ ಕ್ಯಾಮರಾ ಎರಡು ಥರ್ಮಾಕೋಲ್ ಬಳಸಲಾಗಿ, ನಮಗೆ ಬೇಕಾದಂತೆ ಚಿತ್ರೀಕರಿಸಲಾಗಿದೆ. ನನ್ನದೆ ಕತೆಯಾಗಿದ್ದರಿಂದ ಏನು ಮಾಡಬೇಕೆಂದು ಮುಂಚೆಯೆ ತಿಳಿದುಕೊಂಡು, ಅದರಂತೆ ಮುಂದುವರೆದೆ. ಅದಕ್ಕೆ ಕಲಾವಿದರು ಪ್ರೋತ್ಸಾಹ ನೀಡಿದರು. ಹುಡುಗಿ ಕೈಕೊಟ್ಟಾಗ ಬೇಸರದಲ್ಲಿ ದುಶ್ಚಟಕ್ಕಾಗಿ ಬೀಳುವ ಹುಡುಗರಿಗೆ ಸಂದೇಶವನ್ನು ಹೇಳಲಾಗಿದೆ. ಸೆನ್ಸಾರ್‌ನವರು ಯುಎ ಪ್ರಮಾಣಪತ್ರ ನೀಡಿದ್ದಾರೆ.
ಇನ್ನು ಚಿತ್ರದ ಗಳಿಕೆ ಹಣ ಕುರಿತಂತೆ ನಿರ್ಮಾಪಕರು ಮಾಹಿತಿ ಹಂಚಿಕೊಂಡರು. ಸಿನಿಮಾವನ್ನು ೫೦ ಕೇಂದ್ರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ೮೦ ಲಕ್ಷ ಖರ್ಚಾಗಿದೆ. ಗಳಿಕೆ ಹಣವನ್ನು ತೆಗೆದುಕೊಳ್ಳದೆ ನೇರವಾಗಿ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುವುದು. ಅಮ್ಮ ಇದೇ ಖಾಯಿಲೆಯಿಂದ ಚಿಕಿತ್ಸೆ ಸಿಗದೆ ಮರಣ ಹೊಂದಿದ್ದರು. ಅವರ ಕಷ್ಟ ಬೇರೆಯವರಿಗೆ ಬರಬಾರದೆಂದು ಇಂತಹ ನಿರ್ಣಯ ತೆಗೆದುಕೊಳ್ಳಲಾಗಿದೆ. ಪ್ರೀತಿಮಡಕೇರಿ ನಾಯಕಿ. ಪ್ರಿಯಾಪಾಂಡೆ, ಪವಿತ್ರಾ, ಸುಮಾಗೌಡ ಮುಂತಾದವರು ನಟಿಸಿದ್ದಾರೆ. ಸಿನಿಮಾವು ಹಿಂದಿ ಮತ್ತು ತಮಿಳು ಭಾಷೆಗೆ ಡಬ್ ಆಗಲಿದೆ. ಮುಂದೆ ಕ್ರೈಂ, ಮಾಫಿಯ ಕುರಿತಾದ ‘ಮಂಡ್ಯಾ ಟು ಸಿಂಗಾಪುರ್’ ಸಿನಿಮಾ ಬರಲಿದೆ ಎಂದರು.