ಪ್ರೇಕ್ಷಕರ ಒತ್ತಾಯದ ಮೇರೆಗೆ ಲವ್ ಮಾಕ್ಟೈಲ್ ಮರುಬಿಡುಗಡೆ
ಜನವರಿ ತಿಂಗಳಲ್ಲಿ ಬಿಡುಗಡೆಗೊಂಡ ‘ಲವ್ ಮಾಕ್‌ಟೇಲ್’ ಚಿತ್ರವು ಮೊದಲ ಎರಡು ವಾರಗಳು ಗಳಿಕೆಯಲ್ಲಿ ಕಡಿಮೆ ಬಂದಿತ್ತು. ವಿಚಲಿತರಾಗದ ನಾಯಕ,ನಿರ್ದೇಶಕ ಮತ್ತು ನಿರ್ಮಾಪಕ ಕೃಷ್ಣ ತಂಡದೊಂದಿಗೆ ಚಿತ್ರಮಂದಿರಗಳಿಗೆ ಭೇಟಿ ನೀಡಿರುವುದರ ಪರಿಣಾಮ ಸಿನಿಮಾವು ಒಂದು ಹಂತಕ್ಕೆ ನಿಂತುಕೊಂಡಿತ್ತು. ಮುಂದೆ ಯಶಸ್ವಿಯಾಗಿ ೫೦ದಿನ ಪೂರೈಸುತ್ತದೆ ಎಂದು ಆಶಾಭಾವನೆಯಲ್ಲಿ ಇದ್ದ ತಂಡಕ್ಕೆ ಕರೋನದಿಂದ ಎಲ್ಲವು ನಿರಾಸೆ ಆಯಿತು. ಕೊನೆಗೆ ಓಟಿಟಿದಲ್ಲಿ ಪ್ರಸಾರಗೊಂಡು ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನರು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು. ಒಂದಷ್ಟು ಮಂದಿ ಚಿತ್ರವು ಇಷ್ಟವಾಗಿ ಟಿಕೆಟ್ ಹಣವನ್ನು ನಿರ್ಮಾಪಕರ ಖಾತೆಗೆ ವರ್ಗ ಮಾಡಿದ್ದರು.
ಪ್ರಸಕ್ತ ಲಾಕ್‌ಡೌನ್ ನಿಯಮವನ್ನು ಸಡಿಲ ಮಾಡಿ ಚಿತ್ರಮಂದಿರ ತೆರೆಯಲು ಸರ್ಕಾರವು ಆದೇಶ ಹೊರಡಿಸಿದೆ. ಇದರಿಂದ ವಿತರಕ ಜಾಕ್‌ಮಂಜು, ಕೃಷ್ಣ, ನಾಯಕಿ-ನಿರ್ಮಾಪಕಿ ಮಿಲನನಾಗರಾಜು ಧೈರ್ಯ ಮಾಡಿ ಅಕ್ಟೋಬರ್ ೧೬ರಂದು ಮರುಬಿಡುಗಡೆ ಮಾಡಲು ಯೋಜನೆ ಸಿದ್ದಪಡಿಸಿದ್ದಾರೆ. ತಾರಗಣದಲ್ಲಿ ಅಮೃತಅಯ್ಯಂಗಾರ್,ರಚನಾ, ಧನುಷ್‌ಪ್ರಣಾಮ್, ಅಭಿಲಾಷ್ ಜೊತೆಗೆ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ರಾಘವೇಂದ್ರಕಾಮತ್-ಅರುಣ್‌ಕುಮಾರ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ರಘುದೀಕ್ಷಿತ್ ಸಂಗೀತವಿದೆ. ಶ್ರೀಕ್ರೇಜಿ ಮೈಂಡ್ಸ್ ಸಂಕಲನದ ಜೊತೆಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿದ್ದಾರೆ.