ಚಂದನವನದ ಇತಿಹಾಸ ಒಳಗೊಂಡ ಚಲನಚಿತ್ರ ಭಂಡಾರ
೮೪ ವರ್ಷದ ಇತಿಹಾಸವಿರುವ ಕನ್ನಡ ಚಿತ್ರರಂಗದ ವಿವರಗಳು ಮುಂದಿನ ಪೀಳಿಗೆಗೆ ತಿಳಿಯುವಂತೆ ಮಾಡುವ ಸಲುವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯು ‘ಚಲನಚಿತ್ರ ಭಂಡಾರ’ ಸ್ಥಾಪಿಸಲು ಯೋಜನೆ ಕೈಗೊಂಡಿದೆ. ಇದಕ್ಕಾಗಿ ಆರ್ಥಿಕ ನೆರವನ್ನು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವನ್ನು ಕೋರಲಾಗಿತ್ತು. ಪ್ರಾಧಿಕಾರವು ಅಕಾಡೆಮಿ ಕೋರಿಕೆಗೆ ಸ್ಪಂದಿಸಿದ್ದು ಭಂಡಾರ ಸ್ಥಾಪನೆಗೆ ಒಂದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದೊಂದು ಅಕಾಡೆಮಿಯ ಬಹುದಿನದ ಕನಸು ಈಗ ನನಸಾಗುತ್ತಿದೆ ಎಂದು ಅಧ್ಯಕ್ಷ ಸುನಿಲ್‌ಪುರಾಣಿಕ್ ಸುದ್ದಿಗೋಷ್ಟಿಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಸದರಿ ಹಣವನ್ನು ನಿಶ್ವಿತ ಠೇವಣಿಯಲ್ಲಿ ತೊಡಗಿಸಿ, ಇದರಿಂದ ಬರುವ ಬಡ್ಡಿ ಹಣದಿಂದ ಭಂಡಾರದ ನಿರ್ವಹಣೆ ಮಾಡಲು ಇಬ್ಬರಿಂದಲೂ ಕರಾರು ಒಪ್ಪಂದ ಆಗಿರುತ್ತದೆ.
ಭಂಡಾರವನ್ನು ಯಾವ ರೀತಿ ಸಜ್ಜುಗೊಳಿಸಬೇಕು ಎಂಬುದರ ಅಭಿಪ್ರಾಯಕ್ಕಾಗಿ ಈ ಕ್ಷೇತ್ರದಲ್ಲಿ ಪರಿಣಿತರಿರುವ ಹಿರಿಯ ಪತ್ರಕರ್ತ ಮುರುಳಿಧರಖಜಾನೆ, ಅಂತರರಾಷ್ತ್ರೀಯ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್, ಇತಿಹಾಸಕಾರ ಸುರೇಶ್‌ಮೂನ, ಕಲಾ ನಿರ್ದೇಶಕ ಅರುಣ್‌ಸಾಗರ್ ಮತ್ತು ನಿರ್ದೇಶಕ ಅಶೋಕ್‌ಕಶ್ಯಪ್ ಸಮಿತಿಯಲ್ಲಿ ಇರುತ್ತಾರೆ. ನಂದಿನಿ ಲೇಒಔಟ್‌ದಲ್ಲಿರುವ ಅಕಾಡಿಮಿ ಕಚೇರಿ ಇರುವ ಕನ್ನಡ ಚಲನಚಿತ್ರ ಅಮೃತೋತ್ಸವ ಭವನದ ನೆಲ ಮಹಡಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.