ಯುಎಫ್‌ಓ ಕ್ಯೂಬ್ಗೆ ಎರಡು ವರ್ಷ ಶುಲ್ಕ ಬೇಡ
ಸರ್ಕಾರವು ಚಿತ್ರ ಪ್ರದರ್ಶಿಸಲು ಅನುಮತಿ ನೀಡಿದೆ. ಆದರೆ ಯುಎಫ್‌ಓ ಕ್ಯೂಬ್‌ಗೆ ವೆಚ್ಚ ಭರಿಸಲು ನಿರ್ಮಾಪಕರ ಬಳಿ ಹಣವಿಲ್ಲ. ಆದಕಾರಣ ಕ್ಯೂಬ್ ಸಂಸ್ಥೆಯವರು ಎರಡು ವರ್ಷಗಳ ಕಾಲ ನಿರ್ಮಾಪಕರ ಬಳಿ ಹಣ ಕೇಳಬಾರದು. ಈ ಮೂಲಕ ಚಿತ್ರ ಪ್ರದರ್ಶಿಸಲು ಅನುವು ಮಾಡಿಕೊಡಬೇಕು ಎಂದು ನಿನ್ನೆ ನಡೆದ ಸಭೆಯಲ್ಲಿ ನಿರ್ಮಾಪಕರು ಬೇಡಿಕೆ ಇಟ್ಟಿದಾರೆಂದು ಸಂಘದ ಅಧ್ಯಕ್ಷ ಪ್ರವೀಣ್‌ಕುಮಾರ್ ಸುದ್ದಿಗೋಷ್ಟಿಯಲ್ಲಿ ವಿಚಾರ ತಿಳಿಸಿದರು.
ವಾಣಿಜ್ಯ ಮಂಡಳಿ ಮುಂದೆ ಸುಮಾರು ೨೮೦ ಚಿತ್ರಗಳು ಬಿಡುಗಡಗೆ ಸಿದ್ದವಾಗಿದೆ. ಅದರಲ್ಲಿ ಸುಮಾರು ಹದಿನೈದು ಸ್ಟಾರ್ ಸಿನಿಮಾಗಳು. ಸ್ಥಳಿಯ ಕ್ಯೂಬ್ ಅಧಿಕಾರಿಗಳನ್ನು ಕರೆಸಿ, ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಅವರಿಂದ ಕ್ಯೂಬ್ ವೆಚ್ಚವನ್ನು ತೆಗೆದುಕೊಳ್ಳಬಾರದೆಂದು ಮನವಿ ಮಾಡಲಾಯಿತು. ಇಲ್ಲಿ ನಮ್ಮದೇನು ಪಾತ್ರವಿಲ್ಲ. ಯಾವುದೇ ನಿರ್ಣಯವನ್ನು ಬಾಂಬೆಯವರು ತೆಗೆದುಕೊಳ್ಳುತ್ತಾರೆಂದು ತಿಳಿಸಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ, ನಾಲ್ಕು ಬಾರಿ ಮೇಲ್ ಮಾಡಲಾಗಿದೆ. ಇನ್ನು ಉತ್ತರ ಬಂದಿಲ್ಲ. ಅವರಿಂದ ಸೂಕ್ತ ಸ್ಪಂದನೆ ಸಿಗದೆ ಹೋದರೆ, ಅನಿವಾರ್ಯವಾಗಿ ಸರ್ಕಾರದ ಮೊರೆ ಹೋಗಬೇಕಾಗುತ್ತದೆ.
ಅಲ್ಲಿಯವರೆಗೂ ಹೊಸ ಚಿತ್ರಗಳ ಬಿಡುಗಡೆ ಅಸಾಧ್ಯ ಕ್ಯೂಬ್‌ನವರು ಜಾಹಿರಾತುನಿಂದ ಸಾಕಷ್ಟ ಲಾಭ ಪಡೆದುಕೊಂಡಿದ್ದಾರೆ. ಅದರಲ್ಲಿ ಬರುವ ಲಾಭದ ಅಂಶವನ್ನು ನಮಗೆ ನೀಡಿಲ್ಲ. ಈಗಲಾದರೂ ಉಚಿತವಾಗಿ ಪ್ರದರ್ಶನ ಮಾqಲು ಅವಕಾಶ ಕಲ್ಪಿಸಿಕೊಡಬೇಕು. ಪ್ರದರ್ಶಕರು ಶೇಕಡವಾರು ಪದ್ದತಿಗೆ ಒಪ್ಪಿಕೊಂಡಿದ್ದಾರೆ. ಇದರಿಂದ ಸಮಸ್ಯೆ ಬರೋಲ್ಲ. ಸ್ಟಾರ್ ನಿರ್ಮಾಪಕರು ಇದಕ್ಕೆ ಒಪ್ಪಬೇಕಿದೆ. ಸರ್ಕಾರ ನಮ್ಮ ಪರವಾಗಿದ್ದರಿಂದ ಒಳ್ಳೆ ಫಲಿತಾಂಶ ಸಿಗುತ್ತದೆಂಬ ಆಶಾಭಾವನೆ ಇದೆ. ಚಿತ್ರ ಬಿಡುಗಡೆ ಮುನ್ನ ನಮ್ಮನ್ನು ಭೇಟಿ ಮಾಡಿ ಎಂದು ಹೊಸ ನಿರ್ಮಾಪಕರುಗಳಿಗೆ ನಿರ್ಮಾಪಕ ಕೆ.ಮಂಜು